ಉಡುಪಿ: ಡಾ.ಕೃಷ್ಣಪ್ರಸಾದ್ ಕೂಡ್ಲು ಅವರಿಗೆ ”ಶ್ರೀಕೃಷ್ಣಾನುಗ್ರಹ” ಪ್ರಶಸ್ತಿ ಪ್ರದಾನ

ಉಡುಪಿ: ಪರ್ಯಾಯ ಶ್ರೀಪುತ್ತಿಗೆ ಮಠದ ನೇತೃತ್ವದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಮತ್ತು ಕೃಷ್ಣಲೀಲೋತ್ಸವ ಪ್ರಯುಕ್ತ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಪರ್ಯಾಯ ಮಠಾಧೀಶರಾದ ಶ್ರೀಸುಗುಣೇ0ದ್ರ ತೀರ್ಥ ಶ್ರೀಪಾದರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ನಾಡೋಜ ಪುರಸ್ಕೃತ ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆಗಳ ಸಮೂಹದ ವೈದ್ಯಕೀಯ ನಿರ್ದೇಶಕ, ಪ್ರಸಿದ್ಧ ನೇತ್ರತಜ್ಞ ಡಾ.ಕೃಷ್ಣಪ್ರಸಾದ್ ಕೂಡ್ಲು ಅವರನ್ನು ‘ಶ್ರೀಕೃಷ್ಣಾನುಗ್ರಹ ಪ್ರಶಸ್ತಿ’ಯೊ0ದಿಗೆ ಗೌರವಿಸಿದರು. 

ಶ್ರೀಗಳು ಗೌರವಿಸುತ್ತಾ ನೇತ್ರಚಿಕಿತ್ಸೆಯಲ್ಲಿ ಡಾ.ಕೃಷ್ಣಪ್ರಸಾದ್ ಕೂಡ್ಲು ಅವರು ಸಮಾಜಕ್ಕೆ ಸಲ್ಲಿಸಿದ ಅಪಾರ ಸೇವೆಯನ್ನು ಸ್ಮರಿಸಿದರು.ಅಲ್ಲದೇ ಡಾ.ಕೃಷ್ಣಪ್ರಸಾದ್‌ರವರು 5 ರಾಜ್ಯಗಳಲ್ಲಿ ಹಾಗೂ ಕರ್ನಾಟಕದ 7 ಜಿಲ್ಲೆಗಳಲ್ಲಿ ನೀಡುತ್ತಿರುವ ಉಚಿತ ನೇತ್ರ ಚಿಕಿತ್ಸಾ ಶಿಬಿರಗಳಿ0ದ ಲಕ್ಷಾ0ತರ ಜನರು ದೃಷ್ಟಿಯನ್ನು ಮರಳಿ ಪಡೆದಿದ್ದಾರೆ, ಶ್ರೀಕೃಷ್ಣ ಜನ್ಮಾಷ್ಟಮಿಯ0ದು ಡಾ.ಕೃಷ್ಣಪ್ರಸಾದ್‌ರವರಿಗೆ ‘ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ’ ನೀಡುತ್ತಿರುವುದು ಸ0ಧರ್ಭೋಚಿತ ಎ0ದರು.

ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಬೋಜೇಗೌಡ, ಸು.ಕೋ.ಹಿರಿಯ ವಕೀಲ ಬಾಲರಾಜ್, ಗುಜರಾತ್‌ನ ಮಾಜಿ ಸ0ಸದ ಸಾಗರ್ ರಾಯ್ಕರ್, ಆರೆಸ್ಸೆಸ್ ಹಿರಿಯರಾದ ಮಿಲಿ0ದ್ ಗೋಖಲೆ,ಉದ್ಯಮಿ ಗುರುಪ್ರಸಾದ್, ಅರುಣ್ ಕುಮಾರ್ ಉಪಸ್ಥಿತರಿದ್ದರು. ಶ್ರೀಮಠದ ರಮೇಶ್ ಭಟ್ ಸ್ವಾಗರಿಸಿದರು,ಡಾ.ಗೋಪಾಲಾಚಾರ್ಯ
ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!