ಸೆ.1: ಉಡುಪಿ ಜಿಲ್ಲಾ ಪ್ರಶಿಕ್ಷಣ ವರ್ಗ
ಉಡುಪಿ ಜಿಲ್ಲಾ ಅಧಿವಕ್ತಾ ಪರಿಷತ್ ನಿಂದ ಜಿಲ್ಲಾ ಪ್ರಶಿಕ್ಷಣ ವರ್ಗವು ಸೆ.01 ರಂದು ಕೃಷ್ಣಾನುಗ್ರಹ ಆಕಾಶವಾಣಿ ಹಿಂಬದಿ, ಬ್ರಹ್ಮಾವರದಲ್ಲಿ ನಡೆಯಲಿದೆ. ಸದ್ರಿ ವರ್ಗದಲ್ಲಿ ಎರಡು ಅವಧಿಗಳು ಇದ್ದು, ಒಂದನೇ ಅವಧಿಯಲ್ಲಿ ಭಾರತೀಯ ನ್ಯಾಯ ಸಂಹಿತೆ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಬಗ್ಗೆ ಹಿರಿಯ ನ್ಯಾಯವಾದಿ, ಅಮರ್ ಕೊರೆಯ ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ರವರು ಸಂಪನ್ಮೂಲ ವ್ಯಕ್ತಿಯಾಗಿರುತ್ತಾರೆ. ಎರಡನೇ ಅವಧಿ ಕಮರ್ಷಿಯಲ್ ಕೋರ್ಟ್ಸ್ ಆಕ್ಟ್ ಬಗ್ಗೆ ಹಿರಿಯ ನ್ಯಾಯಾವಾದಿ ಎಂ . ಎನ್. ಕುಮಾರ್ ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ಇವರು ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿಯನ್ನು ನೀಡುತ್ತಾರೆ ಎಂದು ಅಧಿವಕ್ತಾ ಪರಿಷತ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರೂರು ಸುಕೇಶ್ ಶೆಟ್ಟಿ ತಿಳಿಸಿದ್ದಾರೆ.