ದ.ಕ, ಉಡುಪಿ ಜಿಲ್ಲೆಯಲ್ಲಿ ಇಂದಿನಿಂದ ‘ಎನಿವೇರ್ ರಿಜಿಸ್ಟ್ರೇಶನ್’ ವ್ಯವಸ್ಥೆ ಜಾರಿ
ಮಂಗಳೂರು : ದಕ್ಷಿಣ ಕನ್ನಡಮತ್ತು ಉಡುಪಿ ಜಿಲ್ಲೆಗಳಲ್ಲಿ ಆಸ್ತಿ ವಹಿವಾಟುಗಳನ್ನು ನೋಂದಾಯಿಸಲು ಆಸ್ತಿ ಮಾಲೀಕರು ತಮ್ಮ ಜಿಲ್ಲೆಯ ಯಾವುದೇ ಉಪನೋಂದಣಿ ಕಚೇರಿಯನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುವ “ಎನಿವೇರ್ ರಿಜಿಸ್ಟ್ರೇಶನ್” ವ್ಯವಸ್ಥೆಯು ಇಂದಿನಿಂದ ಜಾರಿಗೆ ಬಂದಿದೆ.
ಕರ್ನಾಟಕ ಸರ್ಕಾರದ 2024 ರ ಬಜೆಟ್ ಘೋಷಣೆಗೆ ಅನುಗುಣವಾಗಿ ಈ ವ್ಯವಸ್ಥೆಯನ್ನು ಪರಿಚಯಿಸಲಾಗಿ ದೆ. ಇದುವರೆಗೆ ಆಸ್ತಿ ನೋಂದಣಿಯನ್ನು ನಿರ್ದಿಷ್ಟ ನ್ಯಾಯವ್ಯಾಪ್ತಿಯ ಉಪ-ನೋಂದಣಿ ಕಚೇರಿಗಳಲ್ಲಿ ಮಾಡಬೇಕಾಗಿತ್ತು ಮತ್ತು ಇದು ಹೆಚ್ಚು ವಿಳಂಬಕ್ಕೆ ಕಾರಣವಾಗುತಿತ್ತು.
ಈ ವ್ಯವಸ್ಥೆಯು ಆಸ್ತಿ ಮಾಲೀಕರು ತಮ್ಮ ಜಿಲ್ಲೆಯ ಯಾವುದೇ ಉಪ-ನೋಂದಣಿ ಕಚೇರಿಯಲ್ಲಿ ವಹಿವಾಟುಗಳನ್ನು ನೋಂದಾಯಿಸಲು ಅವಕಾಶ ನೀಡುತ್ತದೆ ಇದೀಗ ಎಲ್ಲಿ ಬೇಕಾದರೂ ನೋಂದಾಯಿಸುವುದು ಅಂದರೆ ಹೊಸ ವ್ಯವಸ್ಥೆ “ಎನಿವೇರ್ ರಿಜಿಸ್ಟ್ರೇಶನ್” ಅಡಿಯಲ್ಲಿ ಸಾರ್ವಜನಿಕರು ತಮ್ಮ ಜಿಲ್ಲೆಯ ಯಾವುದೇ ಉಪ-ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಕಾರ್ಯಗಳನ್ನು ಮಾಡಬಹುದು.