‘ಉಡುಪಿ ಟೈಮ್ಸ್’ ಹಾಗೂ ‘ಕೆಮ್ಮಲೆ ಗ್ರೂಪ್ಸ್’ ಮುದ್ದು ಕೃಷ್ಣ – ಕೃಷ್ಣ ಬಲ ಚೈತನ್ಯದ ಬಹುಮಾನ ವಿತರಣೆ
ಉಡುಪಿ (ಉಡುಪಿ ಟೈಮ್ಸ್ ವರದಿ): ಉಡುಪಿ ಕೃಷ್ಣ ನೆಲೆವೀಡು ಇಲ್ಲಿ ಕೃಷ್ಣ ಆರಾಧ್ಯ ದೈವ, ಮುದ್ದು ಮಕ್ಕಳಲ್ಲಿ ಕೃಷ್ಣನ ನೋಡೋದೇ ಹೆತ್ತವರಿಗೆ ಆನಂದ. ಆದರೆ ಈ ಕೊರೋನಾ ಸಂದರ್ಭದಲ್ಲಿ ಅದೆಲ್ಲದಕ್ಕೂ ಬ್ರೇಕ್ ಬಿದ್ದಿತು. ಆದರೆ ‘ಉಡುಪಿ ಟೈಮ್ಸ್’ ಮಾಧ್ಯಮ ಮುದ್ದು ಕೃಷ್ಣ ವೇಷದ ಫೋಟೋ ಸ್ಪರ್ಧೆಯನ್ನಾಗಿ ಮಾಡಿ ಜನ ಮತ್ತೊಮ್ಮೆ ಸಂಭ್ರಮ ಪಡುವಂತೆ ಮಾಡಿದ್ದಾರೆ ಎಂದು ಕೆ. ಆರ್.ಎಸ್. ಪಕ್ಷದ ರಾಜ್ಯ ಉಪಾಧ್ಯಕ್ಷ ಅಮೃತ್ ಶೆಣೈ ನುಡಿದರು.
ಉಡುಪಿಯ ಹಿಂದಿ ಪ್ರಸಾರ ಭವನದಲ್ಲಿ ನಡೆದ “ಉಡುಪಿ ಟೈಮ್ಸ್” ಹಾಗೂ “ಕೆಮ್ಮಲೆ ಗ್ರೂಪ್” ಪ್ರಸ್ತುತ ಪಡಿಸಿದ ಮುದ್ದು ಕೃಷ್ಣ ಹಾಗೂ ಕೃಷ್ಣ ಬಲ ಚೈತನ್ಯದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಕೃಷ್ಣ ವೇಷ ಹಾಕಿ ಅವರಲ್ಲಿ ಕೃಷ್ಣನ ನೋಡುವಂತಹ ಖುಷಿ ಅದು ಬೇರೆ ಯಾವುದರಲ್ಲೂ ಸಿಗುವುದಿಲ್ಲ ಹಾಗೂ ಇಂಥ ಕಠಿಣ ಸಂದರ್ಭದಲ್ಲಿ ಇಂತಹ ಅದ್ಬುತ ಕಾರ್ಯಕ್ರಮವನ್ನ ಮಾಡಿದ ‘ಉಡುಪಿ ಟೈಮ್ಸ್’ ಗೆ ಅಭಿನಂದನೆಯನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅಗಮಿಸಿದ ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಮಾತನಾಡುತ್ತಾ, ಕೃಷ್ಣವೇಷ ಸ್ಪರ್ಧೆ ಎಲ್ಲರೂ ಆಯೋಜಿಸುತ್ತಾರೆ. ಆದರೆ ಪ್ರಕೃತಿಯ ನಡುವೆ ಕೃಷ್ಣ ಬಲರಾಮ ನೋಡಿರುವಂತದ್ದು ಇದು ಹೊಸತು. ಇಂತಹ ಹೊಸತನದ ಕಾರ್ಯಕ್ರಮ ಇನ್ನಷ್ಟು ಮೂಡಿಬರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಮತ್ತೋರ್ವ ಮುಖ್ಯ ಅತಿಥಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಮಾತನಾಡುತ್ತಾ, ಮಾಧ್ಯಮಗಳು ಸದಾ ಸುದ್ದಿಯ ಜೊತೆಗೆ ಇನ್ನಷ್ಟು ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಬೇಕಾಗಿದೆ ಎಂಬುದಾಗಿ ತಿಳಿಸಿದರು.
ಮುದ್ದುಕೃಷ್ಣ ಮತ್ತು ಕೃಷ್ಣ ಬಲ ಚೈತನ್ಯ ಸ್ಪರ್ಧೆಯ ವಿಜೇತರಿಗೆ ವೇದಿಕೆಯಲ್ಲಿದ್ದ ಅತಿಥಿಗಳು ಬಹುಮಾನ ವಿತರಿಸಿದರು.
ಸ್ಪರ್ಧೆಯ ತೀರ್ಪುಗಾರರಾದ ರವಿರಾಜ್ ಎಚ್ ಪಿ, ಪ್ರಸನ್ನ ಪೆರ್ಡೂರು ಸ್ಪರ್ಧೆಯ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಬಹುಮಾನ ವಿತರಣಾ ಕಾರ್ಯಕ್ರಮದ ಸರಳ ಕಾರ್ಯಕ್ರಮವನ್ನು ನಾಗರತ್ನ ಜಿ ಹೇಳೆ೯ ನಿರೂಪಿಸಿದರು. ಉಡುಪಿ ಟೈಮ್ಸ್ ಪಾಲುದಾರರಾದ ಅಕ್ಷತಾ ಗಿರೀಶ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರೆ, ಉಮೇಶ್ ಮಾರ್ಪಳ್ಳಿ ಧನ್ಯವಾದ ಸಮರ್ಪಿಸಿದರು. ಸ್ಟೀವನ್ ಕುಲಾಸೊ ಉದ್ಯಾವರ ವಿಜೇತರ ಹೆಸರುಗಳನ್ನು ವಾಚಿಸಿದರು. ಸ್ಟೀವನ್ ಡಿಸೋಜ ಕೆಮ್ತೂರು,ಒನಿಲ್ ಅಂದ್ರಾದೆ, ಶಶಿಕಾಂತ್ ಶೆಟ್ಟಿ, ಪ್ರೇಮ್ ಮಿನೇಜಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಖ್ಯಾತ ಸಂಸ್ಥೆಗಳಾದ ಕೆಮ್ಮಲೆ ಗ್ರೂಪ್ಸ್, ಫಿಶ್ ಫ್ಯಾಕ್ಟರಿ, ಗ್ಯಾಲಕ್ಸಿ ಸ್ಪೋರ್ಟ್ಸ್ ವರ್ಲ್ಡ್, ಸದ್ಗುರು ಆಯುರ್ವೇದ, ಗೀತಾಂಜಲಿ ಸಿಲ್ಕ್ಸ್, ಮದರ್ ಕೇರ್ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿದ್ದರು.