ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ಗಣೇಶೋತ್ಸವ ಆಚರಣೆ

ಉಡುಪಿ ಅಂಬಲಪಾಡಿ ಶ್ರೀಬಾಲಗಣೇಶೋತ್ಸವ ಸಮಿತಿಯ 48ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದಲ್ಲಿ ಪೂಜಿಸಲ್ಪಟ್ಟ ಬಾಲಗಣಪ

ಉಡುಪಿ: ಜಿಲ್ಲೆಯಾದ್ಯಂತ ಶನಿವಾರದಿಂದ ಗಣೇಶೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈ ಬಾರಿ ಸುಮಾರು 472 ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಗುತ್ತಿದೆ.

ಈ ಸಂಭ್ರಮದ ಸಮಯದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಗಣೇಶೋತ್ಸವದ ರಂಗು ಹೆಚ್ಚಾಗುವಂತೆ ಮಾಡುತ್ತದೆ. ಅದರಲ್ಲೂ ಕರಾವಳಿಯ ಹಬ್ಬಗಳೆಂದರೆ ಹುಲಿವೇಷ, ನಾಟಕ, ನೃತ್ಯಗಳು ಜನರನ್ನು ಮನರಂಜಿಸುತ್ತದೆ. ಜಿಲ್ಲೆಯಲ್ಲಿ ಈ ಬಾರಿ ಮಳೆಯ ಅಬ್ಬರ ಮುಂದುವರಿದಿದ್ದು, ಚೌತಿ ಸಂಭ್ರಮಕ್ಕೆ ಅಡಚಣೆಯಾದರೂ ಜನರು ಗಣೇಶನ ಗುಡಿಗಳಿಗೆ ಭೇಟಿ ನೀಡಿ ಇಷ್ಟ ಸಿದ್ದಿಗಾಗಿ ಪ್ರಾರ್ಥಿಸುತ್ತಿರುವುದು ಕಂಡು ಬಂತು.

Leave a Reply

Your email address will not be published. Required fields are marked *

error: Content is protected !!