ಕುಂದಕನ್ನಡದ ಸ್ಟ್ಯಾಂಡ್ ಅಪ್ ಕಾಮಿಡಿ “ಗೋಧಾಮ “ಕಾಮಿಡಿ ಚಾವಡಿ” ಸ್ಪರ್ಧೆಯ ನಿಯಮಗಳು…
ಉಡುಪಿ, ಸೆ.22: ಉಡುಪಿ ಟೈಮ್ಸ್ ನ ಅಂಗ ಸಂಸ್ಥೆ ‘ಪಬ್ಲಿಕ್ ಲೈನ್‘ ವಾಹಿನಿಯು ಕುಂದ ಕನ್ನಡದ ಸ್ಟ್ಯಾಂಡ್ ಅಪ್ ಕಾಮಿಡಿ ರಿಯಾಲಿಟಿ ಶೋ “ಕಾಮಿಡಿ ಚಾವಡಿ” ಆಯೋಜಿಸಿದ್ದು, ನೀವು ನಿರರ್ಗಳವಾಗಿ ಕುಂದಗನ್ನಡದಲ್ಲಿ ನಗೆ ಚಟಾಕಿಗಳೊಂದಿಗೆ ಮಾತನಾಡಿದ 4 ನಿಮಿಷದ ನಿಮ್ಮ ನೆಚ್ಚಿನ ವಿಷಯದ ಕುರಿತಾದ ಒಂದೇ ಸ್ಥಳದಲ್ಲಿ ನಿಂತು ಮಾಡಿದ ಹಾಸ್ಯ ವಿಡಿಯೋ ತುಣುಕನ್ನು 99809 81080 ನಂಬರ್‌ಗೆ ಸೆಪ್ಟೆಂಬರ್ 30 ರೊಳಗೆ ಕಳುಹಿಸಿಕೊಡಿ.
ಸ್ಪರ್ಧೆಯ ನಿಯಮಗಳು…..
- ಕುಂದಗನ್ನಡ ಭಾಷೆಯ ಗ್ರಾಮೀಣ ಸೊಗಡು, ಸ್ಪಷ್ಟತೆ, ಶೈಲಿ ಇರುವಂತದ್ದು.
- ಅಭಿನಯ ಪ್ರಾಧಾನ್ಯವಲ್ಲ.
- ವಿಷಯ ಮಂಡನೆಗೆ ಆದ್ಯತೆ.
- ಸೀಮಿತಾವಧಿಯಲ್ಲಿ ಬಳಸಿಕೊಳ್ಳುವ ಹಾಸ್ಯರಸ ಪರಿಗಣಿಸಲಾಗುವುದು.
- ವಿಡಿಯೋ ಚಿತ್ರೀಕರಣದ ಪರಿಶುದ್ಧತೆ ಗಣನೆಗೆ ತೆಗದುಕೊಳ್ಳಲಾಗುವುದು.
- ನಿಮ್ಮ ಮಾತು ಸ್ಪಷ್ಟವಾಗಿ ಕೇಳುವಂತಿರಬೇಕು.
- ಯಾವುದೇ ಜಾತಿ, ಧರ್ಮ, ಪಕ್ಷ, ಸಂವಿಧಾನಕ್ಕೆ ನಿಂದನಾತ್ಮಕವಾಗಿರಬಾರದು.
- ರಾಜ ಹಾಗೂ ನಾಗರೀಕ ಹಾಸ್ಯಗಳಿಗೆ ಆದ್ಯತೆ.
- ಅಶ್ಲೀಲ ಹಾಗೂ ಅಸಭ್ಯ ಪದಗಳನ್ನು ಬಳಸುವಂತಿಲ್ಲ.
- ತೀರ್ಪುಗಾರರ ತೀರ್ಮಾನವೇ ಅಂತಿಮ.
- ವಿಜೇತ ಮೂರು ಸ್ಪರ್ಧಿಗಳಿಗೆ ನಗದು ಬಹುಮಾನ ಹಾಗೂ ಶಾಶ್ವತ ಫಲಕ ನೀಡಲಾಗುವುದು.