ಮಂಗಳೂರು: ನೂತನ ಮೇಯರ್ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Oplus_131072

ಮಂಗಳೂರು: ಮಹಾನಗರ ಪಾಲಿಕೆಯ ಮುಂದಿನ ಅವಧಿಗೆ ಮೇಯರ್ ಆಗಿ ನಗರ ಉತ್ತರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 17 ಮನಪಾ ಸದಸ್ಯ ಮನೋಜ್ ಕುಮಾರ್ ಕೋಡಿಕಲ್ ಹಾಗೂ ಉಪಮೇಯರ್ ಆಗಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 58ರ ಸದಸ್ಯೆ ಭಾನುಮತಿ ಪಿ.ಎಸ್. ಆಯ್ಕೆಯಾಗಿದ್ದಾರೆ.

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ ಭಾಗವಹಿಸಿದ್ದರು. ಮೇಯರ್ ಹುದ್ದೆಗೆ ಎಸ್ ಸಿ ಮೀಸಲಾತಿಯಡಿ ಕಾಂಗ್ರೆಸ್ ಅಭ್ಯರ್ಥಿಗಳು ಇಲ್ಲದ ಕಾರಣದಿಂದ ಮೇಯರ್ ಆಯ್ಕೆ ಅವಿರೋಧವಾಗಿ ನಡೆಯಿತು.

ಉಪ ಮೇಯರ್ ಸ್ಥಾನಕ್ಕೆ ಚುನಾವಣೆ

ಉಪಮೇಯರ್ ಸ್ಥಾನಕ್ಕೆ ಆಡಳಿತ ರೂಢ ಬಿಜೆಪಿಯಿಂದ ಭಾನುಮತಿ 2 ಸೆಟ್ ನಾಮಪತ್ರ ಸಲ್ಲಿಸಿದರು. ಬಿಜೆಪಿಯಿಂದ ಇನ್ನೋರ್ವ ಅಭ್ಯರ್ಥಿಯಾಗಿ ವನಿತಾ ಪ್ರಸಾದ್ ಹಾಗೂ ವಿಪಕ್ಷ ಕಾಂಗ್ರೆಸ್ ನ ಝೀನತ್ ಸಂಶುದ್ದೀನ್ ನಾಮಪತ್ರ ಸಲ್ಲಿಸಿದರು.

ಬಿಜೆಪಿಯ ಭಾನುಮತಿ ಅವರ ಒಂದು ನಾಮಪತ್ರದಲ್ಲಿ ಜಾತಿ ನಾಮಪತ್ರ ಸಲ್ಲಿಸದ ಕಾರಣ ಅದನ್ನು ತಿರಸ್ಕರಿಸಲಾಯಿತು. ಬಿಜೆಪಿಯ ವನಿತಾ ಪ್ರಸಾದ್ ನಾಮಪತ್ರ ಹಿಂಪಡೆದ ಕಾರಣ ಕಣದಲ್ಲಿ ಉಳಿದ ಬಿಜೆಪಿಯ ಭಾನುಮತಿ, ಕಾಂಗ್ರೆಸ್ ನ ಝೀನತ್ ಸಂಶುದ್ದೀನ್ ಪರ ಕೈ ಎತ್ತುವ ಮೂಲಕ ಚುನಾವಣೆ ನಡೆಯಿತು. ಬಿಜೆಪಿಯ ಭಾನುಮತಿ ಪರ 47 ಹಾಗೂ ಕಾಂಗ್ರೆಸ್ ನ ಝೀನತ್ ಸಂಶುದ್ದೀನ್ ಪರ 14 ಮತಗಳು ಚಲಾವಣೆ ಗೊಂಡು ಬಿಜೆಪಿಯ ಭಾನುಮತಿ ಅವರನ್ನು ಉಪ ಮೇಯರ್ ಆಗಿ ಚುನಾವಣಾ ಅಧಿಕಾರಿ ಮೈಸೂರು ಪ್ರಾದೇಶಿಕ ಆಯುಕ್ತ ರಮೇಶ್ ಘೋಷಿಸಿದರು. ಬಳಿಕ ನಾಲ್ಕು ಸ್ಥಾಯಿ ಸಮಿತಿಗಳಿಗೆ ಅವಿರೋಧ ಆಯ್ಕೆ ನಡೆಯಿತು.

ಪಾಲಿಕೆಯಲ್ಲಿ ಬಿಜೆಪಿ 44, ಕಾಂಗ್ರೆಸ್ 14, ಎಸ್ಡಿಪಿಐ ಇಬ್ಬರು ಸದಸ್ಯ ಬಲವನ್ನು ಹೊಂದಿದೆ. ಚುನಾವಣೆಯಲ್ಲಿ ಸಂಸದ, ಶಾಸಕರು ಸೇರಿ 65 ಮಂದಿ ಚುನಾವಣೆಯಲ್ಲಿ ಮತ ಚಲಾಯಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!