ಕಾಪು: ಮೀನುಗಾರ ನೇಣಿಗೆ ಶರಣು
ಕಾಪು: ಅನಾರೋಗ್ಯದಿಂದ ಮನನೊಂದು ಮೀನುಗಾರ ನೇಣಿಗೆ ಶರಣಾದ ಘಟನೆ ಬುಧವಾರ ಮಧ್ಯರಾತ್ರಿ ನಡೆದಿದೆ.
ಆತ್ಮಹತ್ಯೆಗೆ ಶರಣಾದವರು ಉಳಿಯಾರಗೋಳಿ ಗ್ರಾಮದ ನಿವಾಸಿ ರಮೇಶ್ (49) ಎಂದು ತಿಳಿದುಬಂದಿದೆ.
ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ರಮೇಶ ಅವರಿಗೆ 2 ತಿಂಗಳ ಹಿಂದೆ ಎದೆನೋವು ಕಾಣಿಸಿಕೊಂಡಿತ್ತು. ಕಾಪುವಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಬುಧವಾರ ರಾತ್ರಿ ಮನೆಯಲ್ಲಿ ಊಟ ಮಾಡಿ ಹಾಲ್‌ನಲ್ಲಿ ಮಗ ಮತ್ತು ಪತ್ನಿಯೊಂದಿಗೆ ಮಲಗಿದ್ದವರು ಮಧ್ಯರಾತ್ರಿ ಕಾಣೆಯಾಗಿದ್ದರು. ಪತ್ನಿ ಹುಡುಕಾಡಿದಾಗ ಮನೆಯ ಪಕ್ಕಾಸಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಕೂಡಲೇ ಅವರನ್ನು ಪತ್ನಿ ಮತ್ತು ಮಗ ಕೆಳಗಿಳಿಸಿ ಟಿಎಂಎ ಪೈ ಆಸ್ಪತ್ರೆ ಉಡುಪಿಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸದ ವೈದ್ಯರು ರಮೇಶ್ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಪುತ್ರ ರೋಷನ್ ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.