ಗಲಭೆ-ದಂಗೆ ಎಬ್ಬಿಸಲು, ಬೊಬ್ಬೆ ಹಾಕಿ ಸುಳ್ಳನ್ನು ಸತ್ಯ ಮಾಡಲು RSS ನಿಂದ ತರಬೇತಿ: ದಿನೇಶ್ ಗುಂಡೂರಾವ್

Oplus_131072

ಮಂಗಳೂರು: ಗಲಭೆ ಮಾಡಲು, ಪ್ರಚೋದಿಸಲು ಮತ್ತು ದಂಗೆ ಸೃಷ್ಟಿಸಲು ಬಿಜೆಪಿಗೆ ಆರ್ ಎಸ್ ಎಸ್ ತರಬೇತಿ ನೀಡುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮಂಗಳೂರಿಗೆ ಭೇಟಿ ನೀಡಿದ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸುಳ್ಳನ್ನು ಸತ್ಯವನ್ನಾಗಿಸು ವುದು ಆರ್‌ಎಸ್‌ಎಸ್‌ನ ಕೆಲಸ, ಸಮಾಜದಲ್ಲಿ ಪ್ರಚೋದನೆ ಮತ್ತು ಗಲಭೆ ಸೃಷ್ಟಿಸುವುದು ಹೇಗೆ ಎಂದು ತರಬೇತಿ ನೀಡುತ್ತಾರೆ. ಬಿಜೆಪಿಯವರು ದೇಶಾದ್ಯಂತ ಗಲಾಟೆ ಮಾಡಿ ಸುಳ್ಳನ್ನು ಸತ್ಯವನ್ನಾಗಿ ಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರು ಯಶಸ್ವಿಯಾಗುವುದಿಲ್ಲ, ನಾವು ಹೆದರುವುದಿಲ್ಲ ಮತ್ತು ಸಿಎಂ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ” ಗುಂಡೂರಾವ್ ಸಮರ್ಥಿಸಿಕೊಂಡಿದ್ದಾರೆ.

ರಾಜ್ಯಪಾಲರು ಪಕ್ಷಪಾತ ಮತ್ತು ಪೂರ್ವಾಗ್ರಹ ಪೀಡಿತರಾಗಿದ್ದಾರೆ ಎಂಬುದನ್ನು ರಾಜ್ಯದ ಜನತೆ ಅರ್ಥ ಮಾಡಿಕೊಂಡಿದ್ದು, ಖಾಸಗಿ ದೂರು ಸ್ವೀಕರಿಸಿದ 12 ಗಂಟೆಯೊಳಗೆ ನೋಟಿಸ್ ಜಾರಿ ಮಾಡಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಿದ್ದಾರೆ. ರಾಜ್ಯಪಾಲರು ಸರ್ಕಾರದ ವಿರುದ್ಧ ಪಿತೂರಿಯಲ್ಲಿ ತೊಡಗಿಸಿಕೊಂಡಾಗ, ನಾವು ಅದನ್ನು ರಾಜಕೀಯ ದ್ರೋಹ ಎಂದು ಕರೆಯಬೇಕು ಎಂದು ಅವರು ಹೇಳಿದರು. ಸಿದ್ದರಾಮಯ್ಯ ಬಿಎಸ್ ಯಡಿಯೂರಪ್ಪ ಅಲ್ಲ. ಅವರು ಬೇರೆಯ ರೀತಿ, ಅವರನ್ನು ಹೋಲಿಕೆ ಮಾಡಲಾಗುವುದಿಲ್ಲ, ಯಡಿಯೂರಪ್ಪ ಏಕೆ ರಾಜೀನಾಮೆ ನೀಡಬೇಕಾಯಿತು ಎಂದು ಬಿಜೆಪಿ ಸ್ಪಷ್ಟಪಡಿಸಬೇಕು, ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ” ಎಂದು ಅವರು ಹೇಳಿದರು.

ಜಿಂದಾಲ್ ಭೂ ವಿವಾದದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಬಸವರಾಜ ಬೊಮ್ಮಾಯಿ ಮತ್ತು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಂದಾಲ್ ಕಂಪನಿಗೆ ಭೂಮಿ ಮಾರಾಟಕ್ಕೆ ಅನುಮೋದನೆ ನೀಡಲಾಯಿತು. ”ಜಿಂದಾಲ್‌ಗೆ ಜಮೀನು ಮಾರಾಟ ಮಾಡಿದ್ದು ತಪ್ಪಾಗಿದ್ದರೆ, ಹಿಂದಿನ ಬಿಜೆಪಿ ಸರಕಾರ ಅದನ್ನು ಏಕೆ ಅನುಮೋದಿಸಿತು? ನಾವು ಅಧಿಕಾರದಲ್ಲಿದ್ದಾಗ ಈ ಬಗ್ಗೆ ಚರ್ಚಿಸಿದ್ದೇವೆ ಮತ್ತು ನಮ್ಮ ಸಚಿವ ಎಂಬಿ ಪಾಟೀಲ್ ಅವರು ಲೀಸ್ ಕಮ್ ಸೇಲ್ ಗೆ ನೀಡಿದ್ದಾರೆಎಂದು ಸ್ಪಷ್ಟಪಡಿಸಿದ್ದಾರೆ. -ಜಿಂದಾಲ್ ಸ್ಟೀಲ್‌ಗೆ 3,677 ಎಕರೆಯನ್ನು ಮಾರಾಟ ಮಾಡಿರುವುದು ಕಾನೂನಿನ ಪ್ರಕಾರ ಮತ್ತು ಅವರು ಕಡಿಮೆ ದರಕ್ಕೆ ಭೂಮಿಯನ್ನು ನೀಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಅದೇ ರೀತಿ ಆರ್‌ಎಸ್‌ಎಸ್‌ ರಾಷ್ಟ್ರೋತ್ಥಾನ ಪರಿಷತ್‌, ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತಿ ಕಡಿಮೆ ಬೆಲೆಗೆ ಬಿಜೆಪಿ ಭೂಮಿ ನೀಡಿದೆ. ನಿರಾಣಿ ಮತ್ತು ಯಡಿಯೂರಪ್ಪ ಶಾಮೀಲಾಗಿದ್ದರು. ಯಡಿಯೂರಪ್ಪ ಸಿಎಂ ಆಗಿದ್ದಾಗ ಜಿಂದಾಲ್‌ನಿಂದ ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಯಡಿಯೂರಪ್ಪನವರ ಟ್ರಸ್ಟ್‌ಗೆ ಜಿಂದಾಲ್ ಹಣ ಕೊಟ್ಟಿದ್ದು ಏಕೆ? ಯಡಿಯೂರಪ್ಪ ಅವರು ಜಿಂದಾಲ್‌ಗೆ ಗಣಿಗಾರಿಕೆಗೆ ಮಂಜೂರಾತಿ ನೀಡಿದ್ದರು, ನಿರಾಣಿ ಅವರು ಕೈಗಾರಿಕೆ ಜಮೀನು ಪಡೆದು ಶಾಲೆ ನಿರ್ಮಿಸಿದ್ದಾರೆ, ಖರ್ಗೆ ಅವರ ಟ್ರಸ್ಟ್‌ ತಪ್ಪು ಮಾಡಿದ್ದರೆ ಅಥವಾ ದುರುಪಯೋಗ ಮಾಡಿಕೊಂಡಿದ್ದರೆ ಕ್ರಮ ಕೈಗೊಳ್ಳಲಿ, ಆದರೆ ಸಾಕ್ಷ್ಯಾಧಾರಗಳಿಲ್ಲದೆ ನೀವು ಎಲ್ಲಾ ತಪ್ಪುಗಳನ್ನು ಮಾಡಿದ್ದೀರಿ ಮತ್ತು ಈಗ ಅವರು ನಮ್ಮ ಸರ್ಕಾರವನ್ನು ಕೆಡವಲು ಪ್ರಯತ್ನಿಸುತ್ತಿದ್ದಾರೆ, ಬಿಜೆಪಿ ಸಮಯದಲ್ಲಿನ ನಾವು ಅನೇಕ ಅಕ್ರಮಗಳನ್ನು ಬಹಿರಂಗಪಡಿಸುತ್ತೇವೆ ಇದು ಬಿಜೆಪಿಗೆ ಎಚ್ಚರಿಕೆ ಎಂದು ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *

error: Content is protected !!