ಉಡುಪಿ ಲಯನ್ಸ್ 317ಸಿ ಯಿಂದ 1 ಕೋಟಿಗೂ ಮೀರಿ ಸೇವಾ ಕಾರ್ಯಕ್ರಮ: ಎನ್.ಎಮ್.ಹೆಗಡೆ
ಉಡುಪಿ: ಲಯನ್ಸ್ ಜಿಲ್ಲೆ 317ಸಿಯ ದ್ವಿತೀಯ ಜಿಲ್ಲಾ ಸಂಪುಟ ಸಭೆಯು 8 ನವಂಬರ್ ರಂದು ಬ್ರಹ್ಮಾವರ ಸಿಟಿ ಸೆಂಟರ್ ನಲ್ಲಿ ಲಯನ್ಸ್ ಕ್ಲಬ್ ಕೋಟ ಬ್ರಹ್ಮಾವರ ಮತ್ತು ಲಯನ್ಸ್ ಕ್ಲಬ್ ಮಣಿಪಾಲ್ ವ್ಯಾಲ್ಯು ಆತಿಥ್ಯದಲ್ಲಿ ಜರಗಿತು.
ಅಧ್ಯಕ್ಷತೆಯನ್ನು ವಹಿಸಿದ್ದ ಲಯನ್ಸ್ ಜಿಲ್ಲೆ 317ಸಿ ಯ ಜಿಲ್ಲಾ ಗವರ್ನರ್ ಲಯನ್ ಎನ್.ಎಮ್. ಹೆಗಡೆ ಅವರು ಮಾತನಾಡಿ ಲಯನ್ಸ್ ಜಿಲ್ಲೆ 317ಸಿ ಯಿಂದ ಕಳೆದ ನಾಲ್ಕು ತಿಂಗಳಲ್ಲಿ ಒಂದೂ ಕೋಟಿಗೂ ಮೀರಿ ಸೇವಾ ಕಾರ್ಯಕ್ರಮಗಳು ಜರಗಿದ್ದು ಟಾಟ ಎಜುಕೇಶನ್ & ಡೆವೆಲಪ್ ಮೆಂಟ್ ಟ್ರಸ್ಟ್ ಮೂಲಕ ಸುಮಾರು 40 ಲಕ್ಷ ಮೌಲ್ಯದ ಕೋವಿಡ್-19 ನಿರ್ವಹಣೆಗೆ ಅಗತ್ಯ ವಸ್ತುಗಳನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ನೀಡಲಾಗಿದೆ, ಸುಮಾರು 8 ಲಕ್ಷ ಮೌಲ್ಯದ ಆಹಾರ ಮತ್ತು ದಿನ ಬಳಕೆ ವಸ್ತುಗಳ ಕಿಟ್ ಗಳನ್ನು ನೆರೆ ಸಂತ್ರಪ್ತರಿಗೆ ನೀಡಲಾಗಿದೆ, ಜಿಲ್ಲೆಯ ಕ್ಲಬ್ ಗಳು ಸುಮಾರು 70 ಲಕ್ಷ ಮೌಲ್ಯದ ಸೇವಾ ಕಾರ್ಯಕ್ರಮಗಳನ್ನು ನಡೆಸಿವೆ ಎಂದರು.
ಲಯನ್ಸ್ ಸದಸ್ಯತ್ವ ವೃದ್ದಿಯಡಿಯಲ್ಲಿ 10 ನೂತನ ಲಯನ್ಸ್ ಕ್ಲಬ್ ಗಳು ಪ್ರಾರಂಭ ಗೊಂಡಿದ್ದು ಲಯನ್ಸ್ ಜಿಲ್ಲೆ 317ಸಿ ಯ ಸದಸ್ಯತ್ವ 3000 ದಾಟಿರುತ್ತದೆ. ಯೂತ್ ಪ್ರಮೋಶನ್ ಅಡಿಯಲ್ಲಿ 15 ನೂತನ ಲಿಯೋ ಕ್ಲಬ್ ಗಳಾಗಿದ್ದು ರಾಷ್ಟ್ರೀಯ ಮಟ್ಟದಲ್ಲಿ 317ಸಿ ಎರಡನೇ ಸ್ಥಾನದಲ್ಲಿದೆ. ಎಲ್.ಸಿ.ಐ.ಎಫ್ ಫೌಂಡೇಶನ್ ಗೆ 35 ಜನ್ ಎಮ್.ಜೆ.ಎಫ್ ದೇಣಿಗೆಯನ್ನು ನೀಡಿರುತ್ತಾರೆ ಎಂದರು.
ಈ ಸಂಧರ್ಭದಲ್ಲಿ ಜಿಲ್ಲೆಯ ಕಾರ್ಯಕ್ರಮಗಳ ಸಂಚಿಕೆ ಲಯನ್ಸ್ ಸಫಾರಿಯನ್ನು ಬಿಡುಗಡೆಗೊಳಿಸಲಾಯಿತು. ಲಯನ್ಸ್ ಮುಂದಾಳುಗಳಾದ ಲಯನ್ ಸಿದ್ದರಾಜು ಮತ್ತು ಲಯನ್ ಹರೀಶ್ ಸುವರ್ಣ ಅವರು ಲಯನ್ಸ್ ಶಾಲೆಗಳಿಗೆ ಆಟೋಟ ಸಾಮಗ್ರಿಗಳನ್ನು ವಿತರಿಸಿದರು. ಲಯನ್ ರಂಜನ್ ಕಲ್ಕೂರ ಅವರು ಅಷ್ಟಮಿ ಆಚರಣೆಯ ಫೋಟೋ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದರು.ಈ ಸಂಧರ್ಭದಲ್ಲಿ ಲಯನ್ ರವಿರಾಜ್ ನಾಯಕ್ ಅವರಿಗೆ ಬೆಸ್ಟ್ ಎಮರ್ಜಿಂಗ್ ಲಯನ್ ಮತ್ತು ಲಯನ್ ಕಿರಣ್ ರಂಗಯ್ಯ ಅವರಿಗೆ ಲಯನ್ ಆಫ್ ಫರ್ಸ್ಟ್ ಕ್ವಾರ್ಟರ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಲಯನ್ಸ್ ಪ್ರಥಮ ಉಪ ಜಿಲ್ಲಾ ಗವರ್ನರ್ ಲಯನ್ ವಿಶ್ವನಾಥ್ ಶೆಟ್ಟಿ, ದ್ವಿತೀಯ ಉಪ ಗವರ್ನರ್ ಲಯನ್ ಕೆ. ಸಿ. ವೀರಭದ್ರ, ಜಿಲ್ಲಾ ಮೆಂಟರ್ ಲಯನ್ ಶ್ರೀಧರ ಶೇಣವ, ಪಿ.ಆರ್.ಓ ಪ್ರಕಾಶ್ಚಂದ್ರ ಕೆ ಹಾಗೂ ಸಂಪುಟ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ಲಯನ್ ಸಾಧನಾ ಕಿಣಿ ಸ್ವಾಗತಿಸಿದರು, ಲಯನ್ ಸುದರ್ಶನ್ ಹೆಗ್ಡೆ ಧ್ವಜವಂದನೆಗೈದರು, ಕಾರ್ಯದರ್ಶಿ ಲಯನ್ ಟಿ. ಜಿ. ಆಚಾರ್ಯ ಜಿಲ್ಲೆಯ ಕಾರ್ಯಕ್ರಮಗಳ ವರದಿ ಮಂಡಿಸಿದರು, ಕೋಶಾಧಿಕಾರಿ ಲಯನ್ ಡಾ. ಪ್ರಕಾಶಾತ್ಮ ಲೆಕ್ಕ ಪತ್ರ ಮಂಡಿಸಿದರು, ಲಯನ್ ಜಯರಾಮ್ ಆಚಾರ್ಯ ಪ್ರಾರ್ಥನೆಗೈದರು, ಲಯನ್ ರವಿರಾಜ್ ನಾಯಕ್ ವಂದಿಸಿದರು.