ಅಮೆರಿಕ: ಮುಸ್ಲಿಮ್ ನಿಷೇಧದ ಆದೇಶ ಹಿಂಪಡೆಯಲಿರುವ ಜೋ ಬೈಡನ್
ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಆಯ್ಕೆ ಖಚಿತವಾಗುತ್ತಿದ್ದಂತೆಯೇ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೆಲವು ಆದೇಶಗಳನ್ನು ಮಾರ್ಪಾಡು ಮಾಡುವ ಸೂಚನೆಗಳು ವರದಿಯಾಗಿದೆ.
ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗುತ್ತಿದ್ದಂತೆಯೇ ಕೆಲವು ವಿವಾದಾತ್ಮಕ ಆದೇಶಗಳನ್ನು ಹೊರಡಿಸಿದ್ದರು. ಇದರಲ್ಲಿ ಮುಸ್ಲಿಂ ಸಂಘಟನೆಯ ನಿಷೇಧದ ಆದೇಶವನ್ನು ಹಿಂಪಡೆಯುವ ಘೋಷಣೆಯನ್ನು ಬೈಡನ್ ಆಡಳಿತ ಮಾಡಿದೆ.
ಇರಾಕ್, ಸಿರಿಯಾ ಸೇರಿದಂತೆ ಮುಸ್ಲಿಂ ಬಾಹುಳ್ಯವಿರುವ ದೇಶಗಳಿಂದ ವಲಸೆ ಬರುವವರಿಗೆ ಸರಣಿ ಆದೇಶಗಳ ಮೂಲಕ ಟ್ರಂಪ್ ನಿಷೇಧ ವಿಧಿಸಿದ್ದರು.
ಜೋ ಬೈಡನ್ ಅವರು ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಟ್ರಂಪ್ ಅವಧಿಯಲ್ಲಿ ಜಾರಿಗೊಳಿಸಲಾಗಿದ್ದ ಮುಸ್ಲಿಂ ನಿಷೇಧ ಆದೇಶವನ್ನು ಹಿಂಪಡೆಯಲಿದ್ದಾರೆ ಎಂದು ಜೋ ಬೈಡಾನ್ ತಂಡ ಹೇಳಿದೆ.