ಉಡುಪಿ: ನಿವೃತ್ತ ಶಿಕ್ಷಕಿ ಶೌಚಾಲಯದಲ್ಲಿ ಕುಸಿದು ಬಿದ್ದು ಮೃತ್ಯು

ಉಡುಪಿ, ಸೆ.12(ಉಡುಪಿ ಟೈಮ್ಸ್ ವರದಿ): ನಿವೃತ್ತ ಶಿಕ್ಷಕಿರೊಬ್ಬರು ಮನೆಯ ಶೌಚಾಲಯದಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಿಟ್ಟೂರಿನಲ್ಲಿ ಇಂದು ನಡೆದಿದೆ.

ಹಿರಿಯ ವಕೀಲ ದಿವಂಗತ ವಿಲಿಯಂ ಪಿಂಟೋ ಅವರ ಪತ್ನಿ ರೋಸಿ ವಿಲಿಯಂ ಪಿಂಟೋ(72) ಎಂದು ಗುರುತಿಸಲಾಗಿದೆ.

ನಿಟ್ಟೂರು ಶಾಲೆಯ ನಿವೃತ್ತ ಶಿಕ್ಷಕಿಯಾಗಿದ್ದ ಇವರು, ಮನೆಯಲ್ಲಿ ಒಂಟಿಯಾಗಿ ವಾಸ ಮಾಡುತ್ತಿದ್ದರು. ಇವರ ಮಕ್ಕಳು ಕರೆ ಮಾಡಿವಾಗ ಕರೆ ಎತ್ತದೆ ಇದ್ದ ಕಾರಣ ಮನೆಗೆ ಬಂದು ನೋಡುವಾಗ ಇವರು ಬಾತ್‌ರೂಮಿನಲ್ಲಿ ಕುಸಿದು ಬಿದ್ದು ಮೃತಪಟ್ಟಿರುವುದು ತಿಳಿದುಬಂದಿದೆ.

ಸ್ಥಳಕ್ಕೆ ನಗರ ಠಾಣಾ ಅಧಿಕಾರಿ ಪುನೀತ್ ಕುಮಾರ್ ಬಿ.ಈ., ಎಎಸ್ಸೈ ನವೀನ್ ದೇವಾಡಿಗ ಭೇಟಿ ನೀಡಿ ಪರಿಶೀಲಿಸಿದರು.

Leave a Reply

Your email address will not be published. Required fields are marked *

error: Content is protected !!