ಹಿರಿಯಡ್ಕ: ಕೋಳಿ ಅಂಕಕ್ಕೆ ದಾಳಿ- ಆರು ಮಂದಿ ಬಂಧನ

ಹಿರಿಯಡ್ಕ, ಸೆ.16: ಬೆಳ್ಳಂಪಳ್ಳಿ ಗ್ರಾಮದ ಭೂತರಾಜ ದೇವಸ್ಥಾನ ಬಳಿ ಸೆ.13ರಂದು ಕೋಳಿ ಅಂಕ ನಡೆಸುತ್ತಿದ್ದ ಆರು ಮಂದಿಯನ್ನು ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ.

ರವೀಂದ್ರ, ಪ್ರಕಾಶ್, ಸುರೇಶ್, ಸೀತಾರಾಮ, ರವಿಕುಮಾರ್, ಮೋಹನ್ ಬಂಧಿತ ಆರೋಪಿಗಳು. ಉಳಿದವರು ಓಡಿ ಹೋಗಿದ್ದಾರೆಂದು ತಿಳಿದು ಬಂದಿದೆ. ಬಂಧಿತರಿಂದ 4 ಕೋಳಿ ಹುಂಜಗಳು ಹಾಗೂ 690ರೂ. ನಗದು ವಶಪಡಿಸಿ ಕೊಳ್ಳಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!