ಉಡುಪಿ ಮೀನು ಮಾರಾಟಗಾರರ ವಿವಿಧೋದ್ಧೇಶ ಸೌಹಾರ್ದ ಸ.ಸಂಘ: ವಾರ್ಷಿಕ ಮಹಾಸಭೆ
ಉಡುಪಿ: ಉಡುಪಿ ಜಿಲ್ಲೆಯ ವಿವಿಧ ಮಾರುಕಟ್ಟೆಗಳಲ್ಲಿ ಮೀನುವ್ಯಾಪಾರ ನಡೆಸುತ್ತಿರುವ ಮಹಿಳಾ ಮೀನುಗಾರರಿಗೆ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಯನ್ನು ನೀಡುವ ನಿಟ್ಟಿನಲ್ಲಿ ನಮ್ಮ ಸಹಕಾರಿಯ ಶ್ರಮಿಸುತ್ತಿದ್ದು, ಉಡುಪಿ ಜಿಲ್ಲೆಯಾದ್ಯಂತ ಮೀನುವ್ಯಾಪಾರದಲ್ಲಿ ತೊಡಗಿರುವ ಹಿರಿಯ ಮೀನುಗಾರ ಮಹಿಳೆಯರಿಗೆ ಸರಕಾರ ಪಿಂಚಣಿ ಸೌಲಭ್ಯವನ್ನು ಒದಗಿಸಬೇಕು ಎಂದು ಉಡುಪಿ ಮೀನುಮಾರಾಟಗಾರರ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷೆ ಬೇಬಿ ಎಚ್.ಸಾಲ್ಯಾನ್ ಒತ್ತಾಯಿಸಿದ್ದಾರೆ.
ಉಡುಪಿ ನಗರದ ಪುರಭವನದಲ್ಲಿ ಸೆ.21ರಂದು ನಡೆದ ಉಡುಪಿ ಮೀನುಮಾರಾಟಗಾರರ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ 2023-2024ನೇ ಸಾಲಿನ 14ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಹಕಾರಿಯ ನಿರ್ದೇಶಕ ಹಾಗೂ ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಯಶ್‌ಪಾಲ್ ಎ.ಸುವರ್ಣ ಅವರು ಭಾಗವಹಿಸಿ, ವಿವಿಧ ಮಾರುಕಟ್ಟೆಗಳ 10ಮಂದಿ ಹಿರಿಯ ಮೀನುಗಾರ ಮಹಿಳೆಯರನ್ನು ಸನ್ಮಾನಿಸಿದರು. ಹಿರಿಯ ಮೀನುಗಾರ ಮಹಿಳೆಯರಾದ ರುಕ್ಮಿಣಿ ಖಾರ್ವಿ ಸಾಸ್ತಾನ, ರಾಧು ಕರ್ಕೇರ ಸಾಸ್ತಾನ, ಚಿಕ್ಕಿ ಬಂಗೇರ ಬ್ರಹ್ಮಾವರ, ಜಲಜ ಕುಂದರ್ ಉಡುಪಿ, ಕಮಲ ಬಂಗೇರ ಉಡುಪಿ, ಪುಟ್ಟಿ ಸುವರ್ಣ ಕಟಪಾಡಿ, ಉಷಾ ಎನ್. ಕಾಂಚನ್ ಉಚ್ಚಿಲ, ವನಜ ಮೆಂಡನ್ ಶಿರ್ವ, ಅಪ್ಪಿ ಸಾಲ್ಯಾನ್ ಹೂಡೆ, ಬೇಬಿ ಕರ್ಕೇರ ಕಾಪು ಅವರು ಸನ್ಮಾನ ಸ್ವೀಕರಿಸಿದರು.
ಇದೇ ವೇಳೆ 50ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಆರೋಗ್ಯ ನೆರವನ್ನು ವಿತರಿಸಲಾಯಿತು. ಸಹಕಾರಿಯ ಸಂಘವು ಸತತವಾಗಿ ಲಾಭಾಂಶವನ್ನು ಹೊಂದಿದ್ದು, ಪ್ರತಿವರ್ಷದಂತೆ ಈ ವರ್ಷವೂ ಸದಸ್ಯರಿಗೆ ಡಿವಿಡೆಂಟ್ ಘೋಷಣೆ ಮಾಡಲಾಯಿತು. ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ಫೆಡರೇಶನ್ ನಿರ್ದೇಶಕ ಮಂಜುನಾಥ್ ಎಸ್.ಕೆ.ಸಾಲಿಗ್ರಾಮ, ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್. ಮೀನುಮಾರಾಟಗಾರರ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷೆ ಜಯಂತಿ ಗುರುದಾಸ್ ಬಂಗೇರ, ನಿರ್ದೇಶಕರುಗಳಾದ ಸುರೇಶ್ ಬಿ.ಕುಂದರ್ ಮಲ್ಪೆ ಹರೀಶ್ ಜಿ.ಕರ್ಕೇರ ಕಲ್ಮಾಡಿ, ನಾರಾಯಣ ಪಿ.ಕುಂದರ್ ಕಲ್ಮಾಡಿ, ಲಕ್ಷಿö್ಮÃ ಆನಂದ್ ಪಿತ್ರೋಡಿ, ಸರೋಜ ಕಾಂಚನ್ ಬ್ರಹ್ಮಾವರ, ಇಂದಿರಾ ವಿ.ಕಾಂಚನ್ ಮಲ್ಪೆ, ಭಾನುಮತಿ ವಿ.ಮೆಂಡನ್ ಕಾಪು ಉಪಸ್ಥಿತರಿದ್ದರು. ಸುನೀತ ಜೆ.ಬಂಗೇರ ಉಚ್ಚಿಲ ಸ್ವಾಗತಿಸಿದರು. ಕುಮಾರಿ ಲಹರಿ ಹರೀಶ್ ಕರ್ಕೇರ ಪ್ರಾರ್ಥಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಕಾಶ ಸುವರ್ಣ ಕಟಪಾಡಿ ವರದಿ ಮಂಡಿಸಿ, ವಂದಿಸಿದರು.
ಫೋಟೋ ಕ್ಯಾಪ್ಶನ್: ಸಹಕಾರಿಯ ನಿರ್ದೇಶಕ ಹಾಗೂ ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಯಶ್‌ಪಾಲ್ ಎ.ಸುವರ್ಣ ಅವರು ಭಾಗವಹಿಸಿ, ವಿವಿಧ ಮಾರುಕಟ್ಟೆಗಳ 10ಮಂದಿ ಹಿರಿಯ ಮೀನುಗಾರ ಮಹಿಳೆಯರನ್ನು ಸನ್ಮಾನಿಸಿದರು.