ಪೇಜರ್ ಸ್ಫೋಟದ ಬೆನ್ನಲ್ಲೇ ಹಿಜ್ಬುಲ್ಲಾಗಳು ಬಳಸುವ ವಾಕಿ-ಟಾಕಿಗಳೂ ಸ್ಫೋಟ- 14 ಸಾವು, 450 ಕ್ಕೂ ಹೆಚ್ಚು ಮಂದಿಗೆ ಗಾಯ!
ಬೈರುತ್: ಲೆಬನಾನ್ ನಾದ್ಯಂತ ಹಿಜ್ಬುಲ್ಲಾಗಳು ಬಳಕೆ ಮಾಡುತ್ತಿದ್ದ ಪೇಜರ್ ಗಳು ಸ್ಫೋಟಗೊಂಡ ಬೆನ್ನಲ್ಲೇ ವಾಕಿ-ಟಾಕಿಗಳೂ ಸ್ಫೋಟಗೊಳ್ಳಲು ಆರಂಭವಾಗಿವೆ. ವಾಕಿ-ಟಾಕಿಗಳ ಸ್ಫೋಟದ ಪರಿಣಾಮವಾಗಿ 14 ಮಂದಿ ಸಾವನ್ನಪ್ಪಿದ್ದು, 450 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
“ಸೊಹ್ಮೋರ್ ಪಟ್ಟಣದಲ್ಲಿ ಸಾಧನಗಳು ಸ್ಫೋಟಗೊಂಡ ನಂತರ ಮೂವರು ಸಾವನ್ನಪ್ಪಿದ್ದಾರೆ” ಎಂದು ಸರ್ಕಾರಿ ರಾಷ್ಟ್ರೀಯ ಸುದ್ದಿ ಸಂಸ್ಥೆ ಹೇಳಿದೆ. ದೇಶದ ಅನೇಕ ಪ್ರದೇಶಗಳಲ್ಲಿ ಎಲೆಕ್ಟ್ರಾನಿಕ್ ಸಾಧನಗಳು ಸ್ಫೋಟಗೊಂಡಿರುವ ಇತ್ತೀಚಿನ ಪ್ರಕರಣಗಳಲ್ಲಿ 450 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಸರ್ಕಾರ ದೃಢಪಡಿಸಿದೆ.
ವಾಕಿ ಟಾಕಿ ಉಪಕರಣಗಳನ್ನು 5 ತಿಂಗಳ ಹಿಂದೆ ಹೆಜ್ಬೊಲ್ಲಾಗಳು ಖರೀದಿಸಿದ್ದರು. ಪೇಜರ್‌ಗಳನ್ನೂ ಅದೇ ಸಮಯದಲ್ಲಿ ಖರೀದಿಸಿದ್ದಾರೆ ಎಂದು ಭದ್ರತಾ ಮೂಲವೊಂದು ಈಗ ಬಹಿರಂಗಪಡಿಸಿದೆ. ಪೂರ್ವ ಮತ್ತು ದಕ್ಷಿಣದ ಹೆಜ್ಬೊಲ್ಲಾಹ್ ಭದ್ರಕೋಟೆಗಳಲ್ಲಿ ಪೇಜರ್‌ಗಳು ಮತ್ತು “ಸಾಧನಗಳು” ಸ್ಫೋಟಗೊಂಡಿವೆ ಎಂದು ರಾಜ್ಯ ಸುದ್ದಿ ಸಂಸ್ಥೆ ಹೇಳಿದೆ, ಎಎಫ್‌ಪಿ ವರದಿಗಾರರು ಸಹ ಸ್ಫೋಟಗಳ ಸದ್ದನ್ನು ಕೇಳುತ್ತಿದ್ದಾರೆ ಎಂದು ವರದಿ ಮಾಡಿದೆ.
ಹೆಜ್ಬೊಲ್ಲಾಹ್ ಗಳು ಹೊಂದಿದ್ದ ಪೇಜಿನೇಟರ್ ಸಾಧನಗಳು ದೇಶದಾದ್ಯಂತ ಸ್ಫೋಟಗೊಂಡು 12 ಜನರು ಸಾವನ್ನಪ್ಪಿದ್ದು, 2,800 ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಕಣ್ಣಿಗೆ ತೀವ್ರ ಗಾಯಗಳಾಗಿದ್ದು, ಬೆರಳುಗಳು ದೇಹದಿಂದ ಬೇರ್ಪಟ್ಟಿವೆ ಎಂದು ವೈದ್ಯರು ಹೇಳಿದ್ದಾರೆ.