ಬಸ್ ಮಾಲಕ ಸೈಫ್ ಹತ್ಯೆಗೆ ಮುಂಬೈನಿಂದ ಸುಫಾರಿ! 9 ಮಂದಿ ಹಂತಕರ ಬಂಧನ
ಮಣಿಪಾಲ: (ಉಡುಪಿ ಟೈಮ್ಸ್ ವರದಿ)ಎಕೆಎಮ್‌ಎಸ್ ಬಸ್ ಮಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಒಂಭತ್ತು ಮಂದಿ ಆರೋಪಿಗಳನ್ನು ಕಾರ್ಕಳ ಹಾಗೂ ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಬಸ್ ಮಾಲಕನ ಹತ್ಯೆಗೆ ಮುಂಬೈ ವ್ಯಕ್ತಿಯಿಂದ ಸುಫಾರಿ ಪಡೆದು ಹತ್ಯೆಗೆ ಸಂಚು ರೂಪಿದ್ದರು ಎಂದು ತಿಳಿದು ಬಂದಿದೆ. ಬಂಧಿತರುತನಿಖಾ ತಂಡದ ಅಧಿಕಾರಿ ಸಿಬ್ಬಂದಿಗಳು ಮಾಹಿತಿ ಸಂಗ್ರಹಿಸಿ ಈ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡು ಕಾರ್ಕಳದ ಅಡಗಿಕೊಂಡಿದ್ದ 9 ಆರೋಪಿಗಳನ್ನು ಬಂಧಿಸಿರುತ್ತಾರೆ. ಆರೋಪಿತರ ಪೈಕಿ ಓರ್ವ ಮಹಿಳೆಯೂ ಸೇರಿರುತ್ತಾಳೆ.
ಬಂಧಿತರು
೧) ದರ್ಶನ್ ದೇವಯ್ಯ ತಂದೆ: ಪೊನ್ನಪ್ಪ, ವಿರಾಜಪೇಟೆ
೨) ಸಂತೋಷ್ , ತಂದೆ: ಕರುಣಾಕರ ಪೂಜಾರಿ, ಮಾರ್ನಾಡು, ಮೂಡುಬಿದ್ರೆ.
೩) ಅನಿಲ್ ಕುಮಾರ್ ತಂದೆ:ತಿರುವೇಣಿ, ಸೋಮವಾರ ಪೇಟೆ
೪) ಸುಕೇಶ್ ಪೂಜಾರಿ ತಂದೆ: ರಾಘೂ ಪೂಜಾರಿ, ಮಾರೋಡಿ, ಬೆಳ್ತಂಗಡಿ.
೫) ಗೋಪಾಲ ತಂದೆ: ಪುರಾಲ, ಮಾರ್ನಾಡು. ಮೂಡುಬಿದ್ರೆ.
೬) ಮೋಹನ ತಂದೆ: ಚನ್ನಪ್ಪ ಗೌಡ, ಟಿ.ಬಿ ಕ್ರಾಸ್ ಬೆಳ್ತಂಗಡಿ..
೭) ಸೋಮು ತಂದೆ: ಕರಿಯಯ್ಯ, ಶ್ರೀ ರಾಂಪುರ, ಕೆ.ಆರ್ ನಗರ
೮) ಮಹೇಶ್ ಬಾಬು, ತಂದೆ:ಅಶ್ವತ್ತಪ್ಪ, ಪಿರಿಯಾಪಟ್ಟಣ
೯) ಸೌಭಾಗ್ಯ ಗಂಡ: ದರ್ಶನ್ ದೇವಯ್ಯ, ವಿರಾಜಪೇಟೆ
ಹಂತಕರಿಗೆ ಮಾಹಿತಿ ನೀಡುತ್ತಿದ್ದ ಹಿಂದೂ ಸಂಘಟನೆಯ ಶಿವಕುಮಾರ್ ಕರ್ಜೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳನ್ನು ಕಾರ್ಕಳ ಮುರತ್ತಂಗಡಿಯ ರಿಜೆನ್ಸಿ ಲಾಡ್ಜ್ ನಲ್ಲಿ ಬಂಧಿಸಿರುವುದಾಗಿ ತಿಳಿದು ಬಂದಿದೆ.
ಬಸ್ ಮಾಲಕ ಸೈಫುದ್ದೀನ್ ನ.4ರಂದು ಮಣಿಪಾಲ ಲಕ್ಷೀಂದ್ರನಗರದ ತನ್ನ ಕಚೇರಿಯಲ್ಲಿಂದ ಹೊರ ಬರುತ್ತಿರುವಾಗ ನಾಲ್ವರು ದುಷ್ಕರ್ಮಿಗಳು ತಲವಾರು ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್. ವಿಷ್ಣುವರ್ಧನ ಐಪಿಎಸ್‌ರವರ ಮಾರ್ಗದರ್ಶನದಲ್ಲಿ ಅಡಿಷನಲ್ ಎಸ್.ಪಿ ಕುಮಾರ ಚಂದ್ರರವರ ನಿರ್ದೇಶನದಲ್ಲಿ, ಹರಿರಾಮ್ ಶಂಕರ್ ಎ.ಎಸ್.ಪಿ ಕುಂದಾಪುರ, ಟಿ.ಆರ್ ಜೈ ಶಂಕರ್ ಡಿ.ವೈ.ಎಸ್.ಪಿ ಉಡುಪಿ, ಭರತ್.ಎಸ್.ರೆಡ್ಡಿ ಡಿ.ವೈ.ಎಸ್.ಪಿ ಕಾರ್ಕಳ, ಮಂಜುನಾಥ್.ಎಂ ಗೌಡ ಪಿ.ಐ ಮಣಿಪಾಲ, ಸಂಪತ್ ಕುಮಾರ್.ಎ. ಸಿ.ಪಿ.ಐ ಕಾರ್ಕಳ, ಅನಂತಪದ್ಮನಾಭ, ಸಿಪಿಐ, ಬ್ರಹ್ಮಾವರ, ಪೊಲೀಸ್ ನಿರೀಕ್ಷಕರು ಡಿಸಿಐಬಿ, ಮತ್ತು ಸಿಬ್ಬಂದಿಯವರು, ರಾಜಶೇಖರ್ ಪಿ.ಎಸ್.ಐ ಮಣಿಪಾಲ, ರಾಘವೇಂದ್ರ ಸಿ, ಪಿಎಸ್ಐ ಬ್ರಹ್ಮಾವರ, ಸುಧಾಕರ ತೋನ್ಸೆ, ಪಿಎಸ್ಐ, ಹಿರಿಯಡ್ಕ, ಮಧು ಪಿ.ಎಸ್.ಐ ಕಾರ್ಕಳ ನಗರ, ಸುಮ ಮ.ಪಿ.ಎಸ್.ಐ ಹೆಬ್ರಿ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆಯನ್ನು ನಡೆಸಿರುತ್ತದೆ.