ರಾಷ್ಟ್ರೋತ್ಥಾನ ಪಿಯು ಕಾಲೇಜು: ಉಡುಪಿಯಲ್ಲಿ ಫೌಂಡೇಷನ್ ಕೋರ್ಸ್ ನೋಂದಣಿಗೆ ಚಾಲನೆ
ಬೆಂಗಳೂರು, ಸಪ್ಟೆಂಬರ್ 4: ರಾಷ್ಟ್ರೋತ್ಥಾನ ಪಿಯು ಕಾಲೇಜು – ಉಡುಪಿಯ Foundation Courseನ Online Registrationಗೆ ರಾಷ್ಟ್ರೋತ್ಥಾನ ಪರಿಷತ್‍ನ ಪ್ರಧಾನ ಕಾರ್ಯದರ್ಶಿಗಳಾದ ನಾ.ದಿನೇಶ್ ಹೆಗ್ಡೆಯವರು ಇಲ್ಲಿನ ಕೇಶವಶಿಲ್ಪ, ಕೆಂಪೇಗೌಡ ನಗರದಲ್ಲಿ ಚಾಲನೆ ನೀಡಿದರು.
Register Online: https://udupi.rpuc.in/
ಫೌಂಡೇಷನ್ ಕೋರ್ಸ್ ಅಕ್ಟೋಬರ್ 21ರಂದು ಆನ್‍ಲೈನ್‍ನಲ್ಲಿ ಪ್ರಾರಂಭವಾಗಲಿದ್ದು, 9 ಹಾಗೂ 10ನೇ ತರಗತಿಯ ಮಕ್ಕಳಿಗೆ ಜೆಇಇ/ ನೀಟ್‍ಗೆ ಪೂರಕ ತರಬೇತಿಯನ್ನು ನೀಡಲಾಗುವುದು.
2025-26ರ ಸಾಲಿನಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರದ ಚೇರ್ಕಾಡಿಯಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿಬಿಎಸ್‍ಇ ಶಾಲೆ ಹಾಗೂ ರಾಷ್ಟ್ರೋತ್ಥಾನ ಪಿಯು ಕಾಲೇಜು ಶೈಕ್ಷಣಿಕ ಚಟುವಟಿಕೆ ಪ್ರಾರಂಭಿಸಲಿದೆ.
ಪಿಯು ಕಾಲೇಜಿನಲ್ಲಿ PCMB, PCMC, Long Term, Foundation ಮೊದಲಾದ ಕೋರ್ಸ್‍ಗಳು ಇರಲಿದ್ದು, ಹಾಸ್ಟೆಲ್ ಹಾಗೂ ಡೇ ಸ್ಕಾಲರ್, ಎರಡೂ ಮಾದರಿಗಳೂ ಇರಲಿವೆ. ಪಿಯು ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿವೇತನದ ವ್ಯವಸ್ಥೆಯೂ ಇದ್ದು, ಅದಕ್ಕೆ ಸಂಬಂಧಪಟ್ಟ ಪರೀಕ್ಷೆಗೆ Online Registration ಸೆಪ್ಟೆಂಬರ್ 16ರಿಂದ ಪ್ರಾರಂಭವಾಗಲಿದೆ. ಹಾಗೂ ಡೇ ಸ್ಕಾಲರ್ ವಿದ್ಯಾರ್ಥಿಗಳಿಗೆ ಬೈಂದೂರು, ಮುಲ್ಕಿ, ಮಲ್ಪೆ, ಹೆಬ್ರಿಯಿಂದಲೂ ಬಸ್ ವ್ಯವಸ್ಥೆಯಿರುತ್ತದೆ.