ಬಂಟ್ವಾಳದಲ್ಲಿ ಎಸ್ಡಿಪಿಐ ನೆರಳಲ್ಲಿ ಕಾಂಗ್ರೆಸ್ ಎಂದ ಬಿಜೆಪಿ ಕಾಪು ಪುರಸಭೆ ಯಾರ ನೆರಳಲ್ಲಿ?- ಶರ್ಫುದ್ದೀನ್ ಶೇಖ್
ಕಾಪು: ಬಿಜೆಪಿಯ ಶಾಸಕರೊಬ್ಬರು, ಬಂಟ್ವಾಳದ ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ SDPI ಬೆಂಬಲ ನೀಡಿದಕ್ಕೆ SDPI ನೆರಳಲ್ಲಿ ಕಾಂಗ್ರೆಸ್ ಎಂಬ ಹೇಳಿಕೆ ನೀಡಿದ್ದರು. ಆದರೆ, ಕಾಪು ಪುರಸಭೆಯಲ್ಲಿ ಅಧಿಕಾರದ ಆಸೆಗಾಗಿ SDPI ಯ ಸದಸ್ಯರಿಗೆ ಉಪಾದ್ಯಕ್ಷ ಸ್ಥಾನ ನೀಡಿ, SDPI ಬೆಂಬಲದೊಂದಿಗೆ ಅಧಿಕಾರ ಪಡೆದಿರುವ ಬಿಜೆಪಿಗೆ ಈಗ ಶಾಸಕರಿಗೆ ಮತ್ತು ಬಿಜೆಪಿ ನಾಯಕರಿಗೆ ಕೇಳುವ ಪ್ರಶ್ನೆ ನೀವು ಈಗ ಯಾರ ನೆರಳಿಲ್ಲಿ ಇದ್ದೀರಿ ?
SDPI ಯವರಿಗೆ ಕೋಮುವಾದಿ, ದೇಶದ್ರೋಹಿಗಳು ಎಂದೆಲ್ಲಾ ಹೇಳುವ ಈಗ ಬಿಜೆಪಿಯವರಿಗೆ ಅನ್ವಯಿಸುದಿಲ್ಲವೇ. ಭರತ್ ಶೆಟ್ಟಿಯವರು ಉತ್ತಿರಿಸಬೇಕು ಎಂದು ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್ ಆಗ್ರಹಿಸಿದ್ದಾರೆ.
ಅಲ್ಪಸಂಖ್ಯಾತರ ಮತ ಪಡೆದು ಪುರಸಭೆ ಸದಸ್ಯೆಯಾಗಿ, ಬಿಜೆಪಿಗೆ ಬೆಂಬಲ ನೀಡಿದ ಪುರಸಭೆಯ ಸದಸ್ಯೆಗೂ, SDPI ಪಕ್ಷಕ್ಕೂ ಮತದಾರರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ಶೇಖ್ ತಿಳಿಸಿದ್ದಾರೆ.