ಉಡುಪಿ ಪೌರ ಕಾರ್ಮಿಕರಿಗೆ ದೌರ್ಜನ್ಯ: ಕ್ರಮಕ್ಕೆ ಜಯನ್ ಮಲ್ಪೆ ಆಗ್ರಹ
ಉಡುಪಿ; ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಪೌರ ಕಾರ್ಮಿಕರಿಗೆ ದೌರ್ಜನ್ಯ ನಡೆಸುತ್ತಿರುವ ಉಡುಪಿ ನಗರಸಭೆಯ ಆರೋಗ್ಯ ಸಹಾಯಕ ಮತ್ತು ಪರಿಸರ ಅಭಿಯಂತರರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ,ದಲಿತ ಚಿಂತಕ ಜಯನ್ ಮಲ್ಪೆ ಆಗ್ರಹಿಸಿದ್ದಾರೆ.
ನಾಡಿನ ಬೆನ್ನೆಲುಬಾಗಿ ರಕ್ಷಕರಾಗಿ ಸದಾ ಶ್ರಮಜೀವಿಗಳಾಗಿ ಸ್ವಚ್ಛತೆಯನ್ನು ಕಾಪಾಡಿಕೊಂಡು ಬರುತ್ತಿರುವ ಉಡುಪಿಯ ದಲಿತ ಪೌರ ಕಾರ್ಮಿಕರಿಗೆ ಇಲ್ಲಿನ ಅಧಿಕಾರಿ ವರ್ಗ ಪ್ರತಿನಿತ್ಯ ಮಾನಸಿಕ ಹಿಂಸೆ,ಶೋಷಣೆ ಮತ್ತು ದೌರ್ಜನ್ಯ ನಡೆಸುತ್ತಿದ್ದು, ಸಂವಿಧಾನ್ಮಾಕ ಬಡ್ತಿಮೀಸಲಾತಿಯನ್ನು ಕೂಡ ವಂಚಿಸಿರುವುದಾಗಿ ಆರೋಪಿಸಿದ್ದಾರೆ. ಕಳಪೆ ದರ್ಜೆಯ ಬೆಳಿಗಿನ ಉಪಹಾರ, ಗಂಬೂಟು, ಮಾಸ್ಕ್,ರೈನ್ ಕೋಟು ಹಾಗೂ ಇನ್ನಿತರ ಅಭದ್ರತೆಯ ಸಾಮಾಗಹ್ರಿಗಳನ್ನು ನೀಡುತ್ತಿದ್ದು,ಹಬ್ಬದ ದಿನಗಳಲ್ಲಿ,ಅನಾರೋಗ್ಯದ ಸಂದರ್ಭದಲ್ಲಿ ರಜೆ ನೀಡದೆ ಜೀತಪದ್ಧತಿಯಂತೆ ದುಡಿಸುತಿರುವ ನಗರಸಭೆಯ ಆರೋಗ್ಯ ಸಹಾಯಕರ ಮತ್ತು ಪರಿಸರ ಅಭಿಯಂತರ ಮೇಲೆ ಸೂಕ್ತ ತನಿಖೆ ನಡೆಸಿ ದಲಿತ ದೌರ್ಜನ್ಯ ಕಾಯ್ದೆಯಡಿ ಕಾನೂನುಕ್ರಮ ಕೈಗೊಳ್ಳುವಂತೆ ಜಯನ್ ಮಲ್ಪೆ ಒತ್ತಾಯಿಸಿದ್ದಾರೆ.
ರಾತ್ರಿ ಹಗಲೆನ್ನದೆ ನಗರದ ಸುತ್ತುಮುತ್ತ ಗಬ್ಬುನಾರುತ್ತಿರುವ ಕಶ್ಮಲವನ್ನು ಪ್ರತಿನಿತ್ಯಸ್ಚಚ್ಛತೆ ಮಾಡುವ ದಲಿತ ಪೌರಕಾರ್ಮಿಕರಿಗೆ ಮೂಲಭೂತ ಸೌಕರ್ಯದಿಂದ ವಂಚಿಸಿರುವ ಉಡುಪಿ ನಗರಸಭೆಯು ಸಾಮಾಜಿಕ ನ್ಯಾಯದಿಂದಲೂ ವಂಚಿಸಲಾಗಿದ್ದು,ಪೌರಕಾರ್ಮಿಕರ ನ್ಯಾಯಬದ್ದ ಬೇಡಿಕೆಯನ್ನು ತಕ್ಚಣ ಈಡೇರಿಸಬೇಕು. ಉಡುಪಿ ನಗರಸಭೆಯ ಆರೋಗ್ಯ ಸಹಾಯಕ ಮತ್ತು ಪರಿಸರ ಅಭಿಯಂತರು ದಲಿತ ಪೌರಕಾರ್ಮಿಕರಿಗೆ ನಡೆಸುತ್ತಿರುವ ದೌರ್ಜನ್ಯವನ್ನು ತಡೆಗಟ್ಟಿ ಅವರ ಭ್ರಷ್ಟಚಾರವನ್ನು ಉನ್ನತ ಮಟ್ಟದಲ್ಲಿ ತನಿಖೆ ನಡೆಸದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ದಲಿತ ಮುಖಂಡರಾದ ವಾಸುದೇವ ಮುದ್ದೂರು, ಸಂಜೀವ ಬಳ್ಕೂರು,ಗಣೇಶ್ ನೆರ್ಗಿ,ಹರಿಸ್ ಸಾಲ್ಯಾನ್, ಸತೀಶ್ ಕಪ್ಪೆಟ್ಟು,ಸಾಧು ಚಿಟ್ಪಾಡಿ,ಭಗವಾನ್,ಪ್ರಸಾದ್ ಮಲ್ಪೆ,ಸುಕೇಶ್ ಪುತ್ತೂರು,ಗುಣವಂತ ತೊಟ್ಟಂ, ಅಶೋಕ್ ನಿಟ್ಟೂರು,ಸುರೇಶ್ ಚಿಟ್ಪಾಡಿ,ಅರುಣ್ ಸಾಲ್ಯಾನ್ ಮುಂತಾದವರು ಎಚ್ಚರಿಸಿದ್ದಾರೆ.