ಸೆ.22: ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ-“ಪ್ರೇರಣ ಪ್ರಶಸ್ತಿ-2024” ಪ್ರದಾನ

Oplus_131072

ಉಡುಪಿ: ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ “ವಾರ್ಷಿಕ ಸಹಮಿಲನ ಹಾಗೂ ಪ್ರೇರಣ ಪ್ರಶಸ್ತಿ- 2024” ಪ್ರದಾನ ಕಾರ್ಯಕ್ರಮ ಇದೇ ಸೆ. 22ರಂದು ಸಂಜೆ 5ಗಂಟೆಗೆ ಕಡಿಯಾಳಿಯ ಮಾಂಡವಿ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಲ್ವಿನ್ ಕ್ವಾಡ್ರಸ್ ತಿಳಿಸಿದರು.

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ಷದ ಉದ್ಯಮಿ ಪ್ರಶಸ್ತಿಯನ್ನು ಕುಂದಾಪುರ ಸೈಂಟ್ ಅಂತೋನಿ ಕನ್ಸಟ್ರಕ್ಷನ್ ನ ಪಿಲಿಫ್ ಡಿಕೊಸ್ತಾ, ಮಹಿಳಾ ವೃತ್ತಿ ನಿರತ ಪ್ರಶಸ್ತಿಯನ್ನು ತನುಜಾ ಮಾಬೆನ್, ಯುವ ಉದ್ಯಮ ಪ್ರಶಸ್ತಿಯನ್ನು ಡೆನೋಲ್ಡ್ ಜೆಸೆನ್ ಸೀಕ್ವೆರಾ ಹಾಗೂ ವರ್ಷದ ಪ್ರಗತಿಪರ ಕೃಷಿಕ ಪ್ರಶಸ್ತಿಯನ್ನು ಜೂಲಿಯನ್ ದಾಂತಿ ಕುತ್ಪಾಡಿ ಅವರಿಗೆ ಪ್ರದಾನ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಿಕ್ಷಣ ಸಂಗೀತ, ಕ್ರೀಡೆ ಹಾಗೂ ಇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳನ್ನು ಗುರುತಿಸಿ ಪುರಸ್ಕಾರ ಪ್ರದಾನ ಮಾಡಲಾಗುವುದು. ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕ್ರೆಡಿಟ್ ಕೊ. ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಾರ್ಜ್ ಫೆರ್ನಾಂಡಿಸ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ನಾನಿ ಅಲ್ವಾರಿಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಸಂತೋಷ್ ಡಿಸಿಲ್ವ, ಗೌರವಾಧ್ಯಕ್ಷ ಜೆರಿ ವಿನ್ಸೆಂಟ್‌ ಡಯಾಸ್, ಮಾಕ್ಸಿಮ್ ಸ್ಟೇಫನ್ ಸಾಲ್ಡಾನ, ಲೂಯಿಸ್ ಲೋಬೋ, ಮ್ಯಾಕ್ಸಿಮ್ ಸಾಲ್ಡಾನ, ವಿಲ್ಸನ್ ಶಿರ್ವ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!