ಮಂಗಳೂರು: ಕ್ರೈಸ್ತ ಮುಖಂಡರಿಗೆ ಸನ್ಮಾನ

ಮಂಗಳೂರು: ಸಮಾಜದಲ್ಲಿ ವಿವಿಧ ಹುದ್ದೆ ವಹಿಸಿಕೊಂಡ ಕ್ರೈಸ್ತ ಮುಖಂಡರನ್ನು ಸನ್ಮಾನಿಸುವ ಕಾರ್ಯಕ್ರಮ, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ ನಗರದಲ್ಲಿ ನೆರವೇರಿತು.

ಮಂಗಳೂರು ಧರ್ಮಪ್ರಾಂತ್ಯದ ನೂತನ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ನೇಮಕಗೊಂಡ ರೊಯ್ ಕ್ಯಾಸ್ತೆಲಿನೊ, ಕರ್ನಾಟಕ ಸರಕಾರದ ಯೋಜನಾ ಆಯೋಗದ ಸದಸ್ಯರಾಗಿ ಆಯ್ಕೆಯಾದ ಮಾರ್ಸೆಲ್ ಮೊಂತೇರೊ ಹಾಗೂ ಗೇರುಬೀಜ ಉತ್ಪಾದಕರ ಸಂಘಟನೆಯ ನೂತನ ಅಧ್ಯಕ್ಷ ಸಂತೋಷ್ ಡಿಸಿಲ್ವಾ ನಿಟ್ಟೆ ಇವರನ್ನು ಶಾಲು ಹೊದಿಸಿ, ಫಲ ಪುಷ್ಪ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸನ್ಮಾನ ಕಾರ್ಯಕ್ರಮದಲ್ಲಿ ನಗರದ ಪ್ರಮುಖ ಉದ್ಯಮಿಗಳು ಹಾಗೂ ಕ್ರೈಸ್ತ ಮುಖಂಡರಾದ ಗಿಲ್ಬರ್ಟ್ ಡಿಸೋಜ, ಫೆರ್ನಾಂಡಿಸ್, ಡಾ. ಎರೊಲ್ ಪಿಂಟೊ, ಪ್ರೊ. ಎಡ್ಮಂಡ್ ಫ್ರಾಂಕ್, ರಿಚಾರ್ಡ್ ರಾಡ್ರಿಗಸ್, ರಾಲ್ಫಿ ಡಿಕೋಸ್ತಾ, ಲೂವಿಸ್. ಜೆ ಪಿಂಟೊ, ಡಾ. ಡೆರಿಕ್ ಲೋಬೊ, ಎಲಿಯಾಸ್ ಸಾಂಕ್ತಿಸ್, ವಿಕ್ಟರ್ ಮತಾಯಸ್, ರೋಹನ್ ಮೊಂತೇರೊ, ರೊನಾಲ್ಡ್ ಗೋಮ್ಸ್, ಅನಿಲ್ ಲೋಬೊ, ಸ್ಟ್ಯಾನಿ ಆಲ್ವಾರಿಸ್, ಕ್ಯಾಪ್ಟನ್ ಜೊನ್ ಪ್ರಸಾದ್ ಮಿನೇಜಸ್, ಕ್ಯಾಪ್ಟನ್ ವಿನ್ಸೆಂಟ್ ಪಾಯ್ಸ್, ಲಾರೆನ್ಸ್ ಡಿಸೋಜ, ಆಲಿಸ್ಟರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!