ಕೋಟ: ಪತಿಯಿಂದ ಪತ್ನಿಯ ಬರ್ಬರ ಹತ್ಯೆ!

ಕೋಟ: ಕೌಟುಂಬಿಕ ಕಲಹದಿಂದ ಪತಿಯು ತನ್ನ ಪತ್ನಿಯನ್ನು ಕೊಲೆಗೈದ ಘಟನೆ ಇಂದು ಮುಂಜಾನೆ ಕೋಟ ಸಮೀಪದ ಸಾಲಿಗ್ರಾಮ ಕಾರ್ಕಡ ಎಂಬಲ್ಲಿ ನಡೆದಿದೆ.

ಜಯಶ್ರೀ (31) ಕೊಲೆಯಾದ ಪತ್ನಿ, ಕಿರಣ್ ಉಪಾಧ್ಯ (44) ಪತಿ ಕೊಲೆಗೈದಾತ ಎಂದು ತಿಳಿದು ಬಂದಿದೆ

ಕಾರ್ಕಡ ಅಂಗನವಾಡಿ ಕೇಂದ್ರದ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಜೋಡಿ ವಾಸವಾಗಿದ್ದರು ಎನ್ನಲಾಗಿದೆ. ಜೋಡಿಗೆ ಒಂಭತ್ತು ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆಯ ಕುರಿತು ಕೊಟ ಪೊಲೀಸರು ವಿವರ ಸಂಗ್ರಹಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ‌ಇನ್ನಷ್ಟೇ ತಿಳಿದು ಬರಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!