ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆ: ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ
ಉಡುಪಿ: ಸಾಫ್ಟ್ ವೇರ್ ಉದ್ಯಮಿ ಪ್ರಕಾಶ್ ಪೈ ಅವರು ಅಲೆವೂರಿನ ಶಾಂತಿನಿಕೇತನ ಆಂಗ್ಲಮಾಧ್ಯಮ ಶಾಲೆಗೆ ಕೊಡುಗೆ ನೀಡಿದ π (ಪೈ) ಕಂಪ್ಯೂಟರ್ ಲ್ಯಾಬ್ ನ ಉದ್ಘಾಟನೆ ಇತ್ತೀಚೆಗೆ ನಡೆಯಿತು.
ಕಂಪ್ಯೂಟರ್ ಲ್ಯಾಬೊರೇಟರಿಯು ಇನ್‌ಬಿಲ್ಟ್ ಸಿಪಿಯು, ಪಾಪ್ ಅಪ್ ಕ್ಯಾಮರಾ, ಸ್ಪೀಕರ್ ಒಳಗೊಂಡ ಎಚ್ ಪಿ ಬ್ರಾಂಡಿನ 20 ಅತ್ಯಾಧುನಿಕ ಕಂಪ್ಯೂಟರ್‌ಗಳು, ನೂತನ ವಿನ್ಯಾಸದ ಪೀಠೋಪಕರಣಗಳು, ಪ್ರತ್ಯೇಕ ವಿದ್ಯುತ್ ಸಂಪರ್ಕ ಹಾಗೂ ಇನ್ವರ್ಟರ್ ಬ್ಯಾಕ್ ಅಪ್, ಎಲ್ಇಡಿ ಪ್ರಾಜೆಕ್ಟರ್, ಕಲರ್ ಪ್ರಿಂಟರ್, ಹವಾನಿಯಂತ್ರಣ ವ್ಯವಸ್ಥೆ, ಸಿಸಿ ಕ್ಯಾಮರಾ, ಇಂಟರ್ನೆಟ್ ವೈಫೈ ಸೌಲಭ್ಯ ಹೊಂದಿದೆ. ಕಂಪ್ಯೂಟರ್ ಲ್ಯಾಬನ್ನು ಪ್ರದ್ನ್ಯಾ ಪ್ರಕಾಶ್ ಪೈ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಉದ್ಯಮಿ ಪ್ರಕಾಶ್ ಪೈ, ಶಾಂತಿನಿಕೇತನ ಶಾಲೆಗೆ ಕಂಪ್ಯೂಟರ್ ಲ್ಯಾಬ್ ಕೊಡುಗೆ ಅಥವಾ ದಾನ ಅನ್ನುವುದಕ್ಕಿಂತ, ದೇಶದ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಇದೊಂದು ಹೂಡಿಕೆಯಾಗಲಿ. ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶದ ಆಸ್ತಿಯಾಗಲಿ ಎಂದರು.
ಶಾಲಾ ಸಂಚಾಲಕ ಎ. ದಿನೇಶ್ ಕಿಣಿ ಮಾತನಾಡಿದರು. ಅಲೆವೂರು ಗ್ರೂಪ್ ಫೊರ್ ಎಜುಕೇಶನ್ ಅಧ್ಯಕ್ಷ ಎ. ಗಣಪತಿ ಕಿಣಿ, ಆಡಳಿತ ಮಂಡಳಿ ಸದಸ್ಯೆ ಶಾಂತಿ ಜಿ. ಕಿಣಿ, ಕೋಶಾಧಿಕಾರಿ ಹರೀಶ್ ಕಿಣಿ, ಸಲಹಾ ಮಂಡಳಿ ಸದಸ್ಯ ಡಾ. ಕೆ.ಕೆ. ಕಲ್ಕೂರ್, ರೋಟರಿ ಉಡುಪಿ ಅಧ್ಯಕ್ಷ ಸುರೇಶ್ ಪ್ರಭು, ವಿಜಯಾ ಪೈ, ರಮಾನಂದ ಭಟ್, ಶಾಲಾ ಮ್ಯಾನೇಜರ್ ಪ್ರಶಾಂತ್ ನಾಯಕ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ರೂಪಾ ಡಿ. ಕಿಣಿ ಸ್ವಾಗತಿಸಿದರು. ಸಹಾಯಕ ಮುಖ್ಯೋಪಾಧ್ಯಾಯಿನಿ ಸುಮನಾ ಬಿ.ಆರ್. ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಶ್ರವ್ಯಾ ರೋಹಿತ್ ವಂದಿಸಿದರು.