ಉಡುಪಿ: “ಚಲೋ ಕಾರ್ಡ್” ಬಗ್ಗೆ ಸುಳ್ಳು ವದಂತಿ – ಬಸ್ ಮಾಲಕರ ಸ್ಪಷ್ಟನೆ

ಉಡುಪಿ: (ಉಡುಪಿ ಟೈಮ್ಸ್ ವರದಿ) ದಿನನಿತ್ಯ ಸಿಟಿಬಸ್‌ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ವರದಾನವಾದ ಚಲೋ ಕಾರ್ಡ್ ಬಗ್ಗೆ ಸಿಟಿಬಸ್ ಅಸೋಸಿಯೇಶನ್‌ನಿಂದ ಹೊರ ಬಂದ ಬಸ್ ಮಾಲಕರಿಂದ ಸುಳ್ಳು ವದಂತಿ ಸೃಷ್ಟಿಯಾಗಿದ್ದು, ಈ ಬಗ್ಗೆ ಬಸ್ ಮಾಲಕ ಸಂಘ ಸ್ಪಷ್ಟನೆ ನೀಡಿದೆ.


ಉಡುಪಿಯ ಬಡಕಾರ್ಮಿಕರಿಗೆ, ದಿನನಿತ್ಯ ಕಛೇರಿಗಳಿಗೆ ದುಡಿಯಲು ಹೋಗುವ ನಾಲ್ಕೂ ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಚಲೋ ಕಾರ್ಡ್‌ನ ಸದುಪಯೋಗ ಪಡೆಯುತ್ತಿದ್ದು, ಸುಮಾರು 85 ಸಿಟಿಬಸ್ ಈ ಸೇವೆ ನೀಡುತ್ತಿದೆ. ದರ ಕಡಿತದ ಈ ಯೋಜನೆಯನ್ನು ಪ್ರಯಾಣಿಕರು ಮೆಚ್ಚಿದ್ದು, ಪ್ರತಿನಿತ್ಯ ಎಂಬಂತೆ ನೂರೈವತ್ತಕ್ಕೂ ಅಧಿಕ ಚಲೋ ಕಾರ್ಡ್‌ನ್ನು ಹೊಸ ಪ್ರಯಾಣಿಕರು ನೊಂದಯಿಸುತ್ತಿದ್ದಾರೆ.

ಆದರೆ ಇತ್ತೀಚೆಗೆ ಎರಡು ಬಸ್ಸಿನ ಮಾಲಕರು ತಮ್ಮ ಹನ್ನೊಂದು ಬಸ್‌ಗಳನ್ನು ಚಲೋ ಕಾರ್ಡ್ ಸೇವೆಯಿಂದ ಹೊರಬಂದಿದ್ದು, ಅವರು ಈ ಬಗ್ಗೆ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಬಂದ ವರದಿ ಸತ್ಯಕ್ಕೆ ದೂರವಾಗಿದ್ದು, ಪ್ರಯಾಣಿಕರು ಯಾವುದೇ ಗೊಂದಲಕ್ಕೆ ಒಳಗಾಗ ಬಾರದಾಗಿ ಸಿಟಿಬಸ್ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ 74 ಬಸ್ ಈ ಸೇವೆಯಡಿ ಇದೆ, ಚಲೋ ಕಾರ್ಡ್‌ನಲ್ಲಿ ತಿಂಗಳ ಪಾಸ್ ಸೌಲಭ್ಯ ಇದ್ದು, ದಿನ ನಿತ್ಯ ಸಂಚರಿಸುವವರಿಗೆ ದರ ಕಡಿತದ ಸೇವೆ ದೊರಕುತ್ತಿದೆಂದು ಚಲೋ ಕಾರ್ಡ್‌ನ ಕಾರ್ಯನಿರ್ವಾಹಣಾಧಿಕಾರಿ ಮಂಜುನಾಥ್ ಕೊಪ್ಪಳ “ಉಡುಪಿ ಟೈಮ್ಸ್‌”ಗೆ ತಿಳಿಸಿದ್ದಾರೆ.

1 thought on “ಉಡುಪಿ: “ಚಲೋ ಕಾರ್ಡ್” ಬಗ್ಗೆ ಸುಳ್ಳು ವದಂತಿ – ಬಸ್ ಮಾಲಕರ ಸ್ಪಷ್ಟನೆ

Leave a Reply

Your email address will not be published. Required fields are marked *

error: Content is protected !!