ಕಾರ್ಕಳ ಪೊಲೀಸರು ವಶಪಡಿಸಿಕೊಂಡ ಪರಶುರಾಮ ಮೂರ್ತಿ ಆರೋಪಿಗೆ ವಾಪಸ್ ನೀಡಲು ನಿರಾಕರಿಸಿದ ಹೈಕೋರ್ಟ್
ಬೆಂಗಳೂರು: ಉಚ್ಛ ನ್ಯಾಯಾಲಯದಲ್ಲಿ ಆರೋಪಿತರ ಪರವಾಗಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಯ ವಿಚಾರಣೆಯ ಸಂದರ್ಭದಲ್ಲಿ ಕಾರ್ಕಳ ಪೊಲೀಸರು ವಶಪಡಿಸಿಕೊಂಡಿರುವ ಪರಶುರಾಮ ಮೂರ್ತಿಯನ್ನು ಮರಳಿ ನೀಡುವಂತೆ ಕೇಳಿದರು, ಇದರ ಬಗ್ಗೆ ದೂರುದಾರ ನಲ್ಲೂರು ಕೃಷ್ಣ ಶೆಟ್ಟಿ ಯವರ ಪರ ವಕೀಲರಾದ ಶ್ರೀಕಾಂತ್.ವಿ.ಕೆ. ಆಕ್ಷೇಪಿಸಿ ತನಿಖೆಯು ಬಾಕಿ ಇರುವ ಸಂದರ್ಭದಲ್ಲಿ ವಶಪಡಿಸಿಕೊಂಡಿರುವ ಪರಶುರಾಮ ಮೂರ್ತಿ ಭಾಗಗಳನ್ನು ಬಿಡುಗಡೆ ಮಾಡದಂತೆ ಕೇಳಿಕೊಂಡರು. ಉಭಯ ಪಕ್ಷಗಳ ವಾದವನ್ನು ಆಲಿಸಿದ ಹೈಕೋರ್ಟ್ ವಶಪಡಿಸಿಕೊಂಡ ಪರಶುರಾಮ ಮೂರ್ತಿಯನ್ನು ಆರೋಪಿ ಕೃಷ್ಣ ನಾಯಕ್ ಗೆ ನೀಡಲು ನಿರಾಕರಿಸಿತು.