ಉಡುಪಿ/ಕುಂದಾಪುರ ಚಿತ್ರಕಲಾ ಸ್ಪರ್ಧೆ “ಗಜವರ್ಣ ” ಕಾರ್ಯಕ್ರಮ

ಉಡುಪಿ ಆ.29(ಉಡುಪಿ ಟೈಮ್ಸ್ ವರದಿ): ಗಾರ್ಗಿ ಟ್ಯೂಶನ್ ಸೆಂಟರ್ ಇದರ ವತಿಯಿಂದ ಗಣೇಶೋತ್ಸವದ ಪ್ರಯುಕ್ತ ತಾಲೂಕು ಮಟ್ಟದ ಚಿತ್ರಕಲೆ ಸ್ಪರ್ಧೆ “ಗಜವರ್ಣ ” ಕಾರ್ಯಕ್ರಮ ಕಿನ್ನಿಮೂಲ್ಕಿಯ ಗಾರ್ಗಿ ಟ್ಯೂಶನ್ ಸೆಂಟರ್ ನಲ್ಲಿ ಸೆ.1 ರಂದು ಮಧ್ಯಾಹ್ನ 2 ಗಂಟೆಗೆ ಆಯೋಜಿಸಲಾಗಿದೆ.

ಅದೇ ರೀತಿ ಕುಂದಾಪುರದ ಜೆಸಿ ಭವನದಲ್ಲಿ ಸೆ.1 ರಂದು ಬೆಳಿಗ್ಗೆ 9 ಗಂಟೆಗೆ ಆಯೋಜಿಸಲಾಗಿದೆ.

ಜೆಸಿಐ ಕುಂದಾಪುರ ಅಧ್ಯಕ್ಷರಾದ JFM ಚಂದನ್ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜೇಸಿ ಭವನ ಚಾರಿಟೇಬಲ್ ಟ್ರಸ್ಟ್ ಕುಂದಾಪುರ ಅಧ್ಯಕ್ಷರಾದ JC ರಾಧಾಕೃಷ್ಣ U, ಹಸ್ತ ಚಿತ್ತ ಫೌಂಡೇಶನ್ ಅಧ್ಯಕ್ಷೆ ಶರ್ಮಿಳಾ ಕಾರಂತ್ ಉಪಸ್ಥಿತರಿರುವರು.

ಕಾರ್ಯಕ್ರಮವನ್ನು ಮಂಗಳೂರಿನ ಸಿವಿಲ್ ಇಂಜಿನಿಯರಿಂಗ್ ಎಸ್.ಎನ್.ಎಸ್ ಗವರ್ನಮೆಂಟ್ ಏಯ್ಡೆಡ್ ಪಾಲಿಟೆಕ್ನಿಕ್‌ನ ಉಪನ್ಯಾಸಕ ಶೇಖರ ದೇವಾಡಿಗ ಯು. ಅವರು ಉದ್ಘಾಟಿಸಲಿದ್ದಾರೆ. ಫ್ಯಾಶನ್ ಜತ್ತಿನ ಗೌರವ ಡಾಕ್ಟರೇಟ್ ಪುರಸ್ಕೃತ ವಿದ್ಯಾ ಸರಸ್ವತಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಈ ಸ್ಪರ್ಧೆಯು 3 ವಿಭಾಗಗಳಲ್ಲಿ ನಡೆಯಲಿದ್ದು ಸಬ್ ಜೂನಿಯರ್ ವಿಭಾಗದಲ್ಲಿ 1 ರಿಂದ 4 ನೇ ತರಗತಿ ವಿದ್ಯಾರ್ಥಿಗಳಿಗೆ ಕಾರ್ಟೂನ್ ಗಣಪ, ಜೂನಿಯರ್ ವಿಭಾಗದಲ್ಲಿ 5 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಬಾಲ ಗಣಪ, ಸೀನಿಯರ್ ವಿಭಾಗದಲ್ಲಿ 8 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಗಣಪತಿ ಎಂಬ ವಿಷಯದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸ್ಪರ್ಧೆಗೆ 2 ಗಂಟೆಗಳ ಅವಕಾಶ ಇರಲಿದ್ದು, ಡ್ರಾಯಿಂಗ್ ಶೀಟ್‌ನ್ನು ಸ್ಥಳದಲ್ಲಿಯೇ ನೀಡಲಾಗುವುದು. ಸ್ಪರ್ಧೆಗೆ ಬೇಕಾದ ಪರಿಕರಗಳನ್ನು ಸ್ಪರ್ಧಿಗಳೇ ತರತಕ್ಕದ್ದು, ವಾಟರ್ ಕಲರ್, ಆಯಿಲ್ ಫೇಸ್ಟಲ್, ಕ್ರೆಯನ್ಸ್ ಬಳಸಿ ಚಿತ್ರ ಬಿಡಿಸಬಹುದಾಗಿದ್ದು, ಪೆನ್ಸಿಲ್ ಸ್ಕೆಚ್‌ಗಳನ್ನು ಪರಿಗಣಿಸುವುದಿಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದ್ದು,ಮೊದಲು ಬಂದ 50 ಮಕ್ಕಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ 8971940109, 9448925539 ದೂ.ಸಂಖ್ಯೆಯನ್ನು ಸಂಪರ್ಕಿಸುವಂತೆ ಆಯೋಜಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!