SDPI ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕಾಂಗ್ರೆಸ್‌ಗೆ ಬೆಂಬಲ- ಸುಳ್ಳು ಸುದ್ದಿ ಹರಡಿಸಿ ಜನರಲ್ಲಿ ಗೊಂದಲ- ನವೀನ್
ಕಾಪು: ಪುರಸಭೆಯ ತಮ್ಮ ಪರಿಶಿಷ್ಟ ಜಾತಿಯ ಅಭ್ಯರ್ಥಿಯನ್ನು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಸೂಚಿಸಿ, ಬಿ.ಜೆ.ಪಿ ಗೆ ಕಳುಹಿಸಿಕೊಟ್ಟು ಈಗ ಇವರು, ಪತ್ರಿಕಾ ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಎಂದು ಸುಳ್ಳು ಹೇಳಿಕೆ ನೀಡಿ ಜನರ ಮನಸ್ಸಲ್ಲಿ ಗೊಂದಲ ಮೂಡಿಸುವ ಪ್ರಯತ್ನವನ್ನು S. D. P. I ಮಾಡುತ್ತಿರುವುದು ತೀರಾ ಹಾಸ್ಯಾಸ್ಪದ.
ಯಾವುದೇ ರೀತಿಯ ಅಧಿಕಾರಹೊಂದಾಣಿಕೆಯಾಗಲಿ, ಅಥವಾ ಬೆಂಬಲ ಕೋರಿಯಾಗಲೀ S. D. P. I ಜೊತೆಗೆ ಪಕ್ಷದ ನೆಲೆಯಲ್ಲಿ ಯಾವುದೇ ರೀತಿಯ ಮಾತುಕತೆ ನಡೆಯಲಿಲ್ಲ. ನಮಗೆ ಆ ರೀತಿಯ ಅಧಿಕಾರದಾಹ ಇದ್ದಿದ್ದರೆ, ನಾವು ಬೇರೆ ರೀತಿಯಲ್ಲಿ ಅಧಿಕಾರ ಪಡೆಯುವ ಕಾರ್ಯತಂತ್ರ ಮಾಡುವ ಎಲ್ಲ ಆಯ್ಕೆಗಳು ನಮ್ಮ ಮುಂದಿತ್ತು.
SDPI ಸದಸ್ಯೆಯೇ ಅವರ ಹಿಡಿತದಲ್ಲಿ ಇಲ್ಲದೆ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸುತ್ತಿರುವಾಗ, ಇವರು ಕಾಂಗ್ರೆಸ್ ಪಕ್ಷದ ಜೊತೆಗೆ ಹೊಂದಾಣಿಕೆಯೋ ಅಥವಾ ಬಿ.ಜೆ.ಪಿ ಜೊತೆಗೆ ಹೊಂದಾಣಿಕೆಯೋ ಎಂಬುದನ್ನು ಜನರಿಗೆ ಸ್ಪಷ್ಟ ಪಡಿಸಲಿ ಎಂದು ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ಆಗ್ರಹಿಸಿದ್ದಾರೆ.