ಸೆ.7-13: ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಕಿನ್ನಿಮೂಲ್ಕಿ-ಕನ್ನರ್ಪಾಡಿ
ಉಡುಪಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕನ್ನರ್ಪಾಡಿ-ಕಿನ್ನಿಮೂಲ್ಕಿಯ 19ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಸೆ. 7ರಿಂದ 13ರ ವರೆಗೆ ಎನ್.ಎಚ್.66ರ ಕಿನ್ನಿಮೂಲ್ಕಿ ಸ್ವಾಗತ ಗೋಪುರ ಬಳಿಯ ಗಣಪತಿ ಮೈದಾನದಲ್ಲಿ ನಡೆಯಲಿದೆ.
ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಯುಕ್ತ ಪ್ರತಿದಿನ ಅಪರಾಹ್ನ 12ಕ್ಕೆ ಮಹಾಪೂಜೆ, ರಾತ್ರಿ 7ಕ್ಕೆ ರಾತ್ರಿ ಪೂಜೆ, 7.30ಕ್ಕೆ ರಂಗಪೂಜೆ ನೆರವೇರಲಿದೆ.
ಸೆ.7ರ ಬೆಳಗ್ಗೆ 8.30ಕ್ಕೆ ಮೆರವಣಿಗೆಯಲ್ಲಿ ವಿಗ್ರಹ ತರುವುದು, 10.15ಕ್ಕೆ ಪ್ರಾಣ ಪ್ರತಿಷ್ಠೆ 10.30ಕ್ಕೆ 6 ಕಾಯಿ ಗಣಹೋಮ, ಸಂಜೆ 6ಕ್ಕೆ ಹೂವಿನ ಪೂಜೆ, ಬೆಳಗ್ಗೆ 11ಕ್ಕೆ ಯಕ್ಷಗಾನ ತಾಳಮದ್ದಳೆ, ಅಪರಾಹ್ನ 3ರಿಂದ ಭಜನೆ, ರಾತ್ರಿ 8ರಿಂದ ಕೊಳಲು ವಾದನ, 8.30ರಿಂದ ಭಕ್ತಿ ಭಾವ ಗಾನಸುಧೆ,
ಸೆ.8ರ ಬೆಳಗ್ಗೆ 10ಕ್ಕೆ ಬಾಲಗಣಪತಿ ಹೋಮ, ಸಂಜೆ 6ಕ್ಕೆ ಹೂವಿನ ಪೂಜೆ, ಬೆಳಗ್ಗೆ 11.30ಕ್ಕೆ ಭಜನೆ, ಸಂಜೆ 5ರಿಂದ ಸಂಗೀತ, 6ರಿಂದ ಯಕ್ಷಗಾನ, ರಾತ್ರಿ 8.30ಕ್ಕೆ ಭಕ್ತಿ ಭಾವ ಸುಗಮ ಸಂಗೀತ ನೆರವೇರಲಿದೆ.
ಸೆ.9ರ ಬೆಳಗ್ಗೆ 10ಕ್ಕೆ 108 ಕಾಯಿ ಗಣಪತಿ ಹೋಮ, ಸಂಜೆ 6ಕ್ಕೆ ಹೂವಿನ ಪೂಜೆ, ಬೆಳಗ್ಗೆ 10.30ಕ್ಕೆ ಭಜನೆ, ಸಂಜೆ 5ರಿಂದ ಭಕ್ತಿಗೀತೆ, 6.30ರಿಂದ ಕರಾಟೆ ಪ್ರದರ್ಶನ, ರಾತ್ರಿ 8ಕ್ಕೆ ಶಾಸ್ತ್ರೀಯ ನೃತ್ಯ, 9ಕ್ಕೆ ಯಕ್ಷಗಾನ,
ಸೆ.10ರ ಬೆಳಗ್ಗೆ 10ಕ್ಕೆ ಸಹಸ್ರ ಮೋದಕ ಗಣಯಾಗ, ಬೆಳಗ್ಗೆ 10.30ಕ್ಕೆ ಭಜನೆ, ಸಂಜೆ 6ರಿಂದ ಯಕ್ಷ ಹಾಸ್ಯ ವೈಭವ, ರಾತ್ರಿ 8.30ಕ್ಕೆ ನೃತ್ಯ (ಜನಪದ, ಭರತನಾಟ್ಯ, ಸಾಂಸ್ಕೃತಿಕ) ಜರಗಲಿದೆ.
ಸೆ.11ರ ಬೆಳಗ್ಗೆ 10ಕ್ಕೆ ಪ್ರಸನ್ನ ಗಣಪತಿ ಹೋಮ, ಸಂಜೆ 6ಕ್ಕೆ ಹೂವಿನ ಪೂಜೆ, ರಾತ್ರಿ 7ಕ್ಕೆ ರಾತ್ರಿ ಪೂಜೆ, 7.30ಕ್ಕೆ ರಂಗಪೂಜೆ, ಅಪರಾಹ್ನ 12ರಿಂದ ಭಜನೆ, ಸಂಜೆ 6ರಿಂದ ನೃತ್ಯೋಲ್ಲಾಸ, ರಾತ್ರಿ 7ಕ್ಕೆ ನೃತ್ಯ, 9ಕ್ಕೆ ನಾಟಕ ‘ಕಥೆ ಎಡ್ಡೆಂಡು,
ಸೆ.12ರ ಬೆಳಗ್ಗೆ 10.30ಕ್ಕೆ ಭಜನೆ, 9ರಿಂದ ಸಾಂಸಾರಿಕ ತುಳು ನಾಟಕ ‘ಅಷ್ಟಮಿ’,
ಸೆ.13ರ ಬೆಳಗ್ಗೆ 10.30ಕ್ಕೆ ಹರಿದ್ರಾ ಗಣಪತಿ ಯಾಗ, ಸಂಜೆ 3.30ರಿಂದ ಸ್ಯಾಕ್ರೋಫೋನ್ ವಾದನ,ಭಕ್ತಿಗೀತೆ, 4.30ರಿಂದ ಸಂಗೀತ ಕಾರ್ಯಕ್ರಮ ಎಂದು ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ ಆಚಾರ್ಯ ತಿಳಿಸಿದ್ದಾರೆ.