ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ-ಆ.ಸೊಸೈಟಿ: ದಿನಸಿ ಸಾಮಗ್ರಿ ವಿತರಣೆ

ಉದ್ಯಾವರ: ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿ. ಉಡುಪಿ 2ನೇ ವರ್ಷಕ್ಕೆ ಪಾದರ್ಪಣೆಗೊಂಡ ಹಿನ್ನೆಲೆಯಲ್ಲಿ ಉದ್ಯಾವರದ ಸೈಂಟ್ ವಿನ್ಸೆಂಟ್ ಪಲ್ಲೊಟ್ಟಿ ಕಾನ್ವೆಂಟ್‌ಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಜೀವನ್ ಡಿಸೋಜವರು ಇಂತಹ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮೂಲ ಉದ್ದೇಶ ಮತ್ತು ಪ್ರೇರಣೆ ದಿ.ಫಾ ವಲೇರಿಯನ್ ಮೆಂಡೋನ್ಸ. ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಸಾಮಾಜಿಕ ಚಿಂತನೆ ಮತ್ತು ಕಾರ್ಯಕ್ರಮದ ಬಗ್ಗೆ ತಿಳಿ ಹೇಳಿ ನಮ್ಮನ್ನು ಪ್ರೇರೇಪಿಸಿದ್ದರು. ಇವರ ಅಗಲುವಿಕೆ ನಮಗೆ ತುಂಬಲಾಗದ ನಷ್ಟವಾಗಿದೆ. ಅದರ ಸಲುವಾಗಿ ಈ ಕಾರ್ಯಕ್ರಮದ ಎಲ್ಲಾ ಶ್ರೇಯಸ್ಸು ದಿ.ಫಾ ವಲೇರಿಯನ್ ಮೆಂಡೋನ್ಸ ಇವರಿಗೆ ಅರ್ಪಿಸುತ್ತೇನೆ. ಅವರಿಗೆ ಗೌರವ ಸಮರ್ಪಣೆಯಿಂದ ನಾವು ಮೊದಲು ಮಾನಸ ಪುನರ್ವಸತಿ ಕೇಂದ್ರ ಪಾಂಬೂರು ಇಲ್ಲಿನ ವಿಶೇಷ ಚೇತನ ಮಕ್ಕಳೊಂದಿಗೆ ಆಚರಿಸಿಕೊಂಡಿದ್ದು ಇಂದು ಈ ಕಾರ್ಯಕ್ರಮವನ್ನು ಇಲ್ಲಿ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸ್ಥಳೀಯ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಉದ್ಯಾವರದ ಧರ್ಮ ಗುರುಗಳಾದ ರೇ/ಫಾ/ ಅನಿಲ್ ಡಿಸೋಜ ಇವರು ಮಾತನಾಡಿ ಸಂಸ್ಥೆಯಿಂದ ಇನ್ನಷ್ಟು ಜವಾಬ್ದಾರಿಯುತ ವಾದ ಸಾಮಾಜಿಕ ಕಾರ್ಯಕ್ರಮಗಳು ಮೂಡಿ ಬರಲಿ ಎಂದು ಶುಭ ಹಾರೈಸಿದರು. ಸೈಂಟ್ ಮೇರಿಸ್ ಕ್ಯಾಥೆಡ್ರಲ್ ಬ್ರಹ್ಮಾವರ ಇಲ್ಲಿನ ಧರ್ಮ ಗುರುಗಳಾದ ಫಾ.ಲಾರೆನ್ಸ್ ಡೆವಿಡ್ ಕ್ರಾಸ್ತ ಇವರು ಮಾತನಾಡಿ ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ದಿ. ವಲೆರಿಯನ್ ಮೆಂಡೋನ್ಸ ಇವರು ನುಡಿದಂತೆ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಸಂಸ್ಥೆಯು ಬೆಳೆಯುತ್ತಾ ಇತರರನ್ನು ಬೆಳೆಸಿಕೊಂಡು ಸಾಗಲಿ ಎಂದು ಶುಭ ಹಾರೈಸಿದರು.

ಸೀಮಾ ಎಸ್ ಹಳದಿಪುರ ರವರು ಮಾತನಾಡಿ ಮಹಿಳೆಯರು ಇಂದು ಉನ್ನತ ಸ್ಥಾನವನ್ನು ಅಲಂಕರಿಸಿಕೊಂಡು ಜವಾಬ್ದಾರಿಯುತವಾಗಿ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಅವಿರತ ಪರಿಶ್ರಮದೊಂದಿಗೆ ಉನ್ನತ ಮಟ್ಟದಲ್ಲಿ ಸ್ಥಾನವನ್ನು ಅಲಂಕರಿಸಿಕೊಂಡಿದ್ದಾರೆ. ಇಂದು ಚಪ್ಪಾಳೆ ತಟ್ಟುವ ಕೈಗಳು ಮುಂದೆ ಚಪ್ಪಾಳೆಯನ್ನು ಗಿಟ್ಟಿಸಿಕೊಳ್ಳುವುದೇ ಸಾಧನೆ. ಎಂದು ಸಂಸ್ಥೆಯ ವಿದ್ಯಾರ್ಥಿನಿಯರಿಗೆ ಕಿವಿ ಮಾತು ತಿಳಿಸಿದರು. ನೇರಿ ಕಾರ್ನೆಲಿಯೊ ಸಂಸ್ಥೆಯ ಸದಸ್ಯರಾದ ಹಾಗೂ ನಿವೃತ್ತ ಪ್ರಾಂಶುಪಾಲರು ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ಇವರು ಮಾತನಾಡಿ ಸಂಸ್ಥೆಯು ಎರಡನೇ ವರ್ಷಕ್ಕೆ ಪಾದಾರ್ಪಣೆಗೊಂಡ ಹಿನ್ನೆಲೆಯಲ್ಲಿ ಮತ್ತು ದಿ.ಫಾ ವಲೇರಿಯನ್ ಮೆಂಡೋನ್ಸ ಇವರ ಸ್ಮರಣಾರ್ಥವಾಗಿ ಹಮ್ಮಿಕೊಂಡ ಈ ಕಾರ್ಯಕ್ರಮಕ್ಕೆ ಭಾಗವಹಿಸಿದ್ದಕ್ಕೆ ಸಂತೋಷವಾಗಿದೆ ಈ ಸಂಸ್ಥೆಯು ಹೆಚ್ಚಿನ ಶಾಖೆಗಳನ್ನು ಪ್ರಾರಂಭಿಸಿ ಇನ್ನು ಅನೇಕ ರೀತಿಯಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸೇವೆಯನ್ನು ನೀಡಲಿ ಎಂದು ಶುಭ ಹಾರೈಸಿದರು.

ಸೈಂಟ್ ವಿನ್ಸೆಂಟ್ ಪಲ್ಲೊಟ್ಟಿ ಉದ್ಯಾವರ ಇದರ ಸಿಸ್ಟರ್ ಲೀನಾ ಇವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಲೆಕ್ಕ ವ್ಯವಸ್ಥಾಪಕರಾದ ಕುಮಾರ್ ಹೆಚ್ ಎನ್, ಕಿರಿಯ ಸಹಾಯಕರಾದ ದೀಕ್ಷಿತ್ ನಾಯ್ಕ್ ಮತ್ತು ಸಂಸ್ಥೆಯ ವಿವಿಯನ್ ಮರ್ವಿನ್ ನೊರೊನ್ಹಾ, ಹಾಗೂ ಸ್ಟೀವನ್ ಕುಲಾಸೋ, ರೋಟರಿ ಕ್ಲಬ್ ಉದ್ಯಾವರದ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!