ಎಸಿಬಿ ದಾಳಿ: ಬಸ್ ಮಾಲಕ, ಸ್ನೇಹಿತನ ಮನೆಯಲ್ಲಿ ಮುಂದುವರಿದ ಪರೀಶಿಲನೆ
ಉಡುಪಿ: (ಉಡುಪಿ ಟೈಮ್ಸ್ ವರದಿ)ಅಕ್ರಮ ಆಸ್ತಿ ಸಂಪಾದನೆಯಲ್ಲಿ ಕೆಎಎಸ್ ಅಧಿಕಾರಿ ಡಾ. ಬಿ. ಸುಧಾ ಅವರ ಬಾರ್ಕೂರಿನಲ್ಲಿರುವ ಮಾವನ ಮನೆ, ಅಕ್ರಮ ಸಂಪತ್ತನ್ನು ನೋಡಿಕೊಳ್ಳುತ್ತಿರುವ ಸ್ನೇಹಿತನ ಫ್ಲ್ಯಾಟ್, ಹಾಗೂ ಚಾಂತಾರಿನ ಬಸ್ ಮಾಲಕನೊರ್ವನ ಮನೆ ದಾಳಿ ನಡೆಸಿದ್ದಾರೆ.
ಸುಧಾ ಅವರು ಈ ಹಿಂದೆ ಬಿಡಿಎ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಐಟಿ-ಬಿಟಿ ಆಡಳಿತಾಧಿಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಅಕ್ರಮ ಆಸ್ತಿ ಹೊಂದಿರುವ ದೂರಿನ ಆಧಾರದಲ್ಲಿ ದಾಳಿ ನಡೆಸಲಾಗಿದೆ.
ಡಾ. ಬಿ. ಸುಧಾ ಅವರ ಪತಿಯ ತಂದೆಯ ವಾಸಿಸುವ ಮನೆ ಬಾರ್ಕೂರಿನಲ್ಲಿದ್ದು, ಅಲ್ಲಿಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಅಕ್ರಮ ಆಸ್ತಿಗಳ ಮಾಹಿತೆ ಕಲೆ ಹಾಕುತ್ತಿದ್ದಾರೆ. ಹಾಗೂ ಸುಧಾ ಪತಿಯ ಸ್ನೇಹಿತ ಬಸ್ ಮಾಲಕ ದೇವಾದಾಸ್ ಶೆಟ್ಟಿ ಮನೆಯಾದ ಚಾಂತರಿನಲ್ಲೂ ಪರೀಶಿಲನೆ ನಡೆಸುತ್ತಿದ್ದಾರೆ. ಮಾತ್ರವಲ್ಲದೆ ಅಕ್ರಮ ಸಂಪಾದನೆಯಲ್ಲಿ ಮೀನುಗಾರಿಕಾ ಬೋಟ್ ಕೂಡ ಖರೀದಿಸಿದ್ದ ಇವರು ಅದನ್ನು ಕುಂದಾಪುರದ ನವೀನ್ ಡಿಸೋಜಾ ಎನ್ನುವವರು ನೋಡಿಕೊಳ್ಳುತ್ತಿದ್ದು, ಆತ ವಾಸಿಸುವ ಬಾರ್ಕೂರಿನ ಕೊಠಡಿಗೂ ದಾಳಿ ಮಾಡಲಾಗಿದೆಂದು ಮೂಲಗಳು ತಿಳಿಸಿವೆ.
ಅಕ್ರಮ ಆಸ್ತಿ ಬಗ್ಗೆ ಮುಂಜಾನೆಯಿಂದ ಪರಿಶೀಲನೆ ನಡೆಸುತ್ತಿರುವ ಎಸಿಬಿ ಅಧಿಕಾರಿಗಳು ಬಗೆದಷ್ಟು ಮಾಹಿತಿ ಹೊರಬರುತ್ತಿದ್ದು, ರಾತ್ರಿವರೆಗೆ ಕಾರ್ಯಚರಣೆ ಮುಂದುವರೆಯುವ ಸಾಧ್ಯತೆ ಇದೆ.