ಜಿಲ್ಲಾಡಳಿತ/ಪೊಲೀಸ್ ಇಲಾಖೆಯ ಏಕಪಕ್ಷೀಯ ನಿರ್ಧಾರ- ಶಾಸಕ ಸುನಿಲ್ ಕುಮಾರ್ ಆಕ್ರೋಶ

Oplus_131072

ಉಡುಪಿ, ಸೆ.17: ಉಡುಪಿಯಲ್ಲಿ ಈಗ ಪ್ರಜಾಪ್ರಭುತ್ವ ನೆಲೆಯ ಹೋರಾಟಕ್ಕೆ ಅವಕಾಶ ನೀಡುತ್ತಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾದ ವಿಚಾರ ಎಂದು ಮಾಜಿ ಸಚಿವ ಹಾಗೂ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲೀಗ ಪ್ರತಿಭಟನಾಕಾರರ ಮೇಲೆಯೇ ಮೊಕದ್ದಮೆ ಹಾಕಲಾಗುತ್ತಿದೆ. ಈಗಾಗಲೇ ಪ್ರತಿಭಟಿಸಿದ ಉಡುಪಿ ಶಾಸಕರ ಮೇಲೆ ಮೊಕದ್ದಮೆ ಹಾಕಿದ್ದಾರೆ. ಪ್ರತಿಭಟನೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಆದರೂ ಹಲವರ ಮೇಲೆ ಕೇಸು ಹಾಕಲಾಗಿದೆ ಎಂದವರು ತಿಳಿಸಿದರು.

ಕೂಡಲೇ ಯಶ್ಪಾಲ್ ಸುವರ್ಣ ಮತ್ತು ಕಾರ್ಯಕರ್ತರ ಮೇಲೆ ಹಾಕಲಾದ ಮೊಕದ್ದಮೆಯನ್ನು ವಾಪಸ್ ಪಡೆಯಬೇಕು. ಯಾವುದೇ ಅನಗತ್ಯ ಅನಾಹುತಗಳಿಗೆ ಅವಕಾಶ ಮಾಡಿಕೊಡಬೇಡಿ ಎಂದರು. ಕರಾವಳಿ ಮೂರು ಜಿಲ್ಲೆಗಳ ಉಸ್ತುವಾರಿ ಸಚಿವರು ಅಲ್ಲಿನ ಶಾಸಕರ ಅಹವಾಲುಗಳನ್ನು ಆಲಿಸಬೇಕು ಎಂದು ಹೇಳಿದ ಸುನಿಲ್‌ಕುಮಾರ್, ಜಿಲ್ಲೆಯಲ್ಲಿ ಈಗ ಜನ ಪ್ರತಿನಿಧಿಗಳಿಗಿಂತ ಹೆಚ್ಚಿನ ಆದ್ಯತೆ ಕಾಂಗ್ರೆಸ್ ಕಾರ್ಯಕರ್ತರಿಗೆ, ನಾಯಕರಿಗೆ ಸಿಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯದ ಸಂಕೇತ ಎಂದರು.

ಇಲ್ಲಿನ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದೆ. ಈ ಬಗ್ಗೆ ರಾಜ್ಯದ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ದೂರು ನೀಡುತ್ತೇವೆ ಎಂದೂ ಅವರು ತಿಳಿಸಿದರು.

ಪ್ರಚೋದನಕಾರಿ ಹೇಳಿಕೆ ಕಾರಣ: ಬಿ.ಸಿ.ರೋಡ್‌ ನಲ್ಲಿ ಅತಿರೇಕದ ವರ್ತನೆಯ ಹೇಳಿಕೆಯನ್ನು ನೀಡಲಾಗಿತ್ತು. ಇದು ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು. ಪ್ರಚೋದನಕಾರಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಸುನಿಲ್‌ಕುಮಾರ್ ಹೇಳಿದರು.

ನಿಮ್ಮ ಯುವಕರನ್ನು ಹದ್ದುಬಸ್ತಿನಲ್ಲಿಡುವ ಕಾರ್ಯ ಮಾಡಿ ಎಂದು ಮುಸ್ಲಿಂ ಮುಖಂಡರಿಗೆ ಎಚ್ಚರಿಕೆ ನೀಡಿದ ಅವರು, ನಿಮ್ಮ ಯುವಕನರನ್ನು ನಿಯಂತ್ರಣದಲ್ಲಿಡದಿದ್ದರೆ ಮುಂದಿನ ದಿನಗಳಲ್ಲಿ ಮುಸ್ಲಿಂರಿಗೆ ಯಾವುದೇ ಮೆರವಣಿಗೆ ನಡೆಸಲು ಸಾಧ್ಯವಾಗಲಿಕ್ಕಿಲ್ಲ. ಹೀಗಾಗಿ ಬಹಿರಂಗವಾಗಿ ಸವಾಲು ಹಾಕುವುದನ್ನು ನಿಲ್ಲಿಸಿ. ಇದನ್ನೊಂದು ಎಚ್ಚರಿಕೆಯಾಗಿ ಪರಿಗಣಿಸಿ ಎಂದರು.

ನಿಮ್ಮ ಹತ್ತಾರು ಸವಾಲುಗಳನ್ನು ಎದುರಿಸಲು ನಮ್ಮ ಯುವಕರು ತಯಾರಿದ್ದೇವೆ. ಸೌಹಾರ್ದತೆ ಹಾಳು ಮಾಡುವ ಕೆಲಸ ಮಾಡಬೇಡಿ. ಹಿಂದುಗಳಿಗೆ ಗೌರವ ಕೊಟ್ಟು ಜೀವನ ನಡೆಸುವುದನ್ನು ಕಲಿಯಿರಿ. ಇದು ಮುಸಲ್ಮಾನ ಯುವಕರಿಗೆ ಹಾಗೂ ಧಾರ್ಮಿಕ ಮುಖಂಡರಿಗೆ ನಮ್ಮ ಆಗ್ರಹ ಎಂದವರು ಹೇಳಿದರು.

ಮುನಿರತ್ನರಿಂದ ಸ್ಪಷ್ಟನೆ ಕೇಳಿದ್ದೇವೆ

ಪಕ್ಷದ ಶಾಸಕ ಮುನಿರತ್ನ ಅವರ ಬಂಧನದ ಕುರಿತಂತೆ ಪ್ರಶ್ನಿಸಿದಾಗ, ಘಟನೆಯ ಕುರಿತಂತೆ ಪಕ್ಷದ ವತಿಯಿಂದ ನಾವು ಸ್ಪಷ್ಟನೆ ಕೇಳಿದ್ದೇವೆ. ನಾನು ಮುನಿರತ್ನ ಪ್ರಕರಣದ ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಆದರೆ ಜನಪ್ರತಿನಿಧಿಗಳಾದವರು ಎಚ್ಚರಿಕೆಯಿಂದ ಇರಬೇಕು ಎಂದರು.

ಆದರೆ ರಾಜ್ಯ ಸರಕಾರ ಪ್ರಕರಣದಲ್ಲಿ ಧ್ವೇಷಪೂರಿತ ವಾಗಿ ನಡೆದುಕೊಳ್ಳು ತ್ತಿದೆ. ಧ್ವೇಷದ ಭಾವನೆ ಬಿಟ್ಟು ಜನಪ್ರತಿನಿಧಿಗಳ ಗೌರವ ಕಾಪಾಡಿ ಎಂದು ಮನವಿ ಮಾಡಿದ ಅವರು ಇಡೀ ಪ್ರಕರಣದ ಹಿನ್ನೆಲೆ ಏನು ಅನ್ನೋದು ತನಿಖೆಯ ಮೂಲಕ ಹೊರಬರಬೇಕು ಎಂದರು.

Leave a Reply

Your email address will not be published. Required fields are marked *

error: Content is protected !!