ಜೇಸಿಐ ಉಪ್ಪುಂದ: ವಿಂಶತಿ ಸಂಭ್ರಮ ಸುಮನಸು- 2024 ಉದ್ಘಾಟನೆ

ಬೈಂದೂರು ಸೆ. 17 : ಜೇಸಿಐ ಉಪ್ಪುಂದ ಇದರ ಏಳು ದಿನಗಳ ವಿಂಶತಿ ಸಂಭ್ರಮ ಸುಮನಸು 2024 ಉದ್ಘಾಟನಾ ಸಮಾರಂಭ ಸೋಮವಾರ ಉಪ್ಪುಂದ ಶಾಲೆಬಾಗಿಲು ಮಾತೃಶ್ರೀ ಸಭಾಭವನದಲ್ಲಿ ನಡೆಯಿತು.

ಉಪ್ಪುಂದ ಸುಮುಖ ಸರ್ಜೀಕಲ್ ಮ್ಯಾನೇಜಿಂಗ್ ಡೈರೆಕ್ಟರ್ ಬಿ.ಎಸ್ ಸುರೇಶ್ ಶೆಟ್ಟಿ ವಿಂಶತಿ ಸಂಭ್ರಮ ಸುಮನಸು 2024 ಉದ್ಘಾಟಿಸಿ ಮಾತನಾಡಿ, ಜೇಸಿ ತತ್ವವು ಎಲ್ಲರನ್ನೂ ಸಮಾನತೆಯೆಡೆ ಕೊಂಡೊಯ್ಯುತ್ತಿದ್ದು, ಉತ್ತಮ ಮಾರ್ಗದರ್ಶನದ ಮೂಲಕ ಸಮಾಜದಲ್ಲಿ ಉತ್ತಮ ಹಾದಿಯಲ್ಲಿ ಮುನ್ನಡೆಯುವಂತೆ ಮಾಡುತ್ತದೆ. ಇದರೊಂದಿಗೆ  ಸಮಾಜಮುಖಿ ಕಾರ್ಯಗಳನ್ನು ನಡೆಸಲು ಪ್ರೇರೆಪಿಸುತ್ತಿದೆ ಎಂದರು.

ಬೆಂಗಳೂರು ದೇವಾಡಿಗರ ಸಂಘ ಅಧ್ಯಕ್ಷ ಹಾಗೂ ರೋಟರಿ ಕ್ಲಬ್ ಬೆಂಗಳೂರು ಮಾಜಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಎನ್ ರಮೇಶ್ ದೇವಾಡಿಗ ವಂಡ್ಸೆ ಇವರಿಗೆ ಜೇಸಿಐ ಉಪ್ಪುಂದ ವತಿಯಿಂದ ಸಾಧನಾಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಜೇಸಿಐ ಉಪ್ಪುಂದ ಸಂಸ್ಥೆ ತೆರೆಮರೆಯಲ್ಲಿ ಹಲವಾರು ಸಮಾಜಮುಖಿ ಕಾರ್ಯ ಮಾಡುತ್ತಿದ್ದು, ಯುವಕರನ್ನು ಸರಿ ದಾರಿಯಲ್ಲಿ ಸಾಗುವ ಪಥ ತೋರಿಸುವ ಸಂಸ್ಥೆಯಾಗಿದೆ. ವ್ಯಕ್ತಿತ್ವ ವಿಕಸನದ ಜೊತೆಗೆ ಸದೃಡ ಯುವ ಸಂಪನ್ಮೂಲವನ್ನು ಜೆ.ಸಿ.ಐ ಸಂಸ್ಥೆ ರೂಪುಗೊಳಿಸುತ್ತದೆ ಎಂದರು.

ಜೇಸಿಐ ಉಪ್ಪುಂದ ಅಧ್ಯಕ್ಷ ಮಂಜುನಾಥ ದೇವಾಡಿಗ ವಿಂಶತಿ ಸಂಭ್ರಮ ಸುಮನಸು 2024‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಉಪ್ಪುಂದ ಸರ್ಕಾರಿ ಪದವಿ ಕಾಲೇಜಿನ ಪ್ರೌಢಶಾಲಾ ಶಿಕ್ಷಕ ಮಂಜುನಾಥ ಶೆಟ್ಟಿ, ಹೇರಂಜಾಲು ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಜಯಾನಂದ ಪಟಗಾರ್ ಇವರನ್ನು ಜೇಸಿಐ ಉಪ್ಪುಂದ ವಿಂಶತಿ ಸಂಭ್ರಮ ಸುಮನಸು 2024‌ ಸಮಾರಂಭದಲ್ಲಿ ಗುರುತಿಸಿ ಸನ್ಮಾನಿಸಲಾಯಿತು.

ಉಪ್ಪುಂದ ದೇವಾಡಿಗ ಸಂಘದ ಗೌರವಾಧ್ಯಕ್ಷ ಜರ್ನಾದನ ಎಸ್ ದೇವಾಡಿಗ, ಉಪ್ಪುಂದ ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನಚಂದ್ರ, ಮಾತೃಶ್ರೀ ಸಭಾಭವನ ಉಪ್ಪುಂದ ಮಾಲೀಕ ಎ ಮಂಜು ದೇವಾಡಿಗ ಅರೆಹಾಡಿ, ಜೇಸಿಐ ಸ್ಥಾಪಕಾಧ್ಯಕ್ಷ ದಿವಾಕರ ಶೆಟ್ಟಿ, ಜೇಸಿಐ ಉಪ್ಪುಂದದ ಪೂರ್ವಾಧ್ಯಕ್ಷರಾದ ಗಿರೀಶ್ ಶ್ಯಾನುಭಾಗ್, ರಾಮಕೃಷ್ಣ ದೇವಾಡಿಗ, ನಿಕಟಪೂರ್ವಾಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ,‌ಲೇಡಿ ಜೇಸಿ ಅಧ್ಯಕ್ಷೆ ಸುಮನ ಎಮ್ ದೇವಾಡಿಗ, ಜೇಸಿಐ ಸೀನಿಯರ್ ಚೇಂಬರ್ ಬೈಂದೂರು ಅಧ್ಯಕ್ಷ ಅಚ್ಚುತ್ತ ಬಿಲ್ಲವ, ಕಾರ್ಯಕ್ರಮದ‌ ಯೋಜನಾಧಿಕಾರಿಗ ಳಾದ ಜಯರಾಜ್,  ಸಂದೀಪ್ ನಾಯ್ಕ್, ಚಂದ್ರ ದೇವಾಡಿಗ,‌ಜೇಸಿಐ‌ ಉಪ್ಪುಂದ ಕಾರ್ಯದರ್ಶಿ ನರಸಿಂಹ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜೇಸಿಐ ಉಪ್ಪುಂದ ವಿಂಶತಿ ಸಂಭ್ರಮ ಸುಮನಸು 2024 ಸಪ್ತಾಹ ಸಭಾಪತಿ ಗುರುರಾಜ್ ಹೆಬ್ಬಾರ್ ಸ್ವಾಗತಿಸಿದರು. ಜ್ಯೂನಿಯರ್ ಜೇಸಿ ಅಧ್ಯಕ್ಷೆ ಸಂಜನಾ ಜೇಸಿವಾಣಿ ವಾಚಿಸಿದರು. ಯೋಜನಾಧಿಕಾರಿ ಶಿವಾನಂದ ಕೆರ್ಗಾಲ್ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಜೇಸಿಐ ಉಪ್ಪುಂದ ಸದಸ್ಯರಿಂದ ರಾಣಿ ಶಶಿಪ್ರಭೆ ಯಕ್ಷಗಾನ ಪ್ರದರ್ಶನ ನಡೆಯಿತು.

Leave a Reply

Your email address will not be published. Required fields are marked *

error: Content is protected !!