ಆದರ್ಶ ಆಸ್ಪತ್ರೆ ಉಡುಪಿ: ಆ.21 ಫರ್ಟಿಲಿಟಿ ಕ್ಲಿನಿಕ್ ಉದ್ಘಾಟನೆ
ಉಡುಪಿ ಆ.20(ಉಡುಪಿ ಟೈಮ್ಸ್ ವರದಿ): ಆದರ್ಶ ಆಸ್ಪತ್ರೆ ಉಡುಪಿ ಹಾಗೂ ಕ್ಲೌಡ್ ನೈನ್ ಫರ್ಟಿಲಿಟಿ ಆಸ್ಪತ್ರೆ ಬೆಂಗಳೂರು ಇದರ ಜಂಟಿ ಆಶ್ರಯದಲ್ಲಿ ಫರ್ಟಿಲಿಟಿ ಕ್ಲಿನಿಕ್‌ನ ಉದ್ಘಾಟನಾ ಸಮಾರಂಭ ಆ.21 ರಂದು ಬೆಳಿಗ್ಗೆ ಆದರ್ಶ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಉಡುಪಿಯ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ಈ ವೇಳೆ ಆದರ್ಶ ಆಸ್ಪತ್ರೆಯ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರಾದ ಡಾ. ದಮಯಂತಿ, ಡಾ. ರಂಜಿತಾ ಎಸ್ ನಾಯಕ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.