ಪಟಾಕಿ ಸುಡುವ ಬದಲು ಆಶ್ರಮದ 45 ಮಕ್ಕಳಿಗೆ ವಸ್ತ್ರಗಳನ್ನು ನೀಡಿ ಮಾನವೀಯತೆ ಮೆರೆದ ಸಂಘ!
ಉಡುಪಿ (ಉಡುಪಿ ಟೈಮ್ಸ್ ವರದಿ): ಪ್ರತಿಭೆಗಳಿಗೆ ಮತ್ತು ಕಷ್ಟದಲ್ಲಿರುವವರಿಗೆ ಸ್ಪಂದಿಸುವ ವಿಶೇಷ ಸಂಸ್ಥೆ ಎಂದೇ ಪ್ರಸಿದ್ಧಿಯಾಗಿರುವ ಉದ್ಯಾವರ ಪಿತ್ರೋಡಿಯ ವೆಂಕಟರಮಣ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಸಂಸ್ಥೆ ಈ ಬಾರಿಯ ದೀಪಾವಳಿ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿತು.
ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ವೆಂಕಟರಮಣ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಸಂಸ್ಥೆ, ಪ್ರಸ್ತುತ ವರ್ಷದ ದೀಪವಾಳಿ ಹಬ್ಬಕ್ಕೆ ಸುಡುಮದ್ದುಗೆ ಖರ್ಚು ಮಾಡುವ ಹಣವನ್ನು ತನ್ನ ತಂಡದ ಎಲ್ಲ ಸದಸ್ಯರು ಉಳಿಸಿಕೊಂಡು, ಉಡುಪಿ ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನದ ಇಲ್ಲಿಯ 45 ಮಕ್ಕಳಿಗೆ ಹೊಸ ಬಟ್ಟೆಯನ್ನು ನೀಡಿ ದೀಪಾವಳಿಯನ್ನು ಆಚರಿಸಿ ಇತರ ಎಲ್ಲಾ ಸಂಘ ಸಂಸ್ಥೆಗಳಿಗೆ ಮಾದರಿಯಾಯಿತು.
ಕಳೆದ 6 ವರ್ಷಗಳಿಂದ ಸತತವಾಗಿ ತನ್ನ ತಂಡದ ಎಲ್ಲಾ ಸದಸ್ಯರು ದೀಪವಾಳಿ ಹಬ್ಬಕ್ಕೆ ಸುಡುಮದ್ದಿಗೆ ಉಪಯೋಗಿಸುವ ಹಣವನ್ನು ಉಳಿಸಿಕೊಂಡು ಇಲ್ಲಿಯ ಮಕ್ಕಳಿಗೆ ಹೊಸ ಬಟ್ಟೆ ನೀಡಿ ದೀಪಾವಳಿ ಸಂಭ್ರಮವನ್ನು ವಿಶೇಷದಿಂದ ಆಚರಿಸುತ್ತಿದೆ. 40 ಸಾವಿರಕ್ಕೂ ಅಧಿಕ ಹಣವನ್ನು ಉಳಿಸಿಕೊಂಡು ಶ್ರೀಕೃಷ್ಣ ಬಾಲನಿಕೇತನದ ಇಲ್ಲಿಯ ಮಕ್ಕಳಿಗೆ ಹೊಸ ಬಟ್ಟೆ ನೀಡಿ ಸಂಭ್ರಮ ಆಚರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ನವೀನ್ ಸಾಲ್ಯಾನ್, ಪ್ರೋತ್ಸಾಹಕರಾದ ಎಂಕೆ ಬಾಲರಾಜ್, ವಕೀಲರಾದ ಆನಂದ ಎಂ ಪೂಜಾರಿ, ಸಂದೀಪ್ ಆನಂದ್,ವಿಜಯಕುಮಾರ್, ಸಿ ಎಂ ಮಲ್ಲೇಶ್ ಬಂಗೇರ, ಜಿತೇಂದ್ರ ಶೆಟ್ಟಿ, ಉಮೇಶ್ ಕರ್ಕೇರ, ಸತೀಶ್ ಕುಂದರ್, ವಾಸು ಸಾಲ್ಯಾನ್, ಸಂತೋಷ್ ಕುಂದರ್, ಉದಯ ಕುಮಾರ್, ರೋಯ್ ಮಸ್ಕರೇನಸ್, ಕಿರಣ್ ಕುಮಾರ್, ಡೆರಿನ್, ಗಂಗಾಧರ್, ಯುವರಾಜ್ ಸಾಲ್ಯಾನ್, ನಾಗೇಶ್ ಮೈಂದನ್, ಹರಿಶ್ಚಂದ್ರ ಕೋಟ್ಯಾನ್, ಪ್ರಕಾಶ್ ಶೆಟ್ಟಿ, ಅಭಿಜಿತ್, ಅಭಿಷೇಕ್, ಸುರೇಶ್, ಹರ್ಷಿತ್, ಧನುಷ್, ರಿಹಾನ್, ರಾಕೇಶ್ ಸುವರ್ಣ, ಧ್ಯಾನೇಶ್ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ತನುಶ್ರೀ ಮತ್ತಿತರರು ಉಪಸ್ಥಿತರಿದ್ದರು.