ಆ.31-ಸೆ.1: ಬಿದ್ಕಲ್‌ಕಟ್ಟೆಯಲ್ಲಿ 19ನೇ ಕನ್ನಡ ಸಾಹಿತ್ಯ ಸಮ್ಮೇಳನ “ತಾರ್ಕಣಿ”
ಬಿದ್ಕಲ್‌ಕಟ್ಟೆ, ಆ.29: ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರ ತಾಲೂಕು ಘಟಕದ ವತಿಯಿಂದ ಕುಂದಾಪುರ ತಾಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನ ‘ತಾರ್ಕಣಿ’ ಕಾರ್ಯಕ್ರಮವು ಆ.31 ಮತ್ತು ಸೆ.1ರಂದು ಬಿದ್ಕಲ್‌ಕಟ್ಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಜರಗಲಿದೆ.
ಆ.31ರಂದು ಸಂಜೆ ಗಂಟೆ 4.30ಕ್ಕೆ ಸಾಂಸ್ಕೃತಿಕ ಸಂಭ್ರಮವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಮೋಹನ್ ಆಳ್ವ ಅವರು ಉದ್ಘಾಟಿಸಲಿದ್ದಾರೆ. ಕುಂದಾಪುರ ಉಪವಿಭಾಗ ಪೋಲೀಸ್ ಉಪ ಅಧೀಕ್ಷಕರು, ಬೆಳ್ಳಿಯಪ್ಪ ಕೆ.ಯು. ಭಾಗವಹಿಸಲಿದ್ದಾರೆ. ಸಂಜೆ 5.30ರಿಂದ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳ ನಟನೆಯಲ್ಲಿ ನಾಟಕ ‘ನಾಯಿಮರಿ’ ಪ್ರದರ್ಶನಗೊಳ್ಳಲಿದೆ.
ಸೆ.1ರಂದು ಬೆಳಗ್ಗೆ 8ಕ್ಕೆ ಕಸಾಪ, ಕುಂದಾಪುರ ಘಟಕದ ಅಧ್ಯಕ್ಷ ಡಾ| ಉಮೇಶ್ ಪುತ್ರನ್ ಅವರು ಪರಿಷತ್ತು ಧ್ವಜಾರೋಹಣ ನೆರವೇರಿಸಲಿದ್ದಾರೆ. ಮೊಳಹಳ್ಳಿ ಗ್ರಾ.ಪಂ. ಅಧ್ಯಕ್ಷ ಎಂ. ಚಂದ್ರಶೇಖರ ಶೆಟ್ಟಿ ಹಾರ್ದಳ್ಳಿ-ಮಂಡಳ್ಳಿ ಗ್ರಾ.ಪಂ. ಅಧ್ಯಕ್ಷೆ ದೀಪಾ ಶೆಟ್ಟಿ ಹೊಂಬಾಡಿ-ಮಂಡಾಡಿ ಗ್ರಾ.ಪಂ. ಅಧ್ಯಕ್ಷೆ ಜಯಂತಿ ಶೆಟ್ಟಿ ತಾಲೂಕು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ ತಾಲೂಕು ಸಮ್ಮೇಳನ ಆರ್ಥಿಕ ಸಮಿತಿಯ ಅಧ್ಯಕ್ಷ ಬಿ.ಅರುಣ್ ಕುಮಾರ್ ಹೆಗ್ಡೆ, ಕರ್ನಾಟಕ ಪಬ್ಲಿಕ್ ಸ್ಕೂಲ್, ಬಿದ್ದಲ್ ಕಟ್ಟೆ ಇದರ ಪ್ರಾಂಶುಪಾಲ ವಿಶ್ವೇಶ್ವರ ಭಟ್, ಉಪಪ್ರಾಂಶುಪಾಲ ಕರುಣಾಕರ ಶೆಟ್ಟಿ ಭಾಗವಹಿಸಲಿದ್ದಾರೆ.
ಶೋಭಾಯಾತ್ರೆ: ಬೆಳಗ್ಗೆ 8.30ಕ್ಕೆ ಕೊಳನಕಲ್ಲು ಶ್ರೀ ಮಹಾಗಣಪತಿ ದೇವಸ್ಥಾನದ ಮುಖಮಂಟಪದಿಂದ ಸಮ್ಮೇಳನಾಧ್ಯಕ್ಷ ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ ಅವರನ್ನು ಸ್ವಾಗತಿಸುವುದು, ಅನಂತರ ಉದ್ಯಮಿ ಎಂ. ದಿನೇಶ್ ಹೆಗ್ಡೆ ಮೊಳಹಳ್ಳಿ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಸೆ.1ರಂದು ಉದ್ಘಾಟನೆ: ಬೆಳಗ್ಗೆ 10ಕ್ಕೆ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಅವರು ಉದ್ಘಾಟಿಸಲಿದ್ದಾರೆ. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಆಶಯ ಭಾಷಣಗೈಯಲಿದ್ದು, ಅಂಕಣಕಾರ ಕೋಣಿ ಶಿವಾನಂದ ಕಾರಂತ, ಗುಜ್ಜಾಡಿ ಭಾಗವಹಿಸಲಿದ್ದಾರೆ. ಪುಸ್ತಕ ಪ್ರಕಾಶಕ ಡಾ। ಭಾಸ್ಕರ ಆಚಾರ್ಯ ಅವರು ಸುಧಾಂಶು, ಅಶ್ವಿನಿ ಕುಲಾಲ್, ಕೆ.ಎಂ.ಸಿ.,ಮಣಿಪಾಲ ಹಾಗೂ ಹೊಂಬೆಳಕು, ಪ್ರದೀಪ್ ಕುಮಾರ್ ಬನ್ನೂರು ಅವರು ರಚಿಸಿದ ಪುಸ್ತಕವನ್ನು ಅನಾವರಣಗೊಳಿಸಲಿದ್ದಾರೆ. ಕುಂದಾಪುರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಅವರು ಪುಸ್ತಕ ಮಳಿಗೆ ಉದ್ಘಾಟಿಸಲಿದ್ದಾರೆ. ಮೂಡುಬಿದಿರೆಯ ಎಸ್‌ಕೆಎಫ್‌ನ ಆಡಳಿತ ನಿರ್ದೇಶಕ ಡಾ| ರಾಮಕೃಷ್ಣ ಆಚಾರ್ಯ ಅವರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಿದೆ. ಕುಂದಾಪುರ ಉಪವಿಭಾಗ ಉಪವಿಭಾಗಾಧಿಕಾರಿ ಕೆ. ಮಹೇಶ್ಚಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ತಹಶೀಲ್ದಾರ್ ಶೋಭಾಲಕ್ಷ್ಮಿ ಈ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ ತಾಲೂಕು ಸಮ್ಮೇಳನ ಆರ್ಥಿಕ ಸಮಿತಿಯ ಅಧ್ಯಕ್ಷ ಬಿ. ಅರುಣ್ ಕುಮಾರ್ ಹೆಗ್ಡೆ ಕಾರ್ಯದರ್ಶಿ ರಾಘವೇಂದ್ರ ಅಡಿಗ, ಪ್ರಾಂಶುಪಾಲ ವಿಶ್ವೇಶ್ವರ ಭಟ್ ಮತ್ತಿತರರು ಭಾಗವಹಿಸಲಿದ್ದಾರೆ.
11.30ರಿಂದ ಕುಂದಾಪ್ರ ಕನ್ನಡದ ಹೊಸ ಸಾಧ್ಯತೆಗಳು, ಜನಪದ ಗೀತ ಗಾಯನ, ಬಹುವಿಧ ಗೋಷ್ಠಿ ಅಬ್ಬಿ ಭಾಷಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.