ಐಸಿವೈಎಂ ಉದ್ಯಾವರ: 76 ಕೃಷಿ ಸಾಧಕರಿಗೆ ಸನ್ಮಾನ

ಉಡುಪಿ (ಉಡುಪಿ ಟೈಮ್ಸ್ ವರದಿ): ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿಯು, ತನ್ನ 29ನೇ ಕಾರ್ಯಕ್ರಮವಾಗಿ ಉದ್ಯಾವರ, ಕಡೆಕಾರು-ಕುತ್ಪಾಡಿ, ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 76 ಕೃಷಿ ಕುಟುಂಬಗಳ ಸೇವೆಯನ್ನು ಗೌರವಿಸಿ, ಸನ್ಮಾನಿಸಿದರು. 

ಉಡುಪಿ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾಗಿರುವ ಡಾ. ಎಚ್. ಕೆಂಪೇಗೌಡ, ಕಂಬಳದ ಕೋಣಗಳನ್ನು ಗದ್ದೆಗೆ ಇಳಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕೃಷಿ ಕುಟುಂಬಗಳಿಗೆ ಕೃಷಿ ಇಲಾಖೆಯಿಂದ ಯಾವುದೇ ಸಹಕಾರ ನೀಡಲು ನಾವು ಸಿದ್ಧ. ಕೃಷಿಕರು ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಸಿಗುವ ಸವಲತ್ತುಗಳನ್ನು ಪಡೆಯಬೇಕು ಎಂದರು. 3 ಗ್ರಾಮಗಳ ಕೃಷಿ ಕುಟುಂಬಗಳನ್ನು ಗುರುತಿಸಿ ಸನ್ಮಾನಿಸಿದ್ದು ನಿಜಕ್ಕೂ ಶಾಘ್ಲನೀಯ ಎಂದರು.

ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಕುಲಪತಿ ವಂ. ಫಾ. ಸ್ಟ್ಯಾನಿ ಬಿ. ಲೋಬೊ ಮಾತಾನಾಡಿ, ರೈತ ದೇಶದ ಬೆನ್ನೆಲುಬು. ರೈತ ಕಷ್ಟಪಟ್ಟರೆ ನಾವೆಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯ. ಹಿಂದಿನ ಕಾಲದಲ್ಲಿ ಎಲ್ಲರ ಕಸುಬು ಕೃಷಿಯಾಗಿತ್ತು. ಆದರೆ ಕಾಲ ಬದಲಾಗಿದೆ. ಕೃಷಿ ಕುಟುಂಬದಿಂದ ಬಂದ ಯುವಕರು ಕೃಷಿ ಬಗ್ಗೆ ಆಸಕ್ತಿ ವಹಿಸದೇ ಇರುವುದರಿಂದ ಕೃಷಿ ಭೂಮಿಗಳು ಪಾಳುಬಿದ್ದಿವೆ. ಪ್ರಸ್ತುತ ಕಾಲದಲ್ಲಿ ಕೃಷಿಗೆ ಸರಕಾರದಿಂದ ಮತ್ತು ಸಂಘ ಸಂಸ್ಥೆಗಳಿಂದ ಪ್ರಾಧಾನ್ಯತೆ ಮತ್ತು ಪ್ರೋತ್ಸಾಹ  ಸಿಗಬೇಕಾಗಿದೆ ಎಂದರು.

ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿಯ, ಸುವರ್ಣ ಮಹೋತ್ಸವ ವರ್ಷದ 29ನೇ ಕಾರ್ಯಕ್ರಮವಾಗಿ, ಉದ್ಯಾವರ, ಕಡೆಕಾರು, ಅಲೆವೂರು ಗ್ರಾಮದಲ್ಲಿ ಅರ್ಧ ಎಕರೆ ಅಥವಾ ಅದಕ್ಕಿಂತ ಹೆಚ್ಚಿನ ಭೂಮಿಯಲ್ಲಿ ಕೃಷಿ ಮಾಡುವ ಕುಟುಂಬಗಳಿಗೆ, ಕಂಬಳದ ಕೋಣಗಳನ್ನು ಸಾಕುವ ಕುಟುಂಬಗಳಿಗೆ, ಐದಕ್ಕಿಂತ ಹೆಚ್ಚು ದನ ಕರುಗಳನ್ನು ಸಾಕುವ ಕುಟುಂಬಗಳಿಗೆ, ಕುರಿ-ಹಂದಿಗಳನ್ನು ಸಾಕುವ ಒಟ್ಟು 76 ಕುಟುಂಬಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ 3 ಅಶಕ್ತರಿಗೆ ಸನ್ಮಾನಿಸಿಲಾಯಿತು.

ವೇದಿಕೆಯಲ್ಲಿ ಉದ್ಯಾವರದ ಪಶುವೈದ್ಯಾಧಿಕಾರಿ ಡಾ. ಸಂದೀಪ್ ಕುಮಾರ್, ಉಡುಪಿ ತಾಲ್ಲೂಕು ಕಿಸಾನ್ ಘಟಕದ ಅಧ್ಯಕ್ಷ ಸುಭಾಷಿತ್ ಕುಮಾರ್,   ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ದಿವಾಕರ್ ಕುಂದರ್, ವಾಮನ ಬಂಗೇರ, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಗಣೇಶ್ ಕುಮಾರ್ ಉದ್ಯಾವರ, ಕನ್ನರ್ಪಾಡಿ ಶ್ರೀ ಜಯದುರ್ಗಾ ಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ  ಮಂಡಳಿಯ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ,

ಅಲೆವೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಹರೀಶ್ ಕಿಣಿ, ಚೈತನ್ಯ ಫೌಂಡೇಶನ್ ನ ಅಧ್ಯಕ್ಷ ಸುನಿಲ್ ಸಾಲ್ಯಾನ್, ಪಾಲ್ಲೊಟ್ಟಯ್ನ್ ಕಾನ್ವೆಂಟ್ ನ ಧರ್ಮಭಗಿನಿ ಸಿ. ಮರಿಯಾ, ಐಸಿವೈಎಂ ಅಧ್ಯಕ್ಷ ರೋಯಲ್ ಕ್ಯಾಸ್ತಲಿನೊ ಉಪಸ್ಥಿತರಿದ್ದರು.

ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಮೈಕಲ್ ಡಿಸೋಜಾ ಸ್ವಾಗತಿಸಿದರೆ, ಜೂಲಿಯನ್ ದಾಂತಿ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮಗಳ ಸಂಚಾಲಕ ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!