ಬ್ರಹ್ಮಾವರ ಆದಿದ್ರಾವಿಡ ಸಹಕಾರಿ ಸಂಘ: 7ನೇ ವಾರ್ಷಿಕ ಮಹಾಸಭೆ
ಬ್ರಹ್ಮಾವರ: ಆದಿದ್ರಾವಿಡ ಸಹಕಾರಿ ಸಂಘ ತೆಂಕುಬಿರ್ತಿ ಇದರ ಏಳನೇ ವಾರ್ಷಿಕ ಮಹಾಸಭೆ ಇಂದು ವಾರಂಬಳ್ಳಿ ಅಂಬೇಡ್ಕರ್ ಭವನದಲ್ಲಿ ಜರಗಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಸುಧಾಕರ್ ಮಾಸ್ತರ್ ಗುಜ್ಜರ್ ಬೆಟ್ಟುರವರು ಸಂಘವು ಆರಂಭದಿಂದಲೂ ಸತತ ಏಳನೇ ವರ್ಷವೂ ಲಾಭ ಗಳಿಸಿ ಉತ್ತಮ ಪ್ರಗತಿ ಸಾಧಿಸಿ, ಉಳಿತಾಯ ಮತ್ತು ಸಾಲ ವಸೂಲಾತಿಯಲ್ಲೂ ಗುರಿ ಸಾಸಿದಿಸಿದ್ದೇವೆ ಎಂದು ತಿಳಿಸಿದರು.
ಮುಖ್ಯ ಕಾರ್ಯ ನಿರ್ವಣಾಧಿಕಾರಿ ಗಣೇಶ್ ಬಿರ್ತಿ ಯವರು ಸಮಗ್ರ ವರದಿ ,ಲೆಕ್ಕ ಪರಿಶೋಧಿತ ಆಯಾ ವ್ಯಯ ಮಂಡಿಸಿದರು.ಬಿರ್ತಿ ಸುರೇಶ್ ರವರು ಸಂಘದ ಉದ್ದೇಶ, ಚಟುವಟಿಕೆ ಮತ್ತು ಗುರಿಯನ್ನು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ವಾರಂಬಳ್ಳಿ ಪಂಚಾಯತ್ ಮಾಜಿ ಅಧ್ಯಕರಾದ ನಾರಾಯಣ್ ಎಸ್, ಬ್ಯಾಂಕ್ ಆಫ್ ಬರೊಡದ ಅಧಿಕಾರಿ ಸುಬ್ರಮಣ್ಯ ಪ್ರಸಾದ್, ದಲಿತ ಸಂಘಟನೆಯ ನಾಯಕರಾದ ಶ್ಯಾಮರಾಜ್ ಬಿರ್ತಿ, ನ್ಯಾಷನಲ್ ಇನ್ಸುರನ್ಸ್ ನ ನಿವೃತ್ತ ಅಧಿಕಾರಿ ಭೋಜರಾಜ್ ಕೆ ಸಂಘದ ಬೆಳವಣಿಗೆಯನ್ನು ಶ್ಲಾಘಿಸಿದರು.
ಈ ಸಭೆಯಲ್ಲಿ ಉಪಾಧ್ಯಕ್ಷರಾದ ವರ್ಣ ವಿಶ್ವನಾಥ್, ಸಲಹೆಗಾರರಾದ ಹರಿಶ್ಚಂದ್ರ ಕೆ.ಡಿ,ಶಿವಾನಂದ ಕೆ. ನಿರ್ದೇಶಕರಾದ ಜಗನ್ನಾಥ್ ಬಿ, ಸುಮನಾ ಶ್ಯಾಮ್, ಗಂಗೆ ಬಿ, ಅನಿಲ್ ಕುಮಾರ್, ಚೈತನ್ಯ ಕುಮಾರ್ ಬಿ, ಶಂಕರ ಇಂದಿರನಗರ,ಅರುಣ್ ಕುಮಾರ್ ಪಾಡಿಗಾರ್, ಸಂತೋಷ್ ಬಿರ್ತಿ, ಸಂದೇಶ್. ಬಿ, ಪ್ರಶಾಂತ್ ಬಿರ್ತಿ ಉಪಸ್ಥಿತರಿದ್ದರು. ಸ್ವರಾಜ್ ಬಿರ್ತಿ ಸ್ವಾಗತಿಸಿ, ಸಂಘದ ಉದ್ಯೋಗಿ ಮಮತಾ ವಂದಿಸಿದರು.