ಕಮಲಾಕ್ಷಿ ಸಹಕಾರ ಸಂಘದ ಆಸ್ತಿ ಮುಟ್ಟುಗೋಲು ಹಾಕಿ ಶ್ರೀಘ್ರವಾಗಿ ಗ್ರಾಹಕರಿಗೆ ಹಣ ಪಾವತಿಸಲು ಸೂಚನೆ

Oplus_131072

ಉಡುಪಿ, ಸೆ.05: ಅಧಿಕ ಬಡ್ಡಿಯ ಆಸೆ ತೋರಿಸಿ ಜಿಲ್ಲೆಯ ನೂರಾರು ಗ್ರಾಹಕರಿಗೆ ವಂಚಿಸಿದ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘ ಉಡುಪಿ ಇದರ ಜಪ್ತಿ ಮಾಡಿ ಮುಟ್ಟುಗೋಲು ಹಾಕಿರುವ ಎಲ್ಲಾ ಸ್ಥಿರ ಹಾಗೂ ಚರ ಆಸ್ತಿಗಳನ್ನು ಪ್ರಾಧಿಕಾರ ಹಾಗೂ ಸರಕಾರದ ಅಧಿಕೃತ ಮೌಲ್ಯ ಮಾಪಕರಿಂದ ಸಂತ್ರಸ್ತರ ಜತೆಗೂಡಿ ಪ್ರಸ್ತುತ ಮಾರುಕಟ್ಟೆ ದರದಲ್ಲಿ ಆದಷ್ಟು ಬೇಗ ಮೌಲ್ಯ ಮಾಪನ ಮಾಡಿಸಿ, ಕೋರ್ಟ್ ತೀರ್ಪು ಬಂದ ತಕ್ಷಣ ಸಂತ್ರಸ್ತರಿಗೆ ಹಣ ಪಾವತಿ ಮಾಡುವ ಬಗ್ಗೆ ಕ್ರಮಕೈಗೊಳ್ಳಬೇಕೆಂದು ವಿಧಾನಸಭಾ ಅಧ್ಯಕ್ಷರಾದ ಯು.ಟಿ ಖಾದರ್ ಅವರು ಕಂದಾಯ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.

ಈ ಬಗ್ಗೆ ಇಂದು ವಿಧಾನ ಸಭಾಧ್ಯಕ್ಷರಿಗೆ ಸಂತ್ರಸ್ತರ ಪರವಾಗಿ ಪ್ರಶಾಂತ್ ಕಾಮತ್ ಕುಕ್ಕಿಕಟ್ಟೆ, ರಮೇಶ್ ಪ್ರಭು ಉಡುಪಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಶ್ರೀನಿವಾಸ್ ಪ್ರಭು ಉಡುಪಿ ಇವರು ಮನವಿ ಸಲ್ಲಿಸಿದರು.

ಡಿಸೆಂಬರ್ 2022 ರಲ್ಲಿ, ಉಡುಪಿಯ ಇತಿಹಾಸದಲ್ಲಿಯೇ ಕಂಡು ಕೇಳರಿಯದ ಸಹಕಾರ ಕ್ಷೇತ್ರದ ಉಡುಪಿಯ ಕಮಲಾಕ್ಷಿ ವಿವಿದೋದ್ದೇಶ ಸಹಕಾರ ಸಂಘವು ಠೇವಣಿದಾರ ಗ್ರಾಹಕರಿಗೆ ಅವಧಿ ಮುಗಿದ ಠೇವಣಿ ಹಣವನ್ನು ಹಿಂತಿರುಗಿಸಿ ಕೊಡದೆ ಕೋಟಿಗಟ್ಟಲೆ ಆರ್ಥಿಕ ವಂಚನೆ ಮಾಡಿದ್ದು ಬೆಳಕಿಗೆ ಬಂದಿತ್ತು ಹಾಗೂ ಈ ಬಗ್ಗೆ ಠೇವಣಿದಾರರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕೋರ್ಟಿಗೆ ಚಾರ್ಜ್ ಶೀಟ್ ಹಾಕಿಸಿದ್ದರು.

ಬಳಿಕ ಯು.ಟಿ.ಖಾದರ್ ರವರ ಸಹಕಾರದಿಂದ ರಾಜ್ಯಪಾಲರು ಆದೇಶ ಹೊರಡಿಸಿ ಆಪಾದಿತ ಸಂಸ್ಥೆಯ ಆಸ್ತಿ ಪಾಸ್ತಿ ಮುಟ್ಟುಗೋಲು ಹಾಕಿಸಿ ಅಧಿಸೂಚನೆ ಹೊರಡಿಸಿದ್ದರು. ಖಾದರ್ ರವರು ಹಣ ಕಳೆದುಕೊಂಡ ಸಂತ್ರಸ್ತರಿಗೆ ಭರವಸೆಯಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರಾದ ಶ್ರೀನಿವಾಸ್ ಪ್ರಭು ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!