ಕಾಪು ಕಡಲ ಕಿನಾರೆಯಲ್ಲಿ ಮೂಡಿಬಂದ ಮರಳಾಕೃತಿಯ ಗಣಪ
ಉಡುಪಿ: ಭಾದ್ರಪದ ಶುಕ್ಲದ ಚೌತಿಯಂದು ದೇಶದ ಜನತೆ ಐಕ್ಯತೆಯೊಂದಿಗೆ ಸಂಭ್ರಮಿಸುವ ಹಬ್ಬಗಳಲ್ಲಿ ಗಣೇಶ ಚತುರ್ಥಿಯೂ ಒಂದು.
ಈ ಸುಸಂದರ್ಭದಲ್ಲಿ ಪ್ರಕೃತಿ ರೂಪದ ಮೂಲ ಪರಿಕಲ್ಪನೆಯೊಂದಿಗೆ ರಚಿಸಲ್ಪಡುವ ಹರಸಿನಯುಕ್ತ ಗಣಪನ ಮರಳಾಕೃತಿಯು ಕಾಪು ಕಡಲ ಕಿನಾರೆಯಲ್ಲಿ ಮೂಡಿಬಂದಿತು.
ಸಮಸ್ತ ಜನತೆಗೆ ಶುಭಾಷಯದ ಹಾರೈಕೆಯೊಂದಿಗೆ, ಜನ ಜಾಗೃತಿಯನ್ನು ಸಾರುವ “ಗಜಾನನಂ” ಮರಳು ಶಿಲ್ಪದ ರಚನೆ ‘ಸ್ಯಾಂಡ್ ಥೀಂ’ ಉಡುಪಿ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ತಂಡದಿಂದ ರಚಿಸಲಾಯಿತು.
ಮಣಿಪಾಲದ ಮದುವನದಲ್ಲೊಂದು ಪರಿಸರ ಸ್ನೇಹಿ ಗಣೇಶ
ಕಲಾವಿದ ಶ್ರೀನಾಥ್ ಮಣಿಪಾಲ್ ಮತ್ತು ರವಿ ಹಿರೆಬೆಟ್ಟು ಅವರು ಎಂದಿನಂತೆ ಈ ಬಾರಿಯೂ ಗಣೇಶ ಚತುರ್ಥಿಯ ಸಂದರ್ಭದಲ್ಲಿ ವಿಶಿಷ್ಟವಾದ ಕಲಾಕೃತಿಯನ್ನು ಮಣಿಪಾಲದ ಮದುವನದಲ್ಲಿ ರಚಿಸಿ ಪ್ರದರ್ಶನಕ್ಕಿಟ್ಟಿದ್ದಾರೆ.
ಮಣಿಪಾಲದ ಉದ್ಯಮಿ ದಾಮೋದರ ನಾಯಕ್ ಅವರು ಕಲಾಕೃತಿಯನ್ನು ಅನಾವರಣಗೊಳಿಸಿ ಕಲಾಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕಲಾಕೃತಿಯನ್ನು ರಚಿಸಲು ಸುಮಾರು 2000 ಪೇಪರ್ ಲೋಟ ಮತ್ತು ಡ್ರಾಯಿಂಗ್ ಹಾಳೆಗಳನ್ನು ಬಳಸಿದ್ದಾರೆ. ಕಲಾಕೃತಿಯು ಸುಮಾರು 6 ಅಡಿ ಎತ್ತರ ಇದೆ.