“ಮಣಿಪಾಲ ಇನ್” ನ “ಉಡುಪಿ ರಸೋಯಿ” ಹೊಸ ಆಡಳಿತದೊಂದಿಗೆ ಪುನರಾರಂಭ

(ಉಡುಪಿ ಟೈಮ್ಸ್ ವರದಿ): ಉಡುಪಿಯ ಪ್ರತಿಷ್ಠಿತ ಹೋಟೆಲ್ ನಲ್ಲಿ ಒಂದಾದ ಮಣಿಪಾಲ ಇನ್ ಉಡುಪಿ ರಸೋಯಿ ಹೊಸ ಆಡಳಿತದೊಂದಿಗೆ ನವಂಬರ್ 8 ರಂದು ಪುನರ್ ಆರಂಭಗೊಳ್ಳಲಿದೆ ಮಂಗಳೂರಿನ ಹೆಸರಾಂತ ಸಂಸ್ಥೆ ಚಟ್ನಿ ಸಂಸ್ಥೆಯು ಈ ಹೋಟೆಲ್ ಗಳನ್ನೂ ನಿರ್ವಹಣೆ ಮಾಡಲಿದೆ ಎಂದು ಮಣಿಪಾಲ ಇನ್ ಆಡಳಿತ ನಿರ್ದೇಶಕರಾದ ಇಬ್ರಾಹಿಂ ತಿಳಿಸಿದ್ದಾರೆ.


ಮಣಿಪಾಲ ಇನ್ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಬ್ರಾಹಿಂ 14 ವರ್ಷಗಳ ಕಾಲ ಹೋಟೆಲ್ ಕ್ಷೇತ್ರದಲ್ಲಿ ಅನುಭವವಿರುವ ಚಟ್ನಿ ಸಂಸ್ಥೆಯು ಉತ್ತಮ ಗುಣಮಟ್ಟದ ರುಚಿಕರ ಊಟ ತಿಂಡಿ ತಿನಿಸುಗಳಿಗೆ ಪ್ರಖ್ಯಾತಿ ಪಡೆದಿದೆ. ಉಡುಪಿ ರಸೋಯಿ ಪ್ರತ್ಯೇಕ ಅತ್ಯಾಧುನಿಕ ಕಿಚನ್ ಹೊಂದಿರುತ್ತದೆ, ಸೌತ್ ಇಂಡಿಯನ್ ನಾರ್ತ್ ಇಂಡಿಯನ್,ಚೈನೀಸ್ ಸೇರಿದಂತೆ ವಿವಿಧ ಶೈಲಿಯ ಊಟ ತಿನಿಸುಗಳು ದೊರೆಯುತ್ತದೆ.

ಹಾಗು ನಮ್ಮಲ್ಲಿ ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಕೈಗೆಟುಕುವ ದರದಲ್ಲಿ ಹಾಲ್ ಗಳನ್ನೂ ನೀಡಲಾಗುವುದು ಎಂದರು.

ಮಂಗಳೂರಿನ ದೀಪ ಕಂಫರ್ಟ್ಸ್ ನ ಕಾರ್ತಿಕ್ ಅಮೀನ್ ಮಾತನಾಡಿ “ಕಡಿಮೆ ದರ ಇದ್ದರೂ ಆಹಾರದ ಗುಣ ಮಟ್ಟ ಉತ್ಕ್ರಷ್ಟ ವಾಗಿರುತ್ತದೆ” ಎಂದರು. ಸುದ್ದಿ ಗೋಷ್ಠಿಯಲ್ಲಿ ದೀಪ ಕ್ಯಾಂಪೊರ್ಟ್ಸ್ ನ ಪ್ರಧಾನ ವ್ಯವಸ್ಥಾಪಕ ಕೆ ಜನಾರ್ದನ ರಾವ್ ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *

error: Content is protected !!