ಮಲ್ಪೆ ಆದಿಉಡುಪಿ ರಸ್ತೆಯಲ್ಲಿ ಯಮಧರ್ಮ ಪ್ರೇತಗಳ ಸಂಚಾರ!
ಉಡುಪಿ: ಮಲ್ಪೆಯಿಂದ- ಆಗುಂಬೆಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ಯಮಧರ್ಮ ಹಾಗೂ ಪ್ರೇತಗಳ ಸಂಚಾರವಾಗಿದೆ.
ಹೌದು… ಹೊಂಡಾಗುಂಡಿ ರಸ್ತೆಯಲ್ಲಿ ಸಂಚರಿಸಲು ದುಸ್ತರ ಆದ ಕಾರಣ, ಅಷ್ಟಮಿ ವೇಷದಾರಿಗಳು ರಾಜಕಾರಣಿ ಮತ್ತು ಜಿಲ್ಲಾಡಳಿತದ ಗಮನ ಸೆಳೆಯಲು ಈ ರೀತಿ ಮಾಡಿದ್ದಾರೆ.
ಈ ರಸ್ತೆಯ ಗುಂಡಿಯಿಂದ ಸವಾರರು ಯಮಲೋಕಕ್ಕೆ ತೆರಳುತ್ತಾರೆ ಎಂಬ ಸಂದೇಶವನ್ನು ಸಾರುವಂತೆ ಕಲಾವಿದರು ಯಮನೊಂದಿಗೆ ಪ್ರೇತಗಳ ವೇಷವನ್ನು ಹಾಕಿ, ರಸ್ತೆ ಗುಂಡಿಯ ಮುಂಭಾಗ ವಿನೂತನವಾಗಿ ಪ್ರದರ್ಶನ ನೀಡಿದ ವಿಡಿಯೋ ಭಾರೀ ವೈರಲ್ ಆಗಿದೆ.