ಬಿಹಾರ ಚುನಾವಣೆಯಲ್ಲಿ ಮಹಾಘಟಬಂಧನ್ ಗೆ ಪ್ರಚಂಡ ಜಯ: ಡಿಕೆಶಿ ಅಭಿಮಾನಿ ಸಂಘ ವಿಶ್ವಾಸ
ಉಡುಪಿ (ಉಡುಪಿ ಟೈಮ್ಸ್ ವರದಿ) : ದೇಶದ ಜನತೆಯ ಗಮನ ಸೆಳೆದಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ್ ಗೆ ಪ್ರಚಂಡ ಜಯ ದೊರಕಲಿದೆ ಎಂಬುದಾಗಿ ಉಡುಪಿಯ ಡಿಕೆಶಿ ಅಭಿಮಾನಿ ಸಂಘದ ವಿಶ್ವಾಸ ವ್ಯಕ್ತಪಡಿಸಿದೆ.
ಕೇಂದ್ರ ಸರಕಾರ ಮತ್ತು ಬಿಹಾರದ ಎನ್ ಡಿಎ ಸರಕಾರದ ಆಡಳಿತ ವೈಫಲ್ಯ ಮತ್ತು ಜನವಿರೋಧಿ ನೀತಿಗಳನ್ನು ಬಿಹಾರದ ಜನತೆ ಗಮನಿಸಿದ್ದು, ಬಿಜೆಪಿಗೆ ಸೋಲು ಖಚಿತ ಎಂಬುದಾಗಿ ತಿಳಿಸಿದೆ.
150 ಕ್ಕೂ ಅಧಿಕ ಸ್ಥಾನ ಪಡೆದು ಬಿಹಾರದಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ ಬರಲಿದೆ. ಮಾತ್ರವಲ್ಲದೆ ಮಧ್ಯ ಪ್ರದೇಶದಲ್ಲೂ ಬಿಜೆಪಿ ಸೋಲುವುದು ಖಚಿತವಾಗಿದೆ. ಕರ್ನಾಟಕದಲ್ಲಿ ನಡೆದ ಉಪಚುನಾವಣೆಯ ಆರ್ ಆರ್ ನಗರ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಕಾಳಗದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಲಿದ್ದು, ಶಿರಾ ಕ್ಷೇತ್ರದ ಗೆಲುವು ನಮ್ಮದೇ ಎಂಬ ವಿಶ್ವಾಸವನ್ನು ಉಡುಪಿ ಡಿ.ಕೆ ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಚರಣ್ ರಾಜ್ ಬಂಗೇರ, ಉಡುಪಿ ನಗರ ಅಧ್ಯಕ್ಷ ಸುಹಾಸ್, ನಗರಸಭೆಯ ಮಾಜಿ ಅಧ್ಯಕ್ಷ ಯುವರಾಜ್ ಪುತ್ತೂರು, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.