ಉಡುಪಿ: ಶ್ರೀಭಗವತೀ ನಾಸಿಕ್ ಕಲಾ ತಂಡದಿಂದ ಮಗುವಿನ ಚಿಕಿತ್ಸೆಗೆ 2.8 ಲಕ್ಷ ರೂ. ಆರ್ಥಿಕ‌ ನೆರವು

ಉಡುಪಿ: ಶ್ರೀ ಭಗವತೀ ನಾಸಿಕ್ ಕಲಾ ತಂಡ ಕಸ್ತೂರ್ಬಾನಗರ ಇದರ ಕಲಾವಿದರು ಅಷ್ಟಮಿಗೆ ವೇಷ ಧರಿಸಿ ಸಂಗ್ರಹಿಸಿದ 2.8 ಲಕ್ಷ ರೂ.ಗಳನ್ನು ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ವೈದ್ಯಕೀಯ ಚಿಕಿತ್ಸೆಗೆ ನೀಡಲಾಯಿತು.

ಚಿಟ್ಪಾಡಿ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಗುವಿನ ಪೋಷಕರಿಗೆ ಆರ್ಥಿಕ ನೆರವಿನ ಚೆಕ್ ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಮಗುವಿನ ವೈದ್ಯಕೀಯ ಚಿಕಿತ್ಸೆಯ ಸಹಾಯಾರ್ಥವಾಗಿ ವೇಷ ಧರಿಸಿದ ಶ್ರೀ ಭಗವತೀ ನಾಸಿಕ್ ಕಲಾ ತಂಡದ ಕಲಾವಿದರನ್ನು ಸನ್ಮಾನಿಸಲಾಯಿತು.

ಕಾಂಗ್ರೆಸ್ ಮುಖಂಡ ಅಣ್ಣಯ್ಯ ಸೇರಿಗಾರ್, ಮಣಿಪಾಲ ಆಸ್ಪತ್ರೆಯ ವೈದ್ಯೆ ಡಾ.ಅರ್ಚನಾ, ಸಂಸ್ಥೆಯ ಗೌರವಾಧ್ಯಕ್ಷ ಶ್ರೀಧರ ದೇವಾಡಿಗ, ಮಾಜಿ ನಗರ ಸಭಾ ಸದಸ್ಯ ಶಶಿರಾಜ್ ಕುಂದರ್, ಸಂಸ್ಥೆಯ ಅಧ್ಯಕ್ಷ ಪ್ರಣಮ್, ದೈವಸ್ಥಾನದ ಆಡಳಿತ ಮಂಡಳಿ ಸದಸ್ಯ ಭಾಸ್ಕರ ಶೆಟ್ಟಿ, ಲಕ್ಷ್ಮಣ್, ಶಂಕರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!