ಸೆ.9-14: ಎಸ್‌ಡಿಎಂ ಆಸ್ಪತ್ರೆ- ಚರ್ಮ ಮತ್ತು ಕೇಶರೋಗಳ ತಪಾಸಣಾ ಶಿಬಿರ

ಉಡುಪಿ, ಸೆ.8: ಎಸ್‌ಡಿಎಂ ಆಸ್ಪತ್ರೆಯ ಅಗದತಂತ್ರ ವಿಭಾಗದ ನೇತೃತ್ವದಲ್ಲಿ ಸೆ.9ರಿಂದ 14ರವರೆಗೆ ಆರು ದಿನಗಳ ಕಾಲ ಆಸ್ಪತ್ರೆಯ ಚರ್ಮರೋಗ ಮತ್ತು ಸೌಂದರ್ಯ ಚಿಕಿತ್ಸಾ ಘಟಕಗಳಲ್ಲಿ ಬೃಹತ್ ಚರ್ಮ ಮತ್ತು ಕೇಶರೋಗಳ ತಪಾಸಣಾ ಶಿಬಿರ ನಡೆಯಲಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಮಮತಾ ಕೆ.ವಿ.ತಿಳಿಸಿದರು.

ಉಡುಪಿ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರನ್ನು ಪ್ರತಿನಿತ್ಯ ಬಾಧಿಸುವ ವಿವಿಧ ರೀತಿಯ ಚರ್ಮ ವ್ಯಾದಿಗಳಾದ ಸೋರಿಯಾಸಿಸ್, ತೊನ್ನು, ಕಜ್ಜಿ, ಚರ್ಮದ ಅಲರ್ಜಿ, ಇಸುಬು, ಸರ್ಪಸುತ್ತು, ಗಜಕರ್ಣ, ಮೊಡವೆ, ತಲೆಹೊಟ್ಟು, ಹೇನಿನ ಉಪದ್ರ, ಕೂದಲು ಉದುರುವಿಕೆ, ವಿಷಜಂತುಗಳ ಕಡಿತದಿಂದ ಬರುವ ಚರ್ಮರೋಗ ಗಳಿಗೆ ಉಚಿತ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗುವುದು ಎಂದರು. ಆಸ್ಪತ್ರೆಯ ತಜ್ಞ ವೈದ್ಯರು ಚರ್ಮ ಹಾಗೂ ಕೇಶಕ್ಕೆ ಸಂಬಂಧಿಸಿದ ವ್ಯಾದಿಗಳ ಕುರಿತು ಸಂಪೂರ್ಣ ಮಾಹಿತಿ ನೀಡಲಿದ್ದು, ಅರಿವು ಮೂಡಿಸುವರು. ಇದೇ ರೀತಿಯಲ್ಲಿ ಮುಂಬರುವ ದಿನಗಳಲಿಲ ವಿವಿಧ ರೋಗಗಳನ್ನು ಕೇಂದ್ರೀಕರಿಸಿ ಬೃಹತ್ ಶಿಬಿರಗಳನ್ನು ಆಯೋಜಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಿಬಿರದ ಮುಖ್ಯ ಸಂಯೋಜಕಿ ಡಾ.ಚೈತ್ರಾ ಹೆಬ್ಬಾರ್ ಹಾಗೂ ಸಹ ಸಂಯೋಜಕ ಡಾ.ಶ್ರೀನಿಧಿ ಬಲ್ಲಾಳ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!