ರೋಟರಿ ಕ್ಲಬ್ ಉದ್ಯಾವರ: ಮುದ್ದು ಕೃಷ್ಣ ಸ್ಪರ್ಧೆ
ಉದ್ಯಾವರ ಆ.21(ಉಡುಪಿ ಟೈಮ್ಸ್ ವರದಿ): ರೋಟರಿ ಕ್ಲಬ್ ಉದ್ಯಾವರ ವತಿಯಿಂದ ಶ್ರೀಕೃಷ್ಣ ಲೀಲೋತ್ಸವದ ಅಂಗವಾಗಿ ಆ.25 ರಂದು ಬೆಳಿಗ್ಗೆ 8.30 ಕ್ಕೆ ಪುಟಾಣಿಗಳಿಗೆ ಮುದ್ದು ಕೃಷ್ಣ ಸ್ಪರ್ಧೆಯನ್ನು ಉದ್ಯಾವರದ ಮೇಲ್ಪೇಟೆಯ ಶ್ರೀಶಂಭುಶೈಲೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಈ ಸ್ಪರ್ಧೆಯು 2 ವಿಭಾಗದಲ್ಲಿ ನಡೆಯಲಿದ್ದು, ಜೂನಿಯರ್ ವಿಭಾಗದಲ್ಲಿ ಒಂದರಿಂದ ಮೂರು ವರ್ಷದ ಮಕ್ಕಳು ಹಾಗೂ ಸೀನಿಯರ್ ವಿಭಾಗದಲ್ಲಿ ಮೂರರಿಂದ ಆರು ವರ್ಷದ ಮಕ್ಕಳು ಭಾಗವಹಿಸ ಬಹುದಾಗಿದೆ. ಪ್ರತೀ ಸ್ಪರ್ಧಿಗೆ 2 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಜೂನಿಯರ್ ವಿಭಾಗದ ಸ್ಪರ್ಧೆ ಮೊದಲು ನಡೆಯಲಿದ್ದು ಬೆಳಿಗ್ಗೆ 9.30ರ ಒಳಗೆ ನೊಂದಾಯಿಸಿಕೊಳ್ಳಬೇಕಾಗಿದೆ.
ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದ್ದು, ಸ್ಪರ್ಧೆಯ ವಿಜೇತರಿಗೆ ಪ್ರಥಮ, ದ್ವಿತೀಯ ತೃತೀಯ ಬಹುಮಾನ ನೀಡಲಾಗುತ್ತಿದೆ. ಹಾಗೂ ತಲಾ 2 ಸಮಾಧಾನಕರ ಬಹುಮಾನ ನೀಡಲಾಗುತ್ತದೆ. ಜೊತೆಗೆ ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೂ ಆಕರ್ಷಕ ಬಹುಮಾನ ನೀಡಲಾಗುತ್ತದೆ.
ನೊಂದಣಿ ಪ್ರಕ್ರಿಯೆ ಬೆಳಿಗ್ಗೆ ಗಂಟೆ 8-15ರಿಂದ 10 ರ ವರೆಗೆ ಮಾತ್ರ ಇರಲಿದ್ದು, ಹೆಚ್ಚಿನ ಮಾಹಿತಿಗಾಗಿ ರೋಟರಿ ಕ್ಲಬ್ ಅಧ್ಯಕ್ಷರಾದ ಜೀವನ್ ಡಿ’ಸೋಜ ಅವರ ಮೊಬೈಲ್ ಸಂಖ್ಯೆ 8746076332, 9964838498, 9980496179 ಸಂಪರ್ಕಿಸುವಂತೆ ಆಯೋಜಕರು ತಿಳಿಸಿದ್ದಾರೆ.