ಉಡುಪಿ: ಶಾಲೆಗೆ ಹೋಗದೆ ತಪ್ಪಿಸಿಕೊಂಡ 3ನೇ ತರಗತಿ ವಿದ್ಯಾರ್ಥಿಯ ರಕ್ಷಣೆ

Oplus_131072

ಉಡುಪಿ, ಸೆ.12; ಸರ್ವಿಸ್ ಬಸ್ಸು ನಿಲ್ದಾಣದಲ್ಲಿ ಶಾಲಾ ಸಮವಸ್ತ್ರದಲ್ಲಿದ್ದ ಬಾಲಕನ ಅನುಮಾನಸ್ಪದ ಚಲನವಲನ ಗಮನಿಸಿದ ಸಮಾಜಸೇವಕ ನಿತ್ಯಾನಂದ ಒಳಕಾಡುವರು, ಬಾಲಕನ ವಶಕ್ಕೆ ಪಡೆದು, ಬಳಿಕ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಿರುವ ವಿದ್ಯಮಾನ ಬುಧವಾರ ನಡೆದಿದೆ. ಮಕ್ಕಳ ರಕ್ಷಣಾ ಘಟಕದ ಚಕ್ರತೀರ್ಥ, ಪ್ರಮೋದ್, ರಾಜೇಶ್ ಹಸ್ತಾಂತರ ಪ್ರಕ್ರಿಯೆಯಲ್ಲಿ ಉಪಸ್ಥಿತರಿದ್ದರು.

ರಕ್ಷಿಸಲ್ಪಟ್ಟ ಬಾಲಕ ದೊಡ್ಡಣಗುಡ್ಡೆಯ ಬಾಲಕರ ಬಾಲಭವನದಲ್ಲಿ ಆಶ್ರಯದಲ್ಲಿದ್ದವನು, ನಿಟ್ಟೂರಿನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 3 ನೇ ತರಗತಿ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಬಾಲಕರ ಭವನದಿಂದ ಶಾಲೆಗೆಂದು ತೆರಳಿದ ಬಾಲಕನು, ಶಾಲೆಗೆ ಹೋಗದೆ, ಮರಳಿ ಬಾಲಕರ ಭವನಕ್ಕೂ ಬಾರದೆ ನಾಪತ್ತೆಯಾಗಿದ್ದನು. ಬಾಲಕ ಕಾಣೆಯಾಗಿರುವ ಬಗ್ಗೆ ಬಾಲಕರ ಭವನದವರು ಪೋಲಿಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದರು. ಬಾಲಕ ಬಸ್ಸು ನಿಲ್ದಾಣದಲ್ಲಿರುವ ಪ್ರಯಾಣಿಕರಲ್ಲಿ ಹಣ ಯಾಚಿಸುತ್ತಿದ್ದ ಸಂದರ್ಭ ಅನುಮಾನ ವ್ಯಕ್ತವಾಗಿತ್ತು. ಹಣ ಸಂಗ್ರಹಗೊಂಡ ಬಳಿಕ ಬಾಲಕನು ಬಸ್ಸಿನಲ್ಲಿ ಬೇರೆ ಊರಿಗೆ ಪಲಾಯನಗೈಯುವ ಉದ್ಧೇಶ ಹೊಂದಿದ್ದ ಎಂದು ತಿಳಿದುಬಂದಿದೆ. ಒಳಕಾಡುವರ ಸಮಯ ಪ್ರಜ್ಞೆಯಿಂದ ಬಾಲಕ ರಕ್ಷಿಸಲ್ಪಟ್ಟಿದ್ದಾನೆ. ಶಿಕ್ಷಣ ಇಲಾಖೆಯವರು ತಕ್ಷಣ ಮಕ್ಕಳ ರಕ್ಷಣೆಗೆ ನಿಟ್ಟೂರಿನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಸಿ. ಸಿ. ಕ್ಯಾಮರ ಅಳವಡಿಸಬೇಕೆಂದು ಒಳಕಾಡುವರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!