ಲವ್ ಜಿಹಾದ್ ತಡೆಯಲು ಹಿಂದೂ ಯುವಕರು ಶಸ್ತ್ರವನ್ನು ಹಿಡಿದು ನಿಂತಿದ್ದಾರೆ: ಸುನಿಲ್ ಕೆ.ಆರ್
ಪೆರ್ಡೂರು: (ಉಡುಪಿ ಟೈಮ್ಸ್ ವರದಿ)‘ಹಿಂದೂ ಸಮಾಜವನ್ನು ಅಧೀರಗೊಳಿಸಲು ಸಾಧ್ಯವಿಲ್ಲ. ಹಿಂದೂಗಳ ಸಂಸ್ಕೃತಿ, ಸಂಸ್ಕಾರ, ಶ್ರದ್ಧಾ ಕೇಂದ್ರ, ಹೆಣ್ಣು ಮಕ್ಕಳ ಮೇಲೆ ದಾಳಿ ಖಂಡನೀಯ. ಭಾರತದಲ್ಲಿ ಯಾವುದೇ ರೀತಿಯ ಇಸ್ಲಾಮೀಕರಣ ನಡೆಸಲು ಸಾಧ್ಯವಿಲ್ಲ’ ಎಂದು ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಪೆರ್ಡೂರಿನಲ್ಲಿ ಹಿಂದೂ ಯುವತಿಯನ್ನು ಮುಸ್ಲಿಂ ಯುವಕ ಅಪಹರಿಸಿದ ಪ್ರಕರಣ ಖಂಡಿಸಿ, ರಾಜ್ಯದಲ್ಲಿ ಶೀಘ್ರವಾಗಿ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಪೆರ್ಡೂರಿನ ರಥಬೀದಿಯಲ್ಲಿ ಹಿಂದೂ ಹಿತರಕ್ಷಣಾ ವೇದಿಕೆ ಆಯೋಜಿಸಿದ್ದ ‘ಪೆರ್ಡೂರು ಚಲೋ’ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪೆರ್ಡೂರಿನಲ್ಲಿ ನಡೆದ ಪ್ರಕರಣದ ಬಳಿಕ ಸರ್ಕಾರವು ಲವ್ ಜಿಹಾದ್ ವಿರುದ್ಧ ಕಾನೂನನ್ನು ಜಾರಿಗೊಳಿಸುವ ಚಿಂತನೆ ನಡೆಸಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ವ್ಯಾಪಕವಾಗಿ ನಡೆಯುತ್ತಿರುವ ಈ ಲವ್ ಜಿಹಾದ್ ಎಂಬ ಷಡ್ಯಂತ್ರದ ವಿರುದ್ಧ ಪ್ರತಿ ಗ್ರಾಮಗಳಲ್ಲಿ ಹಿಂದೂ ಗಳು ಜಾಗೃತಗೊಂಡು ಸಂಘಟಿತರಾಗಬೇಕು’ ಎಂದರು.
ಲವ್ ಜಿಹಾದ್ ಅನ್ನು ನಾವು ಮಟ್ಟ ಹಾಕಲೇ ಬೇಕು, ಹಲವಾರು ಪ್ರಕರಣಗಳಲ್ಲಿ ನಾವು ನಮ್ಮ ಹೆಣ್ಣು ಮಕ್ಕಳನ್ನು ಕಳೇದುಕಂಡಿದ್ದೇವೆ. ಎಲ್ಲದಕ್ಕೂ ಕಾನೂನು ಇದೆ ಎನ್ನುತ್ತೀರಿ ಆದರೆ ಕಾನೂನು ಎಂದಿಗೂ ಹಿಂದೂ ಸಮಾಜಕ್ಕೆ ಒಳ್ಳೆಯತನವನ್ನು ತೋರಿಸಿಲ್ಲ. ಈ ಪರಿಸ್ಥಿತಿಯನ್ನು ಮೆಟ್ಟಿ ನಿಲ್ಲಲು ನಾವು ದೇವರ ಮೊರೆ ಹೋಗಲೇ ಬೇಕು.
ಹಿಂದೂಗಳ ಶ್ರದ್ದಾಕೇಂದ್ರಗಳ ಮೇಲೆ, ನಮ್ಮ ಭಾವನೆಗಳ ಮೇಲೆ ಆಗುವ ಹಾನಿಯನ್ನು ಹಿಂದೂ ಸಮಾಜ ಎಂದಿಗೂ ಸಹಿಸುವುದಿಲ್ಲ. ನಾವು ನಂಬುವ ದೈವ ದೇವರುಗಳನ್ನು ಪ್ರಾರ್ಥಿಸಿದರೆ ನೀವುಗಳು ಪಾಕಿಸ್ತಾನಕ್ಕೆ ಹೋಗಬೇಕಾದ ದಿನ ಬರುತ್ತದೆ” ಎಂದು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ
ಬಜರಂಗದಳದ ದಕ್ಷಿಣ ಪ್ರಾಂತ್ಯದ ಸಂಚಾಲಕ ಸುನಿಲ್ ಕೆ.ಆರ್. ಮಾತನಾಡಿ, ‘ಇಂದು ಭಾರತದ ಮೇಲೆ ಭಯೋತ್ಪಾದಕ, ಲವ್ ಜಿಹಾದ್, ಮತಾಂತರ, ಲ್ಯಾಂಡ್ ಜಿಹಾದ್ ದಾಳಿ ನಡೆಯುತ್ತಿದೆ. ಈ ಎಲ್ಲಾ ದಾಳಿಗಳನ್ನು ಎದುರಿಸಿ ನಿಂತು ಅದಕ್ಕೆ ತಕ್ಕದಾದ ಉತ್ತರ ನೀಡಲು ಹಿಂದೂ ಸಂಘಟನೆಗಳಿಗೆ ಗೊತ್ತಿದೆ. ಹಿಂದೂ ಹೆಣ್ಣು ಮಕ್ಕಳನ್ನು ಕಾಪಾಡಲು ಹಿಂದೂ ಯುವಕರು ಶಾಸ್ತ್ರ ಜತೆಗೆ ಶಸ್ತ್ರವನ್ನು ಹಿಡಿದು ನಿಂತಿದ್ದಾರೆ’ ಎಂದರು.
ಜಿಲ್ಲಾ ಮಾತೃ ಶಕ್ತಿ ಪ್ರಮುಖ್ ಪೂರ್ಣಿಮಾ ಸುರೇಶ್ ನಾಯಕ್, ಶಾಸಕ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಉಪಾಧ್ಯಕ್ಷ ಯಶಪಾಲ್ ಸುವರ್ಣ, ಕಾಪು ಬಿ.ಜೆ.ಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಜಿಲ್ಲಾ ವಿಶ್ವಹಿಂದೂ ಪರಿಷತ್‌ನ ದಿನೇಶ್ ಮೆಂಡನ್, ಸಂತೋಷ ಕುಮಾರ್ ಬೈರಂಪಳ್ಳಿ ಇದ್ದರು.