ಇಂಡಿಯಾ ಕರ್ನಾಟಕ 2024 ಫ್ಯಾಷನ್ ಶೋ- ಮಿಸೆಸ್ ಇಂಡಿಯಾ ಅರ್ಥ್ ಇಂಟರ್ ನ್ಯಾಶನಲ್ ಕಿರೀಟ ಉಡುಪಿಯ ವೈದ್ಯೆ ಡಾ. ಶ್ರುತಿ ಬಲ್ಲಾಳ್
ಬೆಂಗಳೂರು: ಮಿಸ್ & ಮಿಸೆಸ್ ಇಂಡಿಯಾ ಕರ್ನಾಟಕ 2024ರ 8ನೇ ಆವೃತ್ತಿಯ ಗ್ಯ್ರಾಂಡ್ ಫಿನಾಲೆ ನಗರದಲ್ಲಿ ಅದ್ದೂರಿಯಾಗಿ ಜರುಗಿತು. ವಿವಾಹಿತ ಮಹಿಳೆಯರ ಪ್ರತಿಭಾ ಪ್ರದರ್ಶನಕ್ಕೆ ಇದೊಂದು ಉತ್ತಮ ವೇದಿಕೆಯಾಗಿ ಹೊರಹೊಮ್ಮಿತು.
ನಗರದ ಕಿಂಗ್ಸ್ ಮೆಡೋಸ್‌ನಲ್ಲಿ ಮಿಸ್ & ಮಿಸೆಸ್ ಇಂಡಿಯಾ ಕರ್ನಾಟಕ 2024ರ 8ನೇ ಆವೃತ್ತಿಯ ಫ್ಯಾಷನ್ ಶೋ ಅನ್ನು ಆಗಷ್ಟ್ 29 ರಿಂದ ಮೂರು ದಿನಗಳ ಕಾಲ ವಿವಿಧ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ನಡೆಸಲಾಯಿತು.
ಆ.31ರಂದು ಸಂಜೆ ಗ್ರ್ಯಾಂಡ್ ಫಿನಾಲೆ ನಡೆದಿದ್ದು, ಮಿಸ್ ಇಂಡಿಯಾ ಇಂಡಿಪೆಂಡೆಂಟ್ ಇಂಟರ್ ನ್ಯಾಷನಲ್ ಗೆಲುವಿನ ಕಿರೀಟವನ್ನು ಡಾ.ಅಕ್ಷತಾ ಅಶೋಕ್ ಕುಲಕರ್ಣಿ, ಮಿಸೆಸ್ ಇಂಡಿಯಾ ಇಂಡಿಪೆಂಡೆಂಟ್ ಇಂಟರ್ ನ್ಯಾಷನಲ್ ಕಿರೀಟವನ್ನು ಡಾ.ನಿಶಿತಾ ಶೆಟ್ಟಿಯಾನ್, ಮಿಸೆಸ್ ಇಂಡಿಯಾ ಅರ್ಥ್ ಇಂಟರ್‌ನ್ಯಾಶನಲ್ ಕಿರೀಟವನ್ನು ಡಾ. ಶ್ರುತಿ ಬಲ್ಲಾಳ್ ಮತ್ತು ಕ್ಲಾಸಿಕ್ ಮಿಸೆಸ್ ಇಂಡಿಯಾ ಅರ್ಥ್ ಇಂಟರ್‌ನ್ಯಾಶನಲ್ ಗೆಲುವಿಗೆ ಪ್ರಗತಿ ಅನೂನ್ ಪಾತ್ರರಾದರು.
ರಾಜ್ಯದ ವಿವಿಧೆಡೆಗಳಿಂದ ಸುಮಾರು 35 ಸ್ಪರ್ಧಿಗಳು ಈ ಫ್ಯಾಷನ್ ಶೋ ನಲ್ಲಿ ಪಾಲ್ಗೊಂಡಿದ್ದು, ಮೂರು ದಿನಗಳ ಸ್ಪರ್ಧೆಯಲ್ಲಿ ಸ್ಪರ್ಧಿಗಳು ತಮ್ಮ ಪ್ರತಿಭೆಯನ್ನು ತೋರಿದರು. ಅಲ್ಲದೆ ಸ್ಪರ್ಧಿಗಳು ಲಗೋರಿ, ಖೋ ಖೋ ಮತ್ತು ಗಿಲ್ಲಿ ದಾಂಡು ಅಂತಹ ಸಾಂಪ್ರದಾಯಿಕ ಭಾರತೀಯ ಆಟಗಳಲ್ಲಿ ತೊಡಗಿಸಿಕೊಂಡು, ತಮ್ಮ ಕ್ರೀಡಾ ಮನೋಭಾವ ಪ್ರದರ್ಶಿಸಿದರು.
ಈ ಕುರಿತು ಕಾರ್ಯಕ್ರಮದ ಮುಖ್ಯ ಆಯೋಜಕರಾದ ಪ್ರತಿಭಾ ಸೌಂಶಿಮಠ(ಮಿಸೆಸ್ ಇಂಡಿಯಾ – ಕರ್ನಾಟಕದ ನಿರ್ದೇಶಕಿ, ಮಿಸೆಸ್ ಇಂಡಿಯಾದ ರಾಷ್ಟ್ರೀಯ ನಿರ್ದೇಶಕಿ) ಅವರು ಮಾತನಾಡಿ, ‘ಮಿಸ್ & ಮಿಸೆಸ್ ಇಂಡಿಯಾ ಕರ್ನಾಟಕ ಕಾರ್ಯಕ್ರಮವು ವೈವಿಧ್ಯತೆಯಲ್ಲಿ ಪ್ರತಿಭೆಯನ್ನು ಅರಸುವ ಏಕೈಕ ಸೌಂದರ್ಯ ಸ್ಪರ್ಧೆಯಾಗಿದೆ. ಕಳೆದ 9 ವರ್ಷಗಳಿಂದ ಈ ಸ್ಪರ್ಧೆಯನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಎಲ್ಲಾ ವಯೋಮಾನದ ಮಹಿಳೆಯರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಒದಗಿಸಲಾಗಿದೆʼ ಎಂದರು.
ಕಾರ್ಯಕ್ರಮದ ತೀರ್ಪುಗಾರರಾದ ಬಿಗ್‌ಬಾಸ್ ಮಾಜಿ ಸ್ಪರ್ಧಿ ಅವಿನಾಶ್, ಜಯಂತಿ ಬಲ್ಲಾಳ್, ಕರ್ನಲ್ ಡಾ. ಎಂ.ಸಿ ಶರ್ಮಾ ವಿಜೇತರನ್ನು ಆಯ್ಕೆ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೀಡಿಯಾ ಕನೆಕ್ಟ್ ಸಿಇಒ ದಿವ್ಯಾ ರಂಗೇನಹಳ್ಳಿ, ಹಿರಿಯ ನಟ ಮೂಗು ಸುರೇಶ್, ಪ್ರೀಮಿಯಂ ಲಾಂಜ್‌ವೇರ್ ಬ್ರ್ಯಾಂಡ್ ಯೆಲ್ಲೊ ಬ್ಲೂಮ್‌ನ ಸ್ಥಾಪಕರಾದ ಶುಭ್ರ,
ಅಂತಾರಾಷ್ಟ್ರೀಯ ಡಾಗ್ ಬ್ರೀಡರ್ ಹಾಗೂ ಕಡಬಮ್ ಪ್ರತಿಷ್ಠಾನದ ಸಿಇಒ ಸತೀಶ್ ಕಡಬಮ್, ಪ್ರಭು ಮೇತಿಮಠ್, ಶ್ರೀಧರ್ ನಾಯಕ್, ನಟ ಭಾರ್ಗವ್, ನಿರ್ದೇಶಕ ಲೋಕೇಶ್ ಮತ್ತು ಆದತ್, ಕೊರಿಯೋಗ್ರಾಫರ್ ರಾಜ್‌ಕಮಲ್ ಹಾಗೂ ಕಿಂಗ್ಸ್ ಮೆಡೋಸ್‌ನ ಜೋಸೆಫ್ ಪ್ರಭು ಉಪಸ್ಥಿತರಿದ್ದರು