ಅಜ್ಜರಕಾಡು ಬ್ಯಾಡ್ಮಿಂಟನ್ ಕ್ಲಬ್ ಟೂರ್ನಮೆಂಟ್- ಬ್ಲೇಸರ್ ತಂಡಕ್ಕೆ ಪ್ರಶಸ್ತಿ

ಉಡುಪಿ: ಮಾರ್ನಿಂಗ್ ಶೆಟಲ್ ಫ್ರೆಂಡ್ಸ್, ಅಜ್ಜರಕಾಡು ಆಯೋಜಿಸಿದ್ದ ಶಟಲ್ ಬ್ಯಾಡ್ಮಿಂಟನ್ ಲೀಗ್ ಪಂದ್ಯಾಟ ಸೆ.1ರಂದು ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಡಾ. ರೋಶನ್ ಶೆಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಉಡುಪಿಯ ಅಜ್ಜರಕಾಡು ಪರಿಸರವು ಕ್ರೀಡಾ ಹಬ್ ಆಗಿದ್ದು ಸರಕಾರದಿಂದ ಬಹಳಷ್ಟು ಅನುದಾನಗಳು ಕಾಲಕಾಲಕ್ಕೆ ಬಂದಿರುತ್ತದೆ. ಸುಸಜ್ಜಿತ ಸ್ಪೋರ್ಟ್ಸ್ ಮತ್ತು ಸೈನ್ಸ್ ನ ಸೆಂಟರ್ ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ಬಿಟ್ಟರೆ ಉಡುಪಿಯ ಅಜ್ಜರಕಾಡು ಸ್ಟೇಡಿಯಂನಲ್ಲಿ ಉತ್ತಮವಾಗಿ ಸೇವೆಸಲ್ಲಿಸುತ್ತಿದೆ, ಮುಂದಿನ ದಿನಗಳಲ್ಲಿ ಸುಮಾರು 10 ಕೋಟಿ ವೆಚ್ಚದಲ್ಲಿ ಮಲ್ಟಿ ಪರ್ಪಸ್ ಒಳಾಂಗಣ ಕ್ರೀಡಾ ಕಾಂಪ್ಲೆಕ್ಸ್ ನಿರ್ಮಾಣಕ್ಕಾಗಿ ಖೇಲೊ ಇಂಡಿಯಾದ ಅಡಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಅನುದಾನಕ್ಕಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಉದಯ್ ಕುಮಾರ್ ಶೆಟ್ಟಿ, ಬಿ.ಎಂ ಹೆಗಡೆ, ಪುಟ್ಟರಾಜ್, ನಗರಸಭಾ ಸದಸ್ಯ ಹರೀಶ್ ಶೆಟ್ಟಿ, ಭಾಸ್ಕರ್ ಎಂ.ಎನ್, ಡಾ.ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಯೋಜನಾಧಿಕಾರಿ ದೇವರಾಜ್ , ತೂಕ ಮತ್ತು ಅಳತೆ ಮಾಪನ ಅಧಿಕಾರಿ ಅಭಿಜಿತ್ ಕೋಟ್ಯಾನ್ ಭಾಗವಹಿಸಿದ್ದರು.

ಪಂದ್ಯಾಟದಲ್ಲಿ ಒಟ್ಟು ನಾಲ್ಕು ತಂಡಗಳ 40 ಆಟಗಾರರು ಭಾಗವಹಿಸಿದ್ದರು. ಪಂದ್ಯಕೂಟದಲ್ಲಿ ವಿಜೇತರಾಗಿ ರೋಹಿತ್ ಶೆಟ್ಟಿಯವರ ನಾಯಕತ್ವದ ಟೀಂ ಬ್ಲೇಸರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ರನ್ನರ್ಸ್ ಟ್ರೋಫಿ ಪ್ರಶಸ್ತಿಯನ್ನು ಅಮೀತ್ ಪಡುಕೋಣೆ ನಾಯಕತ್ವದ ಟೀಂ ಅಲ್ಪಾ ಪಡೆದು ಕೊಂಡಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಎಎಸ್‌ಪಿ ಎಸ್ ಟಿ ಸಿದ್ದಲಿಂಗಪ್ಪ ಇವರು ವಿಜೇತರಿಗೆ ಪ್ರಶಸ್ತಿಯನ್ನು ವಿತರಿಸಿ ಮಾತನಾಡುತ್ತಾ ಉಡುಪಿಯ ಅಜ್ಜರಕಾಡು ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದಲ್ಲಿ ಒಳ್ಳೆಯ ಕೋಚಿಂಗ್ ವ್ಯವಸ್ಥೆ ಇದ್ದು ಕೋಚಿಂಗ್ ನಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಕ್ರೀಡಾಕೂಟವನ್ನು ಆಯೋಜಿಸುವುದ ರಿಂದ ಅವರಿಗೂ ಪ್ರಯೋಜನವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಕಾಶಿನಾಥ್ ಪೈ, ಸುಹೇಲ್ ಅಮೀನ್, ಡಾ. ಅತುಲ್ ಭಾಗವಹಿಸಿದ್ದರು.

ಅಜ್ಜರಕಾಡು ಬ್ಯಾಡ್ಮಿಂಟನ್ ಕ್ಲಬ್ಬಿನ ಸದಸ್ಯರಾದ ಗಣೇಶ್ ಮಟ್ಟು ಮತ್ತು ಅಮಿತ್ ಪಡುಕೋಣೆ ಪಂದ್ಯಾಕೂಟವನ್ನು ನೆರವೇರಿಸಿದರು.ಕಾರ್ಯಕ್ರಮದ ನಿರೂಪಣೆ ನಂದಕಿಶೋರ್ ಕೆಮ್ಮಣ್ಣು ನೆರವೇರಿಸಿದರು.

Leave a Reply

Your email address will not be published. Required fields are marked *

error: Content is protected !!