ಸಿಸಿಬಿಐ ಪಾಲನಾ ವರದಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ಬಿಷಪ್ ಜೆರಾಲ್ಡ್ ಲೋಬೊ ನೇಮಕ

ಉಡುಪಿ: ಭಾರತದ ಕ್ಯಾಥೋಲಿಕ್ ಬಿಷಪ್‌ಗಳ ಸಮ್ಮೇಳನ (ಸಿಸಿಬಿಐ)ದ ಪಾಲನಾ ವರದಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರು ನೇಮಕವಾಗಿದ್ದಾರೆ.

ಸಿಸಿಬಿಐ ಅಧ್ಯಕ್ಷ ಫಿಲಿಪ್ ನೇರಿ ಕಾರ್ಡಿನಲ್ ಫೆರಾವೊ ನೇತೃತ್ವದಲ್ಲಿ ಸೆ.11ರಂದು ನಡೆದ ಸಿಸಿಬಿಐ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ಅವರನ್ನು ಸಿಸಿಬಿಐ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈಗಾಗಲೇ ಉಡುಪಿ ಧರ್ಮಪ್ರಾಂತ್ಯದ ಪಾಸ್ಟರಲ್ ಪ್ಲ್ಯಾನ್ 2025 ಇದನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುತ್ತಿದ್ದು ಇದರ ಅಭಿವೃದ್ದಿಯನ್ನು ಕಂಡು ಭಾರತ ಮಟ್ಟದ ಲ್ಯಾಟಿನ್ ರೈಟ್ಸ್ ಕಥೊಲಿಕ್ ಬಿಷಪ್ ಗಳ ನೇತೃತ್ವದ ಸಮಿತಿಗೆ ಬಿಷಪ್ ಜೆರಾಲ್ಡ್ ಲೋಬೊ ಅವರ ಮಾರ್ಗದರ್ಶನದಲ್ಲಿ ಫೆಸಿಲಿಟೇಶನ್ ಕಮಿಟಿಯು ಸಿಸಿಬಿಐನ ಯ ಪ್ಯಾಸ್ಟೋರಲ್ ಯೋಜನೆಯ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಜವಾಬ್ದಾರಿ ಸಮಿತಿಯ ಮೇಲಿದೆ.

ವಿವಿಧ ಆಯೋಗಗಳ ಕಾರ್ಯದರ್ಶಿಗಳು, ಸಮಿತಿ ನಿರ್ದೇಶಕರು ಮತ್ತು ರಾಷ್ಟ್ರೀಯ, ಪ್ರಾದೇಶಿಕ ಮತ್ತು ಧರ್ಮಪ್ರಾಂತ್ಯ ಮಟ್ಟದಲ್ಲಿ ಸಿಸಿಬಿಐಯ ಸಂಯೋಜಕರನ್ನು ಮೇಲ್ವಿಚಾರಣೆ ಮಾಡುವುದು, ಪರಿಶೀಲಿಸುವುದು, ಸಹಾಯ ಮಾಡುವುದು ಮತ್ತು ಉತ್ತೇಜಿಸುವಲ್ಲಿ ಈ ಸಮಿತಿಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಬಿಷಪ್ ಜೆರಾಲ್ಡ್ ಲೋಬೊ ಅವರು ನೇಮಕ ಉಡುಪಿ ಧರ್ಮಪ್ರಾಂತ್ಯದ ಹೆಮ್ಮೆಯ ವಿಚಾರವಾಗಿದ್ದು ಅವರಿಗೆ ಕ್ರೈಸ್ತ ಸಮುದಾಯದ ಪರವಾಗಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!